ಅಥಣಿ ಕಾಂಗ್ರೆಸ್ಸಿಗೆ ಕಗ್ಗಂಟಾದ ಬಂಡಾಯ ಅಭ್ಯರ್ಥಿಗಳಿಂದ ಒಕ್ಕೂಟ ರಚನೆ- ಕಾಂಗ್ರೆಸ್ ಅಭ್ಯರ್ಥಿಗೆ ಸಮಸ್ಯೆ ಉಲ್ಬಣ

ಅಥಣಿ ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್ಸಿಗೆ ತೀವ್ರ ತಲೆ ನೋವು ಎದುರಾಗಿದ್ದು, ಬಂಡಾಯವಾಗಿ ಸ್ಪರ್ಧಿಸಿರುವ ಮೂರು ಜನ ಅಭ್ಯರ್ಥಿಗಳು ಒಕ್ಕೂಟ ರಚನೆ ಮಾಡಿದ್ದಾರೆ.

ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ 3 ಜನ ಕಾಂಗ್ರೆಸ್ ಹಿರಿಯರಾದ ಅಥಣಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಎಸ್. ಕೆ. ಬುಟಾಳಿ ಮತ್ತು ಸುರೇಶ ಪಾಟೀಲ ರಿಂದ ಒಕ್ಕೂಟ ರಚಸಿಕೊಂಡಿದ್ದಾರೆ.

ಮೂವರಲ್ಲಿ ಯಾರದರೂ ಒಬ್ಬರು ಅಂತಿಮವಾಗಿ ಕಣದಲ್ಲಿ ಉಳಿಯುವ ಕುರಿತು ಚರ್ಚೆ ನಡೆಸಿದ್ದು, ಬಂಡಾಯ ಅಭ್ಯರ್ಥಿ ಎಸ್. ಕೆ. ಬುಟಾಳಿ ನಿವಾಸದಲ್ಲಿ ಕರೆದ ಸಭೆಯಲ್ಲಿ ಚರ್ಚೆ ಮುಂದಿನ ರೂಪು ರೇಷೆಗಳ ಬಗ್ಗೆ ಚರ್ಚಿಸಿದ್ದಾರೆ. ಮೂವರೂ ಸ್ಪರ್ಧೆ ಮಾಡೋಣ. ಇಲ್ಲವಾದಲ್ಲಿ ಒಬ್ಬರು ಸ್ಪರ್ಧೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳೋಣ ಎಂದು ನಿರ್ಧರಿಸಿದ್ದಾರೆ.

ಈ ಮಧ್ಯೆ ಅಥಣಿ ಕಾಂಗ್ರೆಸ್ ಉಸ್ತುವಾರಿ ಮತ್ತು ಮಾಜಿ ಸಚಿವ ಹಾಗೂ ವಿಜಯಪುರ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದು, ವಿಫಲವಾಗಿದೆ. ನಿನ್ನೆ ತಡರಾತ್ರಿ ಮಾಜಿ ಸಚಿವ ಎಂ. ಬಿ ಪಾಟೀಲ. ಮನವೊಲಿಸುವ ಪ್ರಯತ್ನ ಮಾಡಿದ್ದು, ಯಾವುದೇ ಫಲ ನೀಡಿಲ್ಲ. ಬಂಡಾಯ ಅಭ್ಯರ್ಥಿಗಳ ಮನೆ ಮನೆಗೆ ಭೇಟಿ ನೀಡಿದರೂ ಈ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಅಭ್ಯರ್ಥಿಗಳ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights