ಅಪರಾದಗಳನ್ನು ಕ್ಷಮಿಸುವಂತೆ ಹೇಳಿದ ವಕೀಲೆ ಇಂದಿರಾಗೆ ನಿರ್ಭಯಾ ತಾಯಿ ಟಾಂಗ್

ಅಪರಾಧಿಗಳನ್ನು ಕ್ಷಮಿಸುವಂತೆ ಹೇಳಿದ ಇಂದಿರಾ ಜೈಸಿಂಗ್ ಗೆ ನಿರ್ಭಯಾ ತಾಯಿ ಟಾಂಗ್ ಕೊಟ್ಟಿದ್ದಾರೆ.

ಇಂತವರಿರುವದರಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಟಾಂಗ್ ಕೊಟ್ಟಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಆಶಾ ದೇವಿ, ಇಂದಿರಾ ಜೈಸಿಂಗ್ ಅವರನ್ನು ಸುಪ್ರೀಂಕೋರ್ಟ್ ನಲ್ಲಿ ಅನೇಕ ಬಾರಿ ಭೇಟಿ ಆಗಿದ್ದೇನೆ. ಏಕಾಏಕಿ ಈ ರೀತಿ ಹೇಳಿದ್ದು ನನಗೆ ನಂಬಲು ಆಗುತ್ತಿಲ್ಲ ಎಂದಿದ್ದಾರೆ. ಇಂತವರಿರುವದರಿಂದಾಗಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಕಾರವಾಗಿ ನುಡಿದಿದ್ದಾರೆ.

ಹೌದು… ಮಗಳು ನಿರ್ಭಯಾ ಅತ್ಯಾಚಾರವೆಸಗಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳನ್ನು ಕ್ಷಮಿಸುವಂತೆ ನಿರ್ಭಯಾ ತಾಯಿ ಆಶಾ ದೇವಿಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿರುವುದು ಸದ್ಯ ಟೀಕೆಗೆ ಗುರಿಯಾಗಿದೆ.

ಅಪರಾಧಿಗಳನ್ನು ಗಲ್ಲಿಗೇರಿಸುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದ ಆಶಾದೇವಿ ಅವರಿಗೆ ಇಂದಿರಾ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸೋನಿಯಾ ಗಾಂಧಿಯವರು ತಮ್ಮ ಪತಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದ ನಳಿನಿಗೆ ಕ್ಷಮೆ ನೀಡಿದ್ದಾರೆ. ಅದೇ ರೀತಿ ಆಶಾ ದೇವಿಯವರು ಕೂಡ ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಸಾವಿಗೆ ಕಾರಣರಾದವನ್ನು ಕ್ಷಮಿಸಬೇಕೆಂದು ಹೇಳಿದ್ದಾರೆ.

ಆಶಾ ದೇವಿಯವರ ನೋವು ನನಗೆ ಅರ್ಥವಾಗುತ್ತದೆ, ಆದರೂ ಅವರು ಸೋನಿಯಾ ಗಾಂಧಿಯವರನ್ನು ನೋಡಿ ಕಲಿಯಬೇಕು. ಆಶಾ ದೇವಿಯವರು ಅಪರಾಧಿಗಳನ್ನು ಮರಣದಂಡನೆಯಿಂದ ತಪ್ಪಿಸಬೇಕು, ನಾವು ಆಶಾ ದೇವಿ ಪರ ಇದ್ದೇವೆ, ಆದರೆ ಮರಣದಂಡನೆಯನ್ನು ವಿರೋಧಿಸುತ್ತೇವೆ ಎಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights