ಇಂದು ದೇಶವನ್ನುದ್ದೇಶಿಸಿ ನಮೋ ‘ಮನ್ ಕಿ ಬಾತ್’ : ಲಾಕ್‌ಡೌನ್ ಬಗ್ಗೆ ಮೋದಿ ನಿರ್ಧಾರವೇನು?

ದೇಶದಲ್ಲಿ ಕೊರೊನಾ ಸೋಂಕು ಕಾಲಿಟ್ಟ ಗಳಿಗೆಯಿಂದ ಜನರಲ್ಲಿ ಆತಂಕ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಆರಂಭದಲ್ಲಿ ಪ್ರತಿನಿತ್ಯ ಬೆರಳೆಣಿಕೆಯಲ್ಲಿದ್ದ ಸೋಂಕಿತರ ಸಂಖ್ಯೆ ತದನಂತರದಲ್ಲಿ 6-7 ಸಾವಿರದ ಗಡಿ ದಾಟಿ ದಾಖಲಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಜಾರಿ ಮಾಡಿದ್ದು, ಇಂದಿಗೆ 4.0 ಮುಕ್ತಾಯಗೊಳ್ಳಲಿದೆ. ಇಂದು 5.0 ಲಾಕ್ ಡೌನ್ ಕುರಿತಾಗಿ ಮೋದಿ ಅವರು ‘ ಮನ್ ಕಿ ಬಾತ್’ ರೆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಹೌದು.. ದೇಶಾದ್ಯಂತ ಕೋವಿಡ್ 19 ವೈರಸ್ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಿ ಮೋದಿ  ಮಾರ್ಚ್ 24 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರು. ನಂತರ ಲಾಕ್‌ಡೌನ್ ಮೂರು ಬಾರಿ ವಿಸ್ತರಿಸಲಾಯಿತು. ಇಂದು ಬೆಳಿಗ್ಗೆ 11 ಗಂಟೆಗೆ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದ್ದು ಲಾಕ್ ಡೌನ್ 5 ನೇ ಹಂತ ಮತ್ತು ಅನ್ ಲಾಕ್ 1.0 ಇದರ ಕುರಿತಾಗಿ ಹೆಚ್ಚಿನ ಮಾಹಿತಿ ನೀಡುವ ಸಾಧ‍್ಯತೆಯಿದೆ.

ಈಗಾಗಲೇ ಕೇಂದ್ರ ಸರ್ಕಾರ ಜೂನ್ 1ರಿಂದ ಮುಂದಿನ ಒಂದು ತಿಂಗಳವರೆಗೆ ಎಲ್ಲಾ ಚಟುವಟಿಕೆಗಳನ್ನು ಹಂತಹಂತವಾಗಿ ಪುನಃ ತೆರೆಯಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜೂನ್ 1ರಿಂದ 15ರವರೆಗೆ 5ನೇ ಹಂತದ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ವೇಳೆ ಅಧಿಕ ಸೋಂಕಿತರಿರುವ 13 ಮಹಾನಗರಗಳಲ್ಲಿ ಕಟ್ಟುನಿಟ್ಟಿನ‌ ಕ್ರಮ ಇರಲಿದೆ.

ದೇಶದಲ್ಲಿ 7,964 ಕೋವಿಡ್ -19 ಹೊಸ ಪ್ರಕರಣಗಳು ಪತ್ತೆಯಾಗಿದ್ದು  ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದೇ ಮೊದಲು. ಆ ಮೂಲಕ ಒಟ್ಟಾರೆ ಸೋಂಕಿತರ ಪ್ರಮಾಣ 173,763ಕ್ಕೇರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 265 ಜನ ಸಾವಿನ್ನಪ್ಪಿದ್ದು, ಈವರೆಗೆ ಒಟ್ಟು 4,971 ಜನ ಕೊರೊನಾ ದಿಂದ ಸವನ್ನಪ್ಪಿದ್ದಾರೆ. ಈ ಪೈಕಿ 86,422 ಸಕ್ರಿಯ ಪ್ರಕರಣಗಳಿದ್ದು,  82,370 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದಿನದಿಂದ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಲೇ ಇದ್ದು, ಲಾಕ್ ಡೌನ್ ಸಡಿಲಗೊಳಿಸಿ ಮುಂದುವರೆಸ್ತಾರಾ? ಅಥವಾ ಸಂಪೂರ್ಣವಾಗಿ ಬಂದ ಮಾಡ್ತಾರಾ..? ಹೀಗೆ ಇಂದು ಮೋದಿ ಅವರ ಮನ್ ಕಿ ಬಾತ್ ನಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ ಅನ್ನೋ ಕುತೂಹಲವಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights