ಅಸ್ಸಾಂ : ಮನೆಗಳ ತೆರವಿಗೆ ತೀವ್ರ ವಿರೋಧ – ಪೊಲೀಸ್ ಮತ್ತು ಸ್ಥಳೀಯರ ನಡುವೆ ಸಂಘರ್ಷ!

ಮನೆಗಳ ತೆರವಿಗೆ ವಿರೋಧಿಸಿದ ಸ್ಥಳೀಯರು ಹಾಗೂ ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆದ ಘಟನೆ ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಸೋಮವಾರದಿಂದ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧೋಲ್ಪುರದಲ್ಲಿ ಭೂ ಅತಿಕ್ರಮಣ ಮಾಡಿಕೊಂಡ ಮನೆಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆ ವಾತಾವರಣ ಸೃಷ್ಠಿಯಾಗಿದೆ. ಸ್ಥಳೀಯರು ಹಾಗೂ ಪೊಲೀಸರ ನಡುವೆ ತೀವ್ರ ಸಂಘರ್ಷದಲ್ಲಿ ಒಂಬತ್ತು ಪೊಲೀಸರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

ಧೋಲ್ಪುರದಲ್ಲಿ 4500 ಬಿಘಾದ 800 ಮನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಸ್ಥಳೀಯರು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಸ್ಥಳೀಯರೊಂದಿಗೆ ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಲಾಠಿ ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಈಗ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಎಸ್ಪಿ ಸುಶಾಂತ ಬಿಸ್ವಾ ಶರ್ಮಾ ಹೇಳಿದರು.

ಸ್ಥಳಾಂತರಿಸುವ ಕಾರ್ಯಾಚರಣೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಪೊಲೀಸರ ನೆರವಿನೊಂದಿಗೆ ಕಾರ್ಯಚರಣೆಗೆ ಮುಂದಾಗಿತ್ತು. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪೊಲೀಸರ ನಡುವೆ ಕಲ್ಲು ತೂರಾಟ ಹಾಗೂ ಕೋಲುಗಳಿಂದ ದಾಳಿ ನಡೆದಿದೆ.

ಘರ್ಷಣೆಯ ಸ್ಥಳದಲ್ಲಿದ್ದ ಶ್ರೀ ಶರ್ಮಾ, “ಗಲಾಟೆಯಿಂದಾಗಿ ನಾವು ಪೂರ್ಣ ತೆರವಿಗೆ ಸಾಧ್ಯವಾಗಲಿಲ್ಲ. ನಾವು ನಂತರ ಮೌಲ್ಯಮಾಪನ ಮಾಡುತ್ತೇವೆ. ಸದ್ಯ ಸ್ಥಳದಿಂದ ಹಿಂದಿರುಗುತ್ತಿದ್ದೇವೆ” ಎಂದು ಹೇಳಿದರು.

ಆದರೆ ಸ್ಥಳೀಯರನ್ನು ಹೊಡೆದುರುಳಿಸಿ ಬಗ್ಗೆ ಪ್ರಶ್ನೆ ಮಾಡಿದಾಗ ಶರ್ಮಾ “ಆ ಪ್ರದೇಶವು ದೊಡ್ಡದಾಗಿದೆ. ನಾನು ಇನ್ನೊಂದು ಬದಿಯಲ್ಲಿದ್ದೆ. ನಾನು ದೃಶ್ಯವನ್ನು ನೋಡಿ ನಿರ್ಣಯಿಸುತ್ತೇನೆ” ಎಂದು ಹೇಳಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights