ಸ್ಪೇನ್ ಕ್ಯಾನರಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ : ಬೆಚ್ಚಿಬೀಳಿಸುವ ವಿಡಿಯೋಗಳು ವೈರಲ್!
ಸ್ಪೇನ್ನ ಕ್ಯಾನರಿ ಲಾ ಪಾಲ್ಮಾ ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ವೀಡಿಯೋ ಪ್ರಕಾರ, ಕುಂಬ್ರೆ ವೀಜಾ ಜ್ವಾಲಾಮುಖಿಯಿಂದ ಕಪ್ಪು ಮತ್ತು ಬಿಳಿ ಹೊಗೆ ಹೊರಹೊಮ್ಮಿದ್ದು, ಅಪಾರ ಹಾನಿಯಾಗಿದೆ. ಸ್ಪ್ಯಾನಿಷ್ ಅಧಿಕಾರಿಗಳು ಅಟ್ಲಾಂಟಿಕ್ ದ್ವೀಪವಾದ ಲಾ ಪಾಲ್ಮಾದಿಂದ ನಾಗರಿಕರನ್ನು ಸ್ಥಳಾಂತರಿಸಿದರು. ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
https://twitter.com/yerayvm/status/1440064256179769352?ref_src=twsrc%5Etfw%7Ctwcamp%5Etweetembed%7Ctwterm%5E1440064256179769352%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Ftrending%2Flava-from-la-palma-volcano-swallows-swimming-pool-video-viral-lxk-272426.html
ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ. ಜ್ವಾಲಾಮುಖಿ ಮೊದಲು ಇಲ್ಲಿ ಅನೇಕ ದಿನಗಳಿಂದ ಆಗಾಗ ಸಣ್ಣಸಣ್ಣ ಭೂಕಂಪನ ಆಗುತ್ತಿತ್ತು. ಭೂಕಂಪನ ಸಂಭವಿಸುವ ಸಾಧ್ಯತೆ ಇರುವ ಗ್ರಾಮದ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮವನ್ನು ತೊರೆಯುವಂತೆ ಸೂಚಿಸಲಾಗಿದೆ. ಭಾನುವಾರ ಈ ಪ್ರದೇಶದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ.
ಸ್ಫೋಟದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,ಆದರೆ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಜ್ವಾಲಾಮುಖಿಯಿಂದ ಎದ್ದ ಲಾವಾರಸ ಈ ದಿನದವರೆಗೆ 106 ಹೆಕ್ಟೇರ್ (106 ಎಕರೆ) ಭೂ ಪ್ರದೇಶವನ್ನು ಆವರಿಸಿದೆ. 166 ಮನೆಗಳು, ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಈ ಲಾವಾರಸದ ಪ್ರವಾಹ ಎದುರಿಗೆ ಸಿಕ್ಕ ಗುಡ್ಡ ಬೆಟ್ಟಿಗಳನ್ನು ಪುಡಿ ಮಾಡಿದೆ. ಹರಿವ ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲ ನಾಶಗೊಳಿಸಿದೆ.
ಮೂಖ ಪ್ರಾಣಿಗಳ ರಕ್ಷಣೆ ಕಾರ್ಯವೂ ಕೂಡ ಮಾಡಲಾಗುತ್ತಿದೆ.
ತುರ್ತು ಯೋಜನೆಯ ಪ್ರಕಾರ, ಎಲ್ ಪಾಸೊ, ತಾಜ್‌ಕೋರ್ಟ್ ಮತ್ತು ಲಾಸ್ ಲಾನೋಸ್ ಡಿ ಅರಿಡೆನ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ಈ ಹಿಂದೆ ಸ್ಪೇನ್ ನಲ್ಲಿ 1971 ರಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು.