ಭಾರತದಲ್ಲೂ ಮಿಡತೆಗಳ ಆರ್ಭಟ: ಕರ್ನಾಟಕಕ್ಕಿಲ್ಲ ಭಯ! ಯಾಕೆ ನೋಡಿ

ದಕ್ಷಿಣ ಆಫ್ರಿಕಾದಿಂದ ಹೊರಟು ಗಲ್ಪ್‌ ರಾಷ್ಟ್ರಗಳ ಮರುಭೂಮಿಯನ್ನು ದಾಟಿ, ಪಾಕಿಸ್ತಾನದ ಮೂಲಕ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿರುವ ಡೆಸರ್ಟ್ ಲೊಕಸ್ಟ್ (DESERT LOCUST) ಈಗಾಗಲೇ ಗಡಿಭಾಗದ ರಾಜಸ್ತಾನದಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಇದೀಗ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿರುವ ಈ ಮಿಡತೆಗಳು ಕರ್ನಾಟಕಕ್ಕೂ ದಾಳಿ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಕರ್ನಾಟಕ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೋಟಿ ಸಂಖ್ಯೆಗಳಲ್ಲಿ ಹಿಂಡು ಹಿಂಡಾಗಿ ಚಲಿಸುವ ಈ ಮಿಡತೆಗಳು ಒಮ್ಮೆ ದಾಳಿ ಇಟ್ಟರೆ ಇಡೀ ಹಸಿರನ್ನು ಬಸಿದು ಕುಡಿದು ಬಿಡುತ್ತದೆ. ಇದರಿಂದ ಮನುಷ್ಯನ ಆಹಾರಕ್ಕೂ ತತ್ವಾರ ಉಂಟಾಗುತ್ತದೆ. ಈ ಮಿಡತೆಗಳು ಇದೀಗ ಕರ್ನಾಟಕದ ಬೀದರ್‌ ಜಿಲ್ಲೆಯಿಂದ 510 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ನಾಸಿಕ್ ಹಾಗೂ ನಾಗಪುರ ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ. ಹೀಗಾಗಿ ಕರ್ನಾಟಕಕ್ಕೂ ಇವು ದಾಳಿ ಇಡಲಿವೆ ಎನ್ನಲಾಗುತ್ತಿತ್ತು. ಇದೇ ಕಾರಣಕ್ಕೆ ಬೀದರ್‌ ಜಿಲ್ಲಾಡಳಿತ ಜೈವಿಕ ಕೀಟನಾಶಕವನ್ನು ಸಂಗ್ರಹಿಸಿತ್ತು.

ಆದರೆ, ಈ ಮಿಡತೆಗಳು ಗಾಳಿಯ ದಿಕ್ಕಿಗೆ ಮಾತ್ರ ಚಲಿಸುತ್ತವೆ. ಹೀಗಾಗಿ ಮಹಾರಾಷ್ಟ್ರದಿಂದ ಗಾಳಿಯ ದಿಕ್ಕು ಇದೀಗ ಮಧ್ಯಪ್ರವೇಶದತ್ತ ಬದಲಾದ ಕಾರಣ ಈ ಮಿಡತೆಗಳು ಮಧ್ಯಪ್ರದೇಶದ ಕಡೆಗೆ ಪ್ರಯಾಣ ಬೆಳೆಸಿವೆ ಎನ್ನಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಕರ್ನಾಟಕದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights