ಇದೇ ಭಾನುವಾರದಿಂದ ಬಿಗ್‍ಬಾಸ್ ಸೀಸನ್ 7 ಆರಂಭ : ಸ್ಪರ್ಧಿಗಳ ಪಟ್ಟಿ ಇಲ್ಲಿದೆ….

ಬಿಗ್‍ಬಾಸ್ ಸೀಸನ್ 7 ಇದೇ ಭಾನುವಾರದಿಂದ ಆರಂಭವಾಗಲಿದ್ದು, ಯಾರ್ಯಾರು ಈ ಬಾರಿ `ಬಿಗ್’ಹೌಸ್‍ಗೆ ಬರುತ್ತಿದ್ದಾರೆ ಎನ್ನುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಈಗ ಲಭ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಖ್ಯಾತರಾದವರಿಗೆ ಮಾತ್ರ ಅವಕಾಶವಿದ್ದು, ಈ ಬಾರಿ 17 ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯೊಳಗೆ ಪ್ರವೇಶಿಸಲಿದ್ದಾರೆ.

‘ಬಿಗ್ ಬಾಸ್’ ಕುರಿತಾಗಿ ಸುದೀಪ್ ಮಾತನಾಡಿ, ಶೋ ಬಗ್ಗೆ ಜನರಿಗಿರುವಷ್ಟೇ ಕುತೂಹಲ ನನಗೂ ಇದೆ. ಸ್ಪರ್ಧಿಗಳ ಬಗ್ಗೆ ನಾನು ಕೇಳುವುದಿಲ್ಲ. ತಿಳಿದುಕೊಳ್ಳುವುದಿಲ್ಲ. ನಿರೂಪಣೆ ನನಗೆ ಖುಷಿ ನೀಡುವ ಕೆಲಸವಾಗಿದೆ. ಹಲವು ಕಾರಣಗಳಿಂದಾಗಿ ನನಗೆ ಕೊನೆ ಸೀಸನ್ ಖುಷಿ ಕೊಡಲಿಲ್ಲ ಎಂದು ತಿಳಿಸಿದ್ದಾರೆ.

ಅಂಬರೀಶ್ ನಿಧನದ ನೋವು ಇದ್ದಾಗ ‘ಬಿಗ್ ಬಾಸ್’ ಶೂಟಿಂಗ್ ನಲ್ಲಿ ಭಾಗವಹಿಸಿದ್ದು ಮನಸ್ಸಿಗೆ ಕಸಿವಿಸಿ ತಂದಿತ್ತು. ಹಳೆ ಸೀಸನ್ ಸ್ಪರ್ಧಿಗಳಿಂದ ಈ ಬಾರಿಯ ಸ್ಪರ್ಧಿಗಳು ಪ್ರಭಾವಿತವಾಗುವುದು ಬೇಡ ಎನ್ನುವ ಸಲಹೆ ಸುದೀಪ್ ಅವರದ್ದಾಗಿದೆ.

ಮನೆಯೊಳಗೆ ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಂಡರೆ ಸ್ಪರ್ಧಿಗಳು ರಣತಂತ್ರ ಹೆಣೆಯುವ ಸಾಧ್ಯತೆ ಇದೆ. ಹಾಗಾಗಿ ಸ್ಪರ್ಧಿಗಳ ಹೆಸರನ್ನು ಮೊದಲೇ ಬಹಿರಂಗಪಡಿಸಲಾಗುವುದಿಲ್ಲ. ಸಲ್ಮಾನ್ ಖಾನ್ ಅವರೊಂದಿಗೆ ‘ದಬಾಂಗ್ 3’ ಚಿತ್ರದಲ್ಲಿ ಭಾಗಿಯಾಗಿದ್ದರೂ, ‘ಬಿಗ್ ಬಾಸ್’ ಕುರಿತಾಗಿ ಚರ್ಚೆ ನಡೆಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಬಿಗ್‍ಹೌಸ್‍ನಲ್ಲಿ ಈ ಬಾರಿ ಏನೆಲ್ಲಾ ನಡೆಯುತ್ತೆ? ಸ್ಪರ್ಧಿಗಳು ಯಾರು? ಎನ್ನುವುದನ್ನು ತಿಳಿಯಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸೀಸನ್ 7ರಲ್ಲಿ ಕೃಷಿಕರು ಇದ್ದಾರಾ? ಸ್ವಾಮೀಜಿ ಇದ್ದಾರಾ? ಬಿಗ್‍ಹೌಸ್‍ಗೆ ಹೋಗೋ ಹಿರಿತೆರೆ-ಕಿರಿತೆರೆಯ ಕಲಾವಿದರ್ಯಾರು? ಎನ್ನುವ ಸಂಭಾವ್ಯ ಸ್ಪರ್ಧಿಗಳ ಎಕ್ಸ್‌ಕ್ಲೂಸಿವ್ ಲಿಸ್ಟ್ ಇಲ್ಲಿದೆ.

ಈ ಬಾರಿ ದೊಡ್ಡ ತಾರಾಗಣವೇ ಬಿಗ್ ಹೌಸ್‍ನಲ್ಲಿ ಮಿಂಚಲಿದ್ದಾರೆ. ತುಪ್ಪದ ಬೆಡಗಿ ನಟಿ ರಾಗಿಣಿ, ನಟ ಜೈಜಗದೀಶ್, ಹಾಸ್ಯನಟ ಕುರಿ ಪ್ರತಾಪ್, ಹಾಸ್ಯನಟ ರಾಜು ತಾಳಿಕೋಟೆ, ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ, ನಟಿ ದುನಿಯಾ ರಶ್ಮಿ, ಕಿರುತೆರೆ ನಟಿ ದೀಪಿಕಾ ದಾಸ್(ನಾಗಿಣಿ- ಅಮೃತಾ), ಕಿರುತೆರೆ ನಟಿ ಸುಜಾತಾ(ರಾಧಾರಮಣ- ಸಿತಾರಾ), ನಟ ರಾಹುಲ್(ನೀನ್ಯಾರೆ, ಜಿಗರ್‍ಥಂಡಾ ಮೂವಿ), ಗಾಯಕಿ ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮಿಜಿ, ನಟಿ ರಂಜಿನಿ ರಾಘವನ್(ಪುಟ್ಟ ಗೌರಿ ಮದುವೆ), ನಟ ಪಂಕಜ್ ಎಸ್.ನಾರಾಯಣ್, ಕಿರುತೆರೆ ನಟಿ ಭೂಮಿ ಶೆಟ್ಟಿ(ಕಿನ್ನರಿ), ನಟ ಕಿರಣ್ ರಾಜ್(ಕಿನ್ನರಿ), ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್(ಕಾಸರಗೋಡು), ನಿರೂಪಕಿ ಚೈತ್ರ ವಾಸುದೇವನ್, ಚಂದನ ಅನಂತಸ್ವಾಮಿ.

ಒಟ್ಟಿನಲ್ಲಿ ಈ ಬಾರಿ ಅದ್ಯಾರು ಪ್ರೀತಿ ಬಲೆಗೆ ಬೀಳುತ್ತಾರೋ..? ಅದ್ಯಾರು ಕಿತ್ತಾಡಿಕೊಳ್ತಾರೋ..? ಅದ್ಯಾವ ಪಾಠ ಕಲಿತಾರೆ..? ಕಲಿಸ್ತಾರೆ ಅನ್ನೋದೇ ಇಂಟ್ರಸ್ಟಿಂಗ್ ವಿಚಾರ. ಯಾವುದಕ್ಕೆ ನಾವುಗಳು ಕೊಂಚ ದಿನ ಕಾಯಲೇಬೇಕು..

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights