ಇದೇ ವಾರ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಯುಎಸ್ ಸಜ್ಜು : ಟ್ರಂಪ್ ಸೂಚನೆ

ಕೊರೊನಾ ವೈರಸ್ ಹರಡಲು ಪ್ರಮೂಖವಾಗಿ ಚೀನಾನೇ ಕಾರಣ ಎಂದು ಆರೋಪ ಮಾಡುತ್ತಿದ್ದ ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ವಿಶ್ವರ ಆರೋಗ್ಯ ಸಂಸ್ಥೆ ಕೂಡ ಚೀನಾದ ಗುಣಗಾನ ಮಾಡುತ್ತಿದೆ. ಹೀಗಾಗಿ ಚೀನಾ ವಿರುದ್ಧ ಕಿಡಿಕಾರುತ್ತಿರುವ ಅಮೆರಿಕಾ  ಈ ವಾರ ಹಾಂಗ್ ಕಾಂಗ್ ಚೀನಾ ವಿರುದ್ಧ  ಕ್ರಮ ಕೈಗೊಳ್ಳಲಿದೆ ಎಂದು ಟ್ರಂಪ್ ಸೂಚನೆ ಕೊಟ್ಟಿದ್ದಾರೆ.

ಹಾಂಗ್ ಕಾಂಗ್ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ಹೇರುವ ಪ್ರಯತ್ನದ ಬಗ್ಗೆ ಈ ವಾರ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಮಾತ್ರ ಟ್ರಂಪ್ ಗುಪ್ತವಾಗಿರಿಸಿದ್ದಾರೆ.

ಹಾಂಗ್ ಕಾಂಗ್‌ನಲ್ಲಿ ಚೀನಾ ತನ್ನ ಕ್ರಮಗಳ ಬಗ್ಗೆ ನಿರ್ಬಂಧ ಹೇರಲಿದ್ದೀರಾ ಎಂದು ಕೇಳಿದಾಗ, ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಹೀಗೆ ಹೇಳಿದರು: “ನಾವು ಈಗ ಏನಾದರೂ ಮಾಡುತ್ತಿದ್ದೇವೆ. ನೀವು ಅದನ್ನು ತುಂಬಾ ಆಸಕ್ತಿದಾಯಕವೆಂದು ಭಾವಿಸುತ್ತೀರಿ. ಆದರೆ ನಾನು ಇಂದು ಇದರ ಬಗ್ಗೆ ಮಾತನಾಡುವುದಿಲ್ಲ. ” ಎಂದಿದ್ದಾರೆ.

” ವಾರದ ಅಂತ್ಯದ ಮೊದಲು ಇದು ನೀವು ಕೇಳುವ ವಿಷಯವಾಗಬೇಕು. ಬಹಳ ಶಕ್ತಿಯುತವಾಗಿ ನಾನು ಯೋಚಿಸುತ್ತಿದ್ದೇನೆ” ಎಂದು ಟ್ರಂಪ್ ಎರಡನೇ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ. ಈ ಮೂಲಕ ಚೀನಾದ ವಿರುದ್ಧ ಕ್ರಮ ಕೈಗೊಳ್ಳಲು ಯುಸ್ ಸಜ್ಜುಗೊಂಡಿದೆ ಎನ್ನುವ ಸೂಚನೆ ಕೊಟ್ಟಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights