ಆಪರೇಷನ್​ ಥಿಯೇಟರ್​ನಲ್ಲಿ ರೋಗಿಯ ಮೇಲೆ ನಕಲಿ ವೈದ್ಯನಿಂದ ಅತ್ಯಾಚಾರ..!

ಜನರ ಜೀವ ಕಾಪಾಡುವ ಕಣ್ಣಿಗೆ ಕಾಣುವ ದೇವರು ಅಂದರೆ ಅದು ವೈದ್ಯರು. ಇಂಥಹ ವೈದ್ಯರ ವೇಷ ಹಾಕಿಕೊಂಡ ಕಾಮುಕನೊಬ್ಬ ಮಹಿಳಾ ರೋಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಹೌದು… ಚಿಕಿತ್ಸೆ ನೀಡುವ ನೆಪದಲ್ಲಿ ನಕಲಿ ವೈದ್ಯನೊಬ್ಬ ಆಪರೇಷನ್​ ಥಿಯೇಟರ್​ನಲ್ಲಿ ಮಹಿಳಾ ರೋಗಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹೆಂಡತಿಯನ್ನು ಪಾಕಿಸ್ತಾನದ ಡೇರಾ ಘಾಜಿ ಖಾನ್‌ನ ಬಾಲ್ಕ್ ಸರ್ವಾರ್ ನಗರದ ಖಾಸಗೀ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಈ ಘಟನೆ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ಸೇರಿದ ಪತ್ನಿಯ ಮೇಲೆ ಮೊಹಮ್ಮದ್ ಇಮ್ರಾನ್ ಎಂಬಾತ ಚಿಕಿತ್ಸೆ ನೀಡುವ ನೆಪದಲ್ಲಿ ಆಪರೇಷನ್ ಥಿಯೇಟರ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ವೇಳೆ ಮಹಿಳೆ ಪ್ರಜ್ಞೆ ತಪ್ಪಿದ್ದಳು ಎನ್ನಲಾಗಿದೆ.

ಪ್ರಜ್ಞೆ ಬಂದ ಬಳಿಕ ಮಹಿಳೆ ಕಿರುಚಾಡಿದ್ದು ಪತಿ ಮತ್ತು ಸಂಬಂಧಿಕರು ಸಹಾಯಕ್ಕಾಗಿ ಧಾವಿಸಿದ್ದಾರೆ. ನೊಂದ ಮಹಿಳೆ ಕಾಮುಕನ ಬಗ್ಗೆ ಮಾಹಿತಿ ನೀಡಿದ್ದು ಆರೋಪಿ ವಿರುದ್ಧ ದೂರು ದಾಖಲಾಗಿದೆ. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿ ಮೊಹಮ್ಮದ್ ಇಮ್ರಾನ್ ನನ್ನು ಬಂಧಿಸಲಾಗಿದೆ.

ಬಂಧಿತನನ್ನು ವಿಚಾರಣೆ ವೇಳೆ ಈತನ ಹೆಸರಿ ಯಾವುದೇ ವೈದ್ಯ ಆಸ್ಪತ್ರೆಯಲ್ಲಿ ಇಲ್ಲ ಎಂದು ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights