ಏ.14ಕ್ಕೆ ಲಾಕ್ ಡೌನ್ ತೆರವಾಗುತ್ತಾ..? ಇದಕ್ಕೆ ದೇಶ ಹೇಗೆ ಸಿದ್ಧವಾಗಿದೆ..?

ಇಡೀ ವಿಸ್ವವೇ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿರೋದ್ರಿಂದ ಲಾಕ್ ಡೌನ್ ಮುಕ್ತಾಯವಾಗುತ್ತಾ? ಅಥವಾ ಮುಂದುವರೆಯುತ್ತಾ? ಇದಕ್ಕೆ ಸಾಕಷ್ಟು ಜನ ಗೊಂದಲಕ್ಕೊಳಗಾಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು ಹಾಗೂ ಸಾವು ನೋವುಗಳನ್ನ ಆಧರಿಸಿ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಲಾಕ್ ಡೌನ್ ಹಿನ್ನಲೆ ದೇಶದ ಾರ್ಥಕ ವ್ಯವಸ್ಥೆ ಸಂಪೂರ್ನವಾಗಿ ಕುಸಿದಿದ್ದು. ಜನ ಒಂದು ಹೊತ್ತಿನ ೂಟಕ್ಕೂ ಪರದಾಡುವಂತಹ ಸ್ಥಿತಿ ಇದೆ. ಹೀಗಾಗಿ ಲಾಕ್ ಡೌನ್ ತೆರವಾಗುವ ಸಾಧ್ಯತೆಯೂ ಇದೆ. ಆದರೆ ರಾಜಕೀಯ ಮೂಲಗಳು ಹೇಳುವ ಪ್ರಕಾರ ದೇಶದ ಪ್ರಧಾನಿ ಈ ಬಗ್ಗೆ ದೇಶದ ಎಲ್ಲಾ ಸಿಎಂಗಳ ಜೊತೆಗೆ ಚರ್ಚಿಸಿದ್ದಾರೆ. ಅದರಂತೆ ಲಾಕ್ ಡೌನ್ ಕಡಿತಗೊಳಿಸುವುದಾ? ಬೇಡವಾ? ಅನ್ನೋದು ನಿರ್ಧಾರ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಹಾಗಂತ ಜನ ಸಾಮಾನ್ಯರು ಏಪ್ರಿಲ್ 14 ಕ್ಕೆ ಲಾಕ್ ಡೌನ್ ಮುಗಿಯುತ್ತೆ, ನಾವೆಲ್ಲಾರೂ ಅಪಾಯದಿಂದ ಸಂಪೂರ್ಣವಾಗಿ ಸೇಫ್ ಆಗಿದ್ದೇವೆ ಅಂದುಕೊಳ್ಳಬೇಡಿ. ಯಾಕೆಂದ್ರೆ ಏಪ್ರಿಲ್ 14 ಕ್ಕೆ ನಾವು ಅಪಾಯ ಮುಕ್ತರಾಗುವುದಿಲ್ಲ. ಅಪಾಯ ಅಲ್ಲಿಂದಲೇ ಶುರುವಾಗುತ್ತದೆ. ಲಾಕ್ ಡೌನ್ ನಂತರ ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.

ಹಾಗಾದ್ರೆ ಮುಂದಿನ ಒಂದು ತಿಂಗಳು ನೀವು ಹೇಗಿರಬೇಕು ಗೊತ್ತಾ…? ಇಡೀ ದೇಶದ ಕಣ್ಣು ಏ 14 ರಂದು ನೆಟ್ಟಿದೆ. ಎಲ್ಲರಿಗೂ ಲಾಖ್ ಡೌನ್ ತೆರೆವಾಗುತ್ತಾ..? ಅಥವಾ ಮುಂದುವರೆಯುತ್ತಾ..? ಅನ್ನೋ ಗೊಂದಲ ಶುರುವಾಗಿದೆ. ಇನ್ನೂ ಒಂದು ತಿಂಗಳು ಜನ ಹೇಗಿರಬೇಕು..? ಲಾಕ್ ಡೌನ್ ನಂತರ ಸರ್ಕಾರ ಕೊರೊನಾ ತಡೆಗೆ ಹೇಗೆ ಸಿದ್ದವಾಗಿದೆ? ಇವೇ ಯೋಚನೆಗಳಾಗಿ ಉಳಿದುಬಿಟ್ಟಿವೆ.

ಕೊರೊನಾ ಒಂದು ಸಾಂಕ್ರಾಮಿಕ ರೋಗ. ಒಂದು ಕಿಲೋಮೀಟರ್ ದೂರವಿದ್ದರೂ ಡೇಂಜರ್ . ಕೆಮ್ಮಿದ್ರೂ ಸೀನಿದ್ರು ಕೊರೊನಾ ಕಾಡಿಗಿಚ್ಚಿನಂತೆ ಹಬ್ಬುತ್ತಿದೆ. ಖ್ಯಾತ  ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ ಹೇಳೋದೇನು ಗೊತ್ತಾ..? ಜನರು ಸಾಮಾಜಿಕ ಅಂತರವನ್ನು ಶಿಸ್ತಾಗಿ ಕಾಯ್ದುಕೊಳ್ಳಬೇಕು ಎಂದಿದ್ದಾರೆ. ಅಧಿಕಾರಿಗಳು, ಪೊಲೀಸರು ಕಷ್ಟದ ಸಮಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಏ 14 ಬಳಿಕ ಜನ ಮೈಮರೆಯುವಹಾಗಿಲ್ಲ. ಪರಸ್ಪರ ಅದೆಷ್ಟು ಅಂತರ ಕಾಯ್ದುಕೊಳ್ಳುತ್ತೀರೋ ಅಷ್ಟು ಒಳ್ಳೆದು.

ಲಾಕ್ ಡೌನ್ ತೆರವು ಗೊಳಿಸಲು ಸರ್ಕಾರ ಸಿದ್ಧವಾಗಿದೆ. ಅದು ಯಾವ ರೀತಿ ಗೊತ್ತಾ..? ಕೊರೊನಾ ಬಂದು ಅದೆಷ್ಟೋ ದೇಶಗಳಲ್ಲಿ ಲಾಕ್ ಡೌನ್ ಮುಂದುವರೆದಿದೆ. ಲಾಕ್ ಡೌನ್ ಕಡಿತಗೊಳಿಸಿದ್ರೂ ಪೂರ್ಣವಾಘಿ ಕಡಿತಗೊಳಿಸಿಲ್ಲ. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ನಮ್ಮ ದೇಶ ಚೀನಾ ದೇಶಕ್ಕಿಂತ ಅದ್ವಾನ ಆಗೋದ್ರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ ನಮ್ಮ ದೇಶದಲ್ಲಿ ಈ ಬಗ್ಗೆ ಚಿಂತನೆ ನಡೆಯುತ್ತಿದೆ. ಲಾಕ್ ಡೌನ್ ಒಂದು ವೇಳೆ ಕಡಿತಗೊಳಿಸಿದರೂ ಸೋಂಕುಪೀಡಿತರು ಹೆಚ್ಚಾಗಿರುವ ರಾಜ್ಯಗಳನ್ನು ಹೊರತುಪಡಿಸಿ ಲಾಕಡೌನ್ ಕಡಿತಗೊಳಿಸಬಹುದು ಎಂದೆಲ್ಲಾಗುತ್ತಿದೆ. ಜೊತೆಗೆ ಇದರಿಂದ ಆಹಾರ ಕೊರತೆಯನ್ನು ನೀಗಿಸಲು ಸರ್ಕಾರ ಚಿಂತನೆ ನಡೆಸಿದೆ. ನಮ್ಮ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಕಡಿತಗೊಳಿಸಿದೇ ಯಾವ ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಪೀಡಿತರಿದ್ದಾರೋ ಅಂಥ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಆಲೋಚನೆಯಲ್ಲಿದೆಯಂತೆ ಸರ್ಕಾರ.

ಬೇಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಬೀದರ್ ಹೀಗೆ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಸೋಂಕಿತರು ಹೆಚ್ಚಾಗಿರುವುದರಿಂದ ಇಲ್ಲಿ ಲಾಕ್ಡೌನ್ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಹೀಗಾದ್ರೆ ದುಡುಮೆ ಹೇಗೆ ಸಾಧ್ಯ..? ಜೀವನ ನಡೆಸೋದು ಹೇಗೆ ಅನ್ನೋ ಅನುಮಾನ ಶುರುವಾಗಬಹುದು. ಇದಕ್ಕೂ ಸರ್ಕಾರ ಒಂದು ಪ್ಲಾನ್ ಮಾಡಿಕೊಂಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರಿಗೆ ಆಹಾರ ಕೊರತೆ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ 20 ಕೆಜಿ ಅಕ್ಕಿ,  40 ಗೋದಿ, ಕಾರ್ಡ್ ಹೊಂದಿರದವರಿಗೂ ಅಕ್ಕಿ – ಗೋಧಿ ಕೊಡಲು ಸರ್ಕಾರ ನಿರ್ಧರಿಸಿದೆ. ಹೀಗೆ ಸರ್ಕಾರ ಮುಂದಿನ ದಿನಗಳಿಗೆ ಸಜ್ಜುಗೊಳ್ಳುತ್ತಿದೆ.

ಸರ್ಕಾರ ಅದ್ಯಾವ ಕ್ರಮ ಕೈಗೊಂಡರೂ, ನಿಯಮ ಜಾರಿಗೇ ತಂದರೂ ಕೊರೊನಾ ತಡೆಗಟ್ಟುವಲ್ಲಿ ಜನ ಮೈಮರೆತರೆ ಅಪಾಯ ಮಾತ್ರ ತಪ್ಪಿದ್ದಲ್ಲ. ಹೀಗಾಗಿ ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಕ್ತಯಗೊಂಡರೆ, ಮನೆ ಬಿಟ್ಟು ಹೊರಬರುವ ಮುನ್ನ ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಒಳ್ಳೆಯದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights