ಕರ್ನಾಟಕ ಲಾಕ್ ಡೌನ್ : ಅನಗತ್ಯವಾಗಿ ಓಡಾಡುತ್ತಿರುವವರ ಮೇಲೆ ಲಾಠಿಚಾರ್ಜ್..!

ಮಾರಕ ಕೊರೊನಾ ಸೋಂಕು ತಡೆಗೆ ಸರ್ಕಾರ ಏನೆಲ್ಲಾ ದಿಟ್ಟ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸಿದರೂ ಜನ ಮನೆಬಿಟ್ಟು ಹೊರಬರುತ್ತಿದ್ದಾರೆ. ಹೀಗಾಗಿ ಕೆಲವೆಡೆ ಪೊಲೀಸರ್ ಲಾಟಿ ಚಾರ್ಜ್ ಮಾಡಿ ಜನರನ್ನು ಮನೆಗೆ ಕಳುಹಿಸಿಕೊಡುತ್ತಿದ್ದಾರೆ.

ಹೌದು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಹೀಗೆ ಎಗ್ಗಿಲ್ಲದೇ ಮನುಷ್ಯನ ದೇಹ ಸೇರುತ್ತಿರುವ ಸೋಂಕು ತಡೆಗಟ್ಟಲು ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಂಡರು ಜನ ಮಾತ್ರ ರಾಜರೋಷವಾಗಿ ಓಡಾಡುತ್ತಿರವುದು ಕಂಡುಬಂದಿದೆ. ಇದರಿಂದ ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪಟ್ಟು ಅನ್ನೋ ಹಾಗೆ ಪೊಲೀಸರು ಪುಡಾರಿಗಳ ಮೇಲೆ ಲಾಠಿಚಾರ್ಜ್ ಮಾಡಲಾಗುತ್ತಿದೆ.

ಕೆಲವೆಡೆ ಕೆಲವರು ಉದ್ದಡತನ ಮೆರೆಯುತ್ತಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಚಿಕ್ಕಬಳ್ಳಾಪುರ, ಮೈಸೂರು, ಅನೇಕಲ್ ನಲ್ಲಿ ಬೆಂಗಳೂರಿನಿಂದ ಹೊರಹೋಗುತ್ತಿರುವುದು, ನಗರ ಪ್ರವೇಶ ಮಾಡುವವರ ಸಂಖ್ಯೆ ಹೆಚ್ಚಾಗಿ ನಡೆಯುತ್ತಿದೆ. ಲಾಕ್ ಡೌನ್ ಮಾಡಲಾಗಿದ್ದರೂ ಜನ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಇರಾನ್ ನಲ್ಲಿ ನಾವು ಸೋಂಕು ಹರಡುವುದರಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಆದರೆ ಜನ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಬದುಕಿದ್ರೆ ಏನಾದ್ರು ಮಾಡಿ ಜೀವನ ಮಾಡಬಹುದು. ಆದರೆ ಜೀವನ ಮಾಡಬೇಕು ಅಂತ ಹೊರಬಂದು ಪ್ರಾಣಕ್ಕೆ ಕುತ್ತು ತಂದುಕ್ಕೊಳ್ಳುವುದು ದಡ್ಡರ ಲಕ್ಷಣ. ಇದರಿಂದ ಹೊರಬಂದ ವ್ಯಕ್ತಿ ಮಾತ್ರ ಅಲ್ಲ ಆತನ ಸ್ನೇಹಿತರು, ಕುಟುಂಬಸ್ಥರು, ಸ್ಥಳೀಯರೂ ಸಂಕಷ್ಟದಲ್ಲಿ ಸಿಲುಕುವಂತಾಗುಬೇಕಾಗುತ್ತದೆ.

ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಿದೆ. ಹೀಗೆ ಬೇಕಾಬಿಟ್ಟಿ ಓಡಾಡುವಂತವರ ವಿರುದ್ಧ ಸ್ಥಳೀಯರೇ ಪಾಠ ಕಲಿಸಬೇಕು. ತಿಳಿಹೇಳಬೇಕಿದೆ. ಯಾಕೆಂದ್ರೆ ಎಲ್ಲಾ ಸಮಯಕ್ಕೂ ಪೊಲೀಸರೇ ನಮ್ಮ ರಕ್ಷಣೆ ಮಾಡಬೇಕೆಂದಿಲ್ಲ. ಸ್ವತ: ನಾವೇ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಆನಿಟ್ಟಿನಲ್ಲಿ ಕೊರೊನಾ ವಿರುದ್ಧ ಎಲ್ಲರೂ ಹೋರಾಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights