ಕಾಫಿನಾಡಲ್ಲಿ ಮನಕಲಕುವ ಘಟನೆ : ಸ್ನೇಹಿತನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಕುರಿ

ಯಾರಾದ್ರು ಸಂಬಂಧಿಕರಾಗಲಿ, ಸ್ನೇಹಿತರಾಗಲಿ, ಹತ್ತಿರದವರಾಗಿಲಿ ಅಕಾಲಿಕ ಮರಣ ಹೊಂದಿದರೆ ಅಂಥವರ ಕೊನೆ ಮುಖವನ್ನ ನೋಡೋದಕ್ಕೆ ಹೋಗದವರು ಸಮಾಜದಲ್ಲಿ ತುಂಬಾ ಜನ ಇದ್ದಾರೆ. ಇಂಥವರ ನಡುವೆ ಕೆಲವೊಂದು ಸಾಕು ಪ್ರಾಣಿಗಳು ನಮಗೆ ಪಾಠ ಕಲಿಸುತ್ತವೆ. ಹೌದು… ಕಾಫಿನಾಡಲ್ಲಿ ಇಂಥಹ ಮನಕಲಕುವ ಘಟನಯೊಂದು ನಡೆದಿದೆ. ಪ್ರಾಣಿಗಳಿಗೆ ಮನುಷ್ಯರಿಗಿಂತ ಅಧಿಕವಾಗಿ ಪ್ರೀತಿ ಇರುತ್ತದೆ ಅನ್ನೋದಕ್ಕೆ ಇಲ್ಲೊಂದು ಸಾಕು ಪ್ರಾಣಿ ಸಾಕ್ಷಿಯಾಗಿದೆ.

ಸ್ನೇಹಿತನ ಅಂತ್ಯ ಸಂಸ್ಕಾರದಲ್ಲಿ  ಕುರಿಯೊಂದು ಭಾಗಿಯಾದ ಘಟನೆ ಚಿಕ್ಕಮಗಳೂರಿನ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಮೀನು ವ್ಯಾಪಾರಿ ಹುಸೇನಬ್ಬ-ಕುರಿ ಕ್ಲೋಸ್ ಫ್ರೆಂಡ್ಸ್. ಹುಸೇನಬ್ಬ ಪಕ್ಕದ ಮನೆಯವರ ಕುರಿ ಯಾವಾಗಲು ಜೊತೆಯೇ ಇರುತ್ತಿದ್ದರು. ಆದರೆ ನಿನ್ನೆ ಹುಸೇನಬ್ಬ ಹೃದಯಾಘಾತದಿಂದ ಮೃತರಾಗಿದ್ರು. ಇದಕ್ಕೆ ಮನನೊಂದ ಕುರಿ ಮುಂಜಾನೆವರೆಗೂ ಜೊತೆಗಿದ್ದು ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿದೆ.

ಕುರಿಯ ಪ್ರೀತಿ ಕಂಡು ಸ್ಥಳಿಯರಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights