ಕಿಲ್ಲರ್ ಕೊರೊನಾ – ಕರ್ನಾಟಕದಲ್ಲಿ ಕೊರೊನಾ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ..

ಮಹಾಮಾರಿ ಕೊರೊನಾ ಹರಡುತ್ತಿರುವ ಬೆನ್ನಲ್ಲೇ ಕರ್ನಾಟಕ ಲಾಕ್ ಡೌನ್ ಮಾಡಲಾದ ಪರಿಣಾಮ ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ಕೊರೊನಾ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

ಹೌದು… 2 ತಿಂಗಳ ಮಾನವ ದಿನಗಳ ಬಾಬ್ತು ಮುಂಗಡ ಪಾವತಿಸೋದು. ಬಡವರ ಬಂಧು ಸಾಲ ಮನ್ನ ಮಾಡುವುದು. 21 ಲಕ್ಷ ಕಟ್ಟಡ ಕಾರ್ಮಿಕರಿಗೆ ಪ್ರತಿ ಒಬ್ಬರಿಗೂ ಒಂದು ತಿಂಗಳಿಗೆ ಒಂದು ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಕೊರೊನಾ ಹರಡುವ ಭೀತಿಯಲ್ಲಿ ಕರ್ನಾಟಕ ಲಾಕ್ ಡೌನ್ ಮಾಡಿದ್ದಕ್ಕೆ ತರಕಾರಿ, ಟೀ, ಬೀದಿ ಬದಿ ವ್ಯಾಪಾರಿಗಳಿಗೆ ದಿನಗೂಲಿ ಇಲ್ಲದೇ ತೊಂದರೆ ಅನುಭವಿಸುವಂತಾಗಿತ್ತು. ಇದರಿಂದ ಜನ ಮನೆ ಬಿಟ್ಟು ಹೊರಬಂದು ವೈರಸ್ ಎಲ್ಲೆಡೆ ಹರಡುವ ಭೀತಿಯಿಂದ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಜೊತೆಗೆ ಬಡವರಿಗೆ ಸಾಮಾಜಿಕ ಭದ್ರತೆ ಪಿಂಚಣಿಯನ್ನು 2 ತಿಂಗಳ ಮುಂಗಡು ನೀಡಲು ತೀರ್ಮಾನಿಸಲಾಗಿದೆ. ಅದಲ್ಲದೇ 2 ತಿಂಗಳ ರೇಷನ್ ತತಕ್ಷಣ ಮುಂಗಡವಾಗಿ  ನೀಡಲಾಗುವುದು. ಎರಡು ತಿಂಗಳ ಮುಂಗಡ ಪಡಿತರ ನೀಡಲಾಗುವುದು.

ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ವಿಚಾರದಲ್ಲಿ ಕಾಳಜಿ ತೋರಿದೆ. ದಿನಗೂಲಿಯ ಆಧಾರದ ಮೇಲೆ ನಡೆಯುವಂತಹ ಕೆಲಸಕ್ಕೆ ಕಡಿವಾಣ ಬಿದ್ದ ಕಾರಣ ದಿನದೂಟಕ್ಕೆ ಏನು ಮಾಡುವುದು ಎನ್ನುವ ಪ್ರಶ್ನೆ ಎದುರಾಗಿತ್ತು. ಕೆಲಸ ಮನೆಯಲ್ಲಿ ಮಾಡಿ ಸಂಬಳ ಪಡೆದುಕೊಳ್ಳಿ ಎಂದು ಹೇಳುವುದು ಸುಲಭ. ಆದರೆ ಕಟ್ಟಡ ಕಾರ್ಮಿಕರಿಗೆ ಇದು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1 ಸಾವಿರ ರೂಪಾಯಿ ನೀಡಲು ಸರ್ಕಾರ ತೀರ್ಮಾನಿಸಿದೆ.

ವಿಧಾನಸಭೆಯಲ್ಲಿ ಕೊರೊನಾ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ, ಸಿಟಿ ಖಾಲಿ ಖಾಲಿ ಇದೆ ಎಂದು ಎಲ್ಲೂ ಓಡಾಡಬೇಡಿ. ಸರ್ಕಾರದ ಜೊತೆಗೆ ನಿಮ್ಮ ಜವಬ್ದಾರಿಯೂ ಇದೆ.ಕೊರೊನಾ ಓಡಿಸಲು ಎಲ್ಲರೂ ಕೈಜೋಡಿಸೋಣ. ರಾಜ್ಯದ ಎಲ್ಲಾ ಜನರು ಒಂದಾಗಬೇಕಿದೆ ಎಂದು ಮನವಿ ಮಾಡಿದ್ದಾರೆ.

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights