ಕೊರೊನಾ ಎಫೆಕ್ಟ್ : ಎಐಟಿಎಗೆ ಕೋಟಿ ಕೋಟಿ ನಷ್ಟ : ಲಕ್ಷಾಂತರ ಜನರಿಗೆ ಕಾಡಲಿದೆ ನಿರುದ್ಯೋಗ ಸಮಸ್ಯೆ!
ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿದೆ. ಲಕ್ಷಾಂತರ ಜನ ಕೆಲಸ ಕಳೆದುಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಭಾರತೀಯ ವಿಮಾನ ಸಂಸ್ಥೆಗಳು ಹೊರತಾಗಿಲ್ಲ. ಲಾಕ್ ಡೌನ್ ನಿರ್ಬಂಧನೆಗಳಿಂದಾಗಿ ಈ ವರ್ಷ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ 1,122 ಕೋಟಿ ಡಾಲರ್ ನಷ್ಟವಾಗಿದೆ. 29 ಲಕ್ಷಕ್ಕೂ ಅಧಿಕ ಜನರು ನಿರುದ್ಯೋಗಿಗಳಾಗುತ್ತಾರೆ.
ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಎಐಟಿಎ) ಇಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪ್ರಯಾಣಿಕರ ವಿಮಾನಯಾನ ಸೇವೆಯ ಮೇಲೆ ಮೂರು ತಿಂಗಳ ನಿರ್ಬಂಧ ಹೇರಿದರೆ, ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. 2019 ಕ್ಕೆ ಹೋಲಿಸಿದರೆ, ದೇಶದಲ್ಲಿ ಪ್ರಯಾಣಿಕರ ಸಂಖ್ಯೆ 8.98 ಕೋಟಿಗಳಷ್ಟು ಇಳಿಯುತ್ತದೆ, ಅಂದರೆ ಸುಮಾರು 47 ಪ್ರತಿಶತ ಕಡಿತವಾಗುತ್ತದೆ. ಇದರಿಂದ ವಿಮಾನಯಾನ ಕಂಪನಿಗಳಿಗೆ 1,122.1 ಕೋಟಿ ಡಾಲರ್ ನಷ್ಟವಾಗಲಿದ್ದು, 29,32,900 ಜನರ ಉದ್ಯೋಗಕ್ಕೆ ಕತ್ತರಿ ಬೀಳಲಿದೆ. ಎಂದು ಸೂಚಿಸಿದೆ. ದಲ್ಲಿ
ಏಷ್ಯಾ-ಪೆಸಿಫಿಕ್ ಪ್ರದೇಶಕ್ಕಾಗಿ ಬಿಡುಗಡೆಯಾದ ವರದಿಯು ಭಾರತಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗಲಿದೆ. ಆದಾಯ ನಷ್ಟದ ವಿಷಯದಲ್ಲಿ ಭಾರತವು ಜಪಾನ್ ಮತ್ತು ಆಸ್ಟ್ರೇಲಿಯಾದ ನಂತರ ಮೂರನೇ ಸ್ಥಾನದಲ್ಲಿದೆ. ವಿಮಾನಯಾನ ಆದಾಯವು 2,200 ಕೋಟಿ ಮತ್ತು ಆಸ್ಟ್ರೇಲಿಯಾದಲ್ಲಿ 1,400 ಕೋಟಿ ಡಾಲರ್ ಗಿಂತಲೂ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಐಟಿಎ ಈ ಹಿಂದೆ ಏಪ್ರಿಲ್ 14 ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಪ್ರಯಾಣಿಕರ ಸಂಖ್ಯೆ ಶೇಕಡಾ 36 ರಷ್ಟು ಕುಸಿಯುತ್ತದೆ, ಇದರಿಂದಾಗಿ 884 ಮಿಲಿಯನ್ ಡಾಲರ್ ಆದಾಯ ನಷ್ಟ ಮತ್ತು 22.47 ಲಕ್ಷ ಜನರ ಉದ್ಯೋಗ ನಷ್ಟವಾಗಲಿದೆ ಎಂದು ಸೂಚಿಸಿತ್ತು.
ಹಿಂದಿನ ವರದಿಯಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ಏಷ್ಯಾ-ಪೆಸಿಫಿಕ್ ಪ್ರದೇಶದ ಐಟಾ ಉಪಾಧ್ಯಕ್ಷ ಕಾನ್ವರ್ಸ್ ಕ್ಲಿಫರ್ಡ್ ಹೇಳಿದ್ದಾರೆ. ವಿಮಾನಯಾನ ಕಂಪನಿಗಳು ತಮ್ಮ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿವೆ. ಸರ್ಕಾರಗಳು ಅವರಿಗೆ ಸಹಾಯ ಮಾಡದಿದ್ದರೆ ಮತ್ತು ಅನೇಕ ವಿಮಾನಯಾನ ಸಂಸ್ಥೆಗಳು ನಿಲ್ಲಿಸಬಹುದು.

