FACT CHECK | ಇಂದಿರಾ ಗಾಂಧಿಯವರ ನೈಜ ಚಿತ್ರಗಳು ಎಂದು AI ನಿಂದ ರಚಿಸಿದ ಫೋಟೊ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಂದ ಅತೀ ಹೆಚ್ಚು ಆರೋಪಗಳನ್ನು ಎದುರಿಸಿದವರೆಂದರೆ ಇಂದಿರಾ ಮತ್ತು ನೆಹರು ಈ ಇಬ್ಬರು ಮಾಜಿ ಪ್ರಧಾನಿಗಳು ಸಾವನಪ್ಪಿ ಎಷ್ಟೋ ವರ್ಷಗಳಾದರೂ ಇವರ ವಿರುದ್ದದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಆಗಿಂದ್ದಾಗೆ ಕಂಡುಬರುತ್ತಿರುತ್ತವೆ. ಈಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

Latest and Breaking News on NDTV

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪ್ರಚೋದನಕಾರಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ನಾಲ್ಕು ಚಿತ್ರಗಳ ಸಂಗ್ರಹವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇವು ನಿಜವಾದ ಚಿತ್ರಗಳೆಂದು ಹೇಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಬಿಜೆಪಿ ಸಂಸದೆ ಮತ್ತು ನಟಿ-ನಿರ್ದೇಶಕಿ ಕಂಗನಾ ರನೌತ್ ಅವರನ್ನು X ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವಾಗ ಟ್ಯಾಗ್ ಮಾಡಿದ್ದಾರೆ, ಇತ್ತೀಚೆಗೆ ಬಿಡುಗಡೆಯಾದ ಅವರ “ಎಮರ್ಜೆನ್ಸಿ” ಚಿತ್ರದಲ್ಲಿ ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿಯ ಈ ಮುಖವನ್ನು ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ದರೆ ಈ ಚಿತ್ರಗಳು ನಿಜವಾಗಿಯೂ ಯಾರದ್ದು ? ಇವು ನಿಜವಾಗಿಯೂ ಇಂದಿರಾ ಗಾಂಧಿಯವರ ರಿಯಲ್ ಪೋಟೊಗಳೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೊಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೆಜಸ್‌ನಲ್ಲಿ ಸರ್ಚ್ ಮಾಡಿದಾಗ, ಕಲಾವಿದರು ಮತ್ತು ಕಲಾ ಉತ್ಸಾಹಿಗಳಿಗಾಗಿ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಆಗಿರುವ ಡಿವಿಯಂಟ್‌ ಆರ್ಟ್‌ನಲ್ಲಿರುವ ನಾಲ್ಕು ವೈರಲ್ ಚಿತ್ರಗಳನ್ನು ಒಳಗೊಂಡಿರುವ ಈ ಗ್ಯಾಲರಿಯೊಂದು ಲಭ್ಯವಾಯಿತು.

These images are generated using AI and are not real, as claimed.

ಈ ಗ್ಯಾಲರಿಯಲ್ಲಿ, ಚಿತ್ರಕಲೆ ಮತ್ತು ಶಿಲ್ಪಕಲೆಯಿಂದ ಡಿಜಿಟಲ್ ಕಲೆ, ಪಿಕ್ಸೆಲ್ ಕಲೆ, ಚಲನಚಿತ್ರಗಳು ಮತ್ತು ಅನಿಮೆಶನ್ ಸೇರಿದಂತೆ ಪ್ರತಿದಿನ ಸಾವಿರಾರು ಕಲಾಕೃತಿಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಎಲ್ಲಾ ಚಿತ್ರಗಳನ್ನು ಮೇ 5, 2023 ರಂದು “ಹರ್ಸಾಫ್ಟರ್‌ಸೈಡ್” ಎಂಬ ಬಳಕೆದಾರರಿಂದ ಅಪ್‌ಲೋಡ್ ಮಾಡಲಾಗಿದೆ, ಅವರ ಜೀವನ ಚರಿತ್ರೆಯಲ್ಲಿ, “… ಈ ಅನನ್ಯ ಪುಟವು ಕೆಲವು ಅತ್ಯಂತ ಪ್ರಸಿದ್ಧ ಮತ್ತು ಪ್ರೀತಿಯ ಮಹಿಳಾ ಪಾತ್ರಗಳನ್ನು ಹೆಚ್ಚು ಖಾಸಗಿ ಮತ್ತು ಸೂಕ್ಷ್ಮ ಸನ್ನಿವೇಶದಲ್ಲಿ ಪ್ರದರ್ಶಿಸಲು ಮೀಸಲಾಗಿರುತ್ತದೆ ಎಂದು ಈ ಫ್ಲಾಟ್‌ಫಾರ್ಮ್‌ನಲ್ಲಿ ತಿಳಿಸಲಾಗಿದೆ.

ಈ ವೈರಲ್ ಚಿತ್ರಗಳನ್ನು ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದಾಗ, ಇದು AI-ಇಮೇಜ್ ಡಿಟೆಕ್ಷನ್ ಟೂಲ್ ಆಗಿದ್ದು, ಅದು ಚಿತ್ರಗಳು 99.7%-99.9% ರಷ್ಟು AI-ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದೆ. ನಾವು ಚಿತ್ರಗಳನ್ನು ಸೈಟ್ ಎಂಜಿನ್ ಮೂಲಕ ಚೆಕ್ ಮಾಡಿದಾಗ, ವೈರಲ್ ಆಗಿರುವ ಎಲ್ಲಾ ನಾಲ್ಕು ಚಿತ್ರಗಳು 99% ರಷ್ಟು AI-ರಚಿತವಾಗಿರುವ ಸಾಧ್ಯತೆ ಇದೆ ಎಂದು ಪತ್ತೆ ಹಚ್ಚಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಫೋಟೊಗಳು ಎಂದು AI ನಿಂದ ರಚಿಸಿದ ಡಮ್ಮಿ ಚಿತ್ರಗಳನ್ನು ಸುಳ್ಳು ಮತ್ತು ಕೀಳು ಮಟ್ಟದ ಚಿತ್ರಗಳಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಯುವತಿಯನ್ನು ಹತ್ಯೆ ಮಾಡಿದ್ದು ಸ್ವಂತ ಪ್ರಿಯಕರನೇ ಹೊರತು ಮುಸ್ಲಿಮನಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights