ಕೊರೊನಾ ಎಫೆಕ್ಟ್ – ದಕ್ಷಿಣದ ನಾಲ್ಕು ಚಿತ್ರರಂಗ ಬಂದ್ : ಮೂರುವರೆ ಸಾವಿರ ಕೋಟಿ ಖೋತಾ..!

ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿರುವುದರಿಂದ ಜನ ಮನೆಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಮಾಲ್, ಥಿಯೇಟರ್, ಪಬ್ ಎಲ್ಲವೂ ಬಂದ್ ಆಗಿವೆ. ಇದರಿಂದ   ಕನ್ನಡ ಚಿತ್ರರಂಗಕ್ಕೆ ಭಾರೀ ಹೊಡೆತ ಬಿದ್ದಿದ್ದು ಕೋಟಿ ಕೋಟಿ ಹಣ ನಷ್ಟವಾಗಿದೆ.

ಹೌದು.. ಕೊರೊನಾ ಭೀತಿ ಯಿಂದ ಕನ್ನಡಚಿತ್ರರಂಗ ಬಹುತೇಕ ಸ್ತಬ್ಧಗೊಂಡಿದೆ. ಹಲವು ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿರೋದಲ್ಲದೆ ಥಿಯೇಟರ್ ಗಳು ಬಂದ್ ಆಗಿರೋದರಿಂದ ಸ್ಯಂಡಲ್ ವುಡ್ ಗೆ ದೊಡ್ಡ ನಷ್ಟವಾಗಿದೆ.ಮುಂಜಾಗೃತ ಕ್ರಮವಾಗಿ ಸಿನಿಮಾ ಶೂಟಿಂಗ್, ಹೊಸ ಚಿತ್ರಗಳ ಬಿಡುಗಡೆ, ಆಡಿಯೋ ಲಾಂಚಿಂಗ್, ಪೋಸ್ಟ್ ಲಾಂಚಿಂಗ್ ಎಲ್ಲಾ ಕಾರ್ಯಕ್ರಮಗಳು ರದ್ದು ಮಾಡಲಾಗಿದೆ. ಇದರಿಂದ ಕನ್ನಡ ಚಿತ್ರರಂಗ ಮಾತ್ರವಲ್ಲದೇ ದಕ್ಷಿಣದ ನಾಲ್ಕು ಚಿತ್ರರಂಗಕ್ಕೂ ಭಾರೀ ಹೊಡೆತಬಿದ್ದಿದೆ. ಚಿತ್ರರಂಗ ಬಂದ್ ನಿಂದಾಗಿ ಸರಿಸುಮಾರು ಮೂರುವರೆ ಸಾವಿರ ಕೋಟಿ ಖೋತಾ ಆಗಿದೆ ಎನ್ನಲಾಗುತ್ತಿದೆ.

ಹೌದು… ಮಾರ್ಚ್ 14 ರಿಂದ ಥಿಯೇಟರ್ ಗಳು ಬಂದ್ ಆಗಿವೆ. ಥಿಯೇಟರ್ ಗೆ ಮತ್ತೆ ಜನ ಬರಬೇಕಾದ್ರೆ ಸರಿಸುಮಾರು ಮೂರು ನಾಲ್ಕು ತಿಂಗಳಾದ್ರು ಬೇಕು. ಯಾಕಂದ್ರೆ ಕೊರೊನಾ ಭಯ ಆ ಪ್ರಮಾಣದಲ್ಲಿ ಭಯ ಹುಟ್ಟಿಸಿಬಿಟ್ಟಿದೆ. ಹೀಗಾಗಿ ಸ್ಯಂಡಲ್ ವುಡ್ ನಲ್ಲಿ ಕೋಟಿಗೊಬ್ಬ, ರಾಬರ್ಟ್,  ಪೊಗರು ಸಿನಿಮಾಗಳು ಆತಂಕಕ್ಕೆ ಸಿಲುಕಿವೆ. ಇನ್ನೂ ಈ ಬಂದ್ ಮಾರ್ಚ್ 31 ರವರೆಗೂ ಮುಂದುವರೆಯಲಿದ್ದು, ಸಾವಿರಾರು ಕೋಟಿ ನಷ್ಟವಾಗಿದೆ ಎನ್ನುತ್ತಾರೆ ಫಿಲ್ಮ ಚೇಂಬರ್ ಅಧ್ಯಕ್ಷರಾದ ಡಿ. ಜಯರಾಮ್.

ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇದರ ಎಫೆಕ್ಟ್ ತೆಲುಗು. ಮಳಿಯಾಳಂ, ತೆಮಿಳು ಸಿನಿಮಾರಂಗಕ್ಕೂ ತಟ್ಟಿದೆ. ‘ರಾಬರ್ಟ್ ‘ ಆಡಿಯೋ ರಿಲೀಸ್ ಗೆ ಸಜ್ಜಾಗಿದ್ದ ಟೀಮ್ ಹಿಂದೆ ಸರಿದಿದೆ.

ಕೊರೊನಾಗೆ ಟಾಲಿವುಡ್ ಕೂಡ ನಡುಗಿ ಹೋಗಿದೆ. 350 ಕೋಟಿ ಬಜೆಟ್  ಸಿನಿಮಾ ಆರ್ ಆರ್ ಆರ್, 140 ಕೋಟಿ ಬಜೆಟ್  ಸಿನಿಮಾ ಆಚಾರ್ಯ ಶೂಟಿಂಗ್ ರದ್ದಾಗಿದೆ. ಇನ್ನೂ ತಲಾ 50 ಕೋಟಿ ಬಜೆಟ್ ಸಿನಿಮಾಗಳಾದ ಫೈಟರ್, ಅರಣ್ಯಂ ಶೂಟಿಂಗ್ ರದ್ದಾಗಿದೆ. ಜೊತೆಗೆ ಅನುಷ್ಕಾ ಅಭಿನಯದ ನಿಶ್ಯಬ್ದಂ 25 ಕೋಟಿ ಬಜೆಟ್  ಸಿನಿಮಾ ಕೂಡ ಕೊರೊನಾ ಭೀತಿಗೆ ಹಿಂದೆ ಸರಿದಿದೆ. ಹೀಗೆ ಟಾಲಿವುಡ್ ನಲ್ಲಿ ನೂರಾರು ಕೋಟಿ ಲಾಸ್ ಆಗಿದೆ.

ಕಾಲಿವುಡ್ ವಿಚಾರಕ್ಕೆ ಬಂದರೆ. ‘ಮಾಸ್ಟರ್ ‘ ಬಹುಶ್ಯ ಅನೇಕ ಸಿನಿಮಾ ತಂಡಗಳು ಶೂಟಿಂಗ್ ನಿಲ್ಲಿಸಿ ಮನೆ ಸೇರಿವೆ.

ಮಲಿಯಾಳಂ ವಿಚಾರಕ್ಕೆ ಬಂದರೆ. ಕೇರಳದಲ್ಲಿ ಮಾರ್ಚ್ 11 ಥೀಯೇಟರ್ ಬಂದ್ ಮಾಡಲಾಗಿದೆ. ಕೇರಳದಲ್ಲಿ ಕೊರೊನಾ ಮೊದಲು ಕಾಲಿಟ್ಟಿದ್ದು, ಆಗ್ಲೇ ಸಿನಿಮಾಗಳ ಮೇಲೆ ಕರಿ ನೆರಳು ಆಗಮಿಸಿದೆ. ಮರ್ಕರ್ ಸಿನಿಮಾದ ಬಿಡುಗಡೆ ಪೋಸ್ಟಮನ್ ಆಗಿದೆ. ಈ ವೇಳೆ ಪ್ರಭಾಸ್, ಅನುಷ್ಕಾ ಶೆಟ್ಟಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಹೀಗೆ ದಕ್ಷಿಣ ನಾಲ್ಕು ಚಿತ್ರರಂಗ ಮೂರುವರೆಯಿಂದ ನಾಲ್ಕು ಸಾವಿರ ಕೋಟಿ ನಷ್ಟ ಅನುಭವಿಸಿವೆ.  ಅದೇನೇ ಆಗಲಿ ಜನರ ಜೀವದ ಮುಂದೆ ಯಾವುದೇ ನಷ್ಟ ಕಾಣುತ್ತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights