ಕೊರೊನಾ ಭೀತಿ: ತಿಹಾರ್‌ ಜೈಲಿನ 3,000 ಖೈದಿಗಳಿಗೆ ಬಿಡುಗಡೆ ಭಾಗ್ಯ

ದೇಶದಲ್ಲಿ ಸಾಮಾಜಿಕ ಸ್ಥಿರತೆಯನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್​ ಭೀತಿ ಹೆಚ್ಚಾಗುತ್ತಿದೆ. ಕೊರೊನಾ ಹರಡದಂತೆ ನಿಯಂತ್ರಿಸಲು ಜನತಾಕರ್ಫ್ಯೂ, ಲಾಕ್‌ಡೌನ್, ಸೆಕ್ಷನ್‌ 144 ನಂತಹ ಹಲವಾರು ರೀತಿಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದಯಕೊಳ್ಳುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಜೈಲುಗಳಲ್ಲಿ ಖೈದಿಗಳು ಒಟ್ಟಿಗೇ ಇರುವ ಕಾರಣದಿಂದಾಗಿ ಸಾಮಾಜಿಕ ಅಂತರ ಕಾಯ್ದುಳ್ಳಲು ಸಾಧ್ಯವಾಗುತ್ತಿಲ್ಲ.

ಆ ಕಾರಣದಿಂದಾಗಿ ಜನಸಂದಣಿ ತಗ್ಗಿಸುವ ಉದ್ದೇಶದಿಂದ ತಿಹಾರ್​ ಜೈಲಿನ 3000ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

1500ಕ್ಕೂ ಹೆಚ್ಚು ಅಪರಾಧಿಗಳು ಮತ್ತು 1500ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳನ್ನು ಜೈಲಿನಿಂದ ಮುಕ್ತ ಮಾಡಲಾಗಿದೆ. ಆದರೆ, ಅಪಾಯಕಾರಿ ಅಪರಾಧಿಗಳಿಗಳನ್ನು ಬಿಡುಗಡೆ ಮಾಡಿಲ್ಲ.

ನೂತನ ಆದೇಶದ ಪ್ರಕಾರ ಏಳು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 1500ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನಿನ ಮೇಲೆ ಹೊರ ಕಳುಹಿಸಲಾಗಿದೆ.

ದೇಶದಲ್ಲಿ ಈವರೆಗೆ 470ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights