“ಕೊರೊನಾ ಸಂಕಷ್ಟದಲ್ಲಿರುವವರ ಜೊತೆ ನಾವಿದ್ದೇವೆ” – ಹೀಗೆಂದವರು ಯಾರು ಗೊತ್ತಾ..?

ಒಂದು ಕಡೆ ಕೊರೊನಾ ಅಟ್ಟಹಸ ಮುಂದು ವರೆದಿದೆ. ಇದರ ಕರಿ ನೆರಳಿನಿಂದ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾ ಕೆಲವರು ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಿದ್ದಾರೆ. ಹೌದು… ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನ ತಡೆಯಲು ವೈದ್ಯರು, ಪೊಲೀಸರು, ವಾಲೆಂಟೆಯರ್ಸ್ ಗಳು ಹಗಲಿರುಳು ನಿದ್ದೇ ಇಲ್ದೆ, ಊಟ-ನೀರು ಇಲ್ದೆ ಶ್ರಮಿಸುತ್ತಿದ್ದಾರೆ. ಇಂಥವರ ಸಹಾಯಕ್ಕೆ ಕೆಲವರು ಸ್ವಯಂ ಪ್ರೇರಿತರಾಗಿಗಿ ಆಗಮಿಸಿದ್ದಾರೆ. ಆದರೆ ಇದಕ್ಕೆ ಮದ್ದು ಮಾತ್ರ ಇದುವರೆಗೂ ಲಭ್ಯವಾಗಿಲ್ಲ. ಹೀಗಾಗಿ ಎಗ್ಗಿಲ್ಲದೇ ಹರಡುತ್ತಿರುವ ಕೊರೊನಾ ಸೋಂಕು ತಡೆಯಲು ದೇಶವೇ ಲಾಕ್ ಡೌನ್ ಮಾಡಲಾಗಿದೆ. ದೇಶದ ಅದೆಷ್ಟೋ ಜನ ಕೊರೊನಾ ಮಾಹಾಮಾರಿಗೆ ತಲೆಬಾಗಿ ಮನೆ ಬಿಟ್ಟು ಹೊರಬರುತ್ತಿಲ್ಲ. ಇನ್ನೂ ದಿನನಿತ್ಯದ ಕೂಲಿಯನ್ನೇ ನಂಬಿಕೊಂಡು ಬದುಕುವ ಜನ ಅಕ್ಷರಶ: ಬೀದಿಪಾಲಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರ ಸ್ಥಿತಿಯೇ ಹೀಗಾದರೆ ಇನ್ನೂ ಪ್ರಾಣಿಗಳ ಕಥೆ ಏನಾಗಬೇಡ..? ಜಾನುವಾರಗಳ ಸಹಾಯಕ್ಕೆ ನಿಂತು ಕೊರೊನಾ ತಡೆಗೆ ಕೈ ಜೋಡಿಸಿದ್ದಾರೆ. ಹಾಗಾದ್ರೆ ಯಾರವರೆಲ್ಲಾ..? ಈ ಬಗ್ಗೆ ಡಿಟೇಲ್ಸ್ ಇಲ್ಲದೆ ನೋಡಿ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಅಡ್ಡಾಡುವ ಬೀದಿ ದನಗಳು ಮೇವಿಲ್ಲದೆ ಪರದಾಡುತ್ತಿವೆ. ಅಂಗಡಿ ಮುಂದೆ, ಮಾರುಕಟ್ಟೆಯ ವರ್ತಕರು ನೀಡುತ್ತಿದ್ದ ಮೇವನ್ನು ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದನಗಳು ಈಗ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಹಸಿವಿನಿಂದ ಕಂಗಾಲಾಗಿವೆ. ಕೆಲವು ದನಗಳ ಮಾಲೀಕರು ಕೇವಲ ಹಾಲು ಕರೆಯುವ ಹಸುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ಹಾಲು ನೀಡದ ಹಸು ಮತ್ತು ಎತ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂತಹ ದನಗಳು ಗಲ್ಲಿ ಗಲ್ಲಿ ಅಲೆಯುತ್ತಾ, ಅಂಗಡಿ, ಹೋಟೆಲ್ ಮುಂದೆ ನಿಲ್ಲುತ್ತಾ ಅವರು ನೀಡಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಈಗ ಜನರೇ ಮನೆಯಿಂದ ಆಚೆ ಬರುವುದು ಕಡಿಮೆ. ಜತೆಗೆ ಅಂಗಡಿ, ಹೋಟೆಲ್ ಯಾವುದೂ ತೆರೆಯದ ಕಾರಣದಿಂದಾಗಿ ದನಗಳಿಗೆ ಆಹಾರ ನೀಡುವವರೇ ಇಲ್ಲವಾಗಿದ್ದಾರೆ.ದನಗಳ ಸಂಕಷ್ಟವನ್ನು ಅರಿತ ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ಹಾಗೂ ಅಪೂರ್ವ ಸ್ನೇಹ ಬಳಗದ ಸಹಯೋಗದೊಂದಿಗೆ ನಗರದ ಚಾಮುಂಡಿಪುರಂ, ನಂಜುಮಳಿಗೆ, ಅಗ್ರಹಾರದ ಸುತ್ತಮುತ್ತಲಿನ ಹಸುಗಳಿಗೆ ಜೋಳದ ತೆನೆ, ಹುಲ್ಲು ಹಾಕಿ ಅವುಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ. ಇದರ ಜೊತೆಗೆ ಪ್ರವಾಸಿಗರಿಲ್ಲದೆ ಟಾಂಗಾ ಗಾಡಿಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ಕುದುರೆಗಳಿಗೆ ಹಸಿ ಹುಲ್ಲು ಸೇರಿದಂತೆ ಮೇವು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ಅಂತಹ ಸ್ಥಳಗಳಿಗೆ ತೆರಳಿ ಕುದುರೆಗಳಿಗೆ ಮೇವು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.

ಕೊರೊನಾನಿಂದ ಜನರ ಜೀವವನ್ನು ಕಾಪಾಡಲು ವೈದ್ಯರು, ನರ್ಸ್ ಮತ್ತು ಪೊಲೀಸರು ಮಾತ್ರ ಹೋರಾಡುತ್ತಿಲ್ಲ. ಇವರ ಜೊತೆಗೆ ಪೌರ ಕಾರ್ಮಿಕರು ಕೂಡ ಹೋರಾಡುತ್ತಿದ್ದಾರೆ. ಹೀಗಾಗಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಗಿದೆ.ಬೆಂಗಳೂರಿನ ಶ್ರೀರಾಂಪುರದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗಿದೆ. ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗೂ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಯಾರ ಮನೆಯವರಿಗೆ ಕೊರೊನಾ ಇರುತ್ತದೆಯೋ ಗೊತ್ತಿಲ್ಲ. ಆದರೂ ಇವರು ಪ್ರತಿ ರಸ್ತೆಯ ಸ್ವಚ್ಛತೆಯ ಕಾರ್ಯಯನ್ನು ಮಾಡುತ್ತಾರೆ. ಹೀಗಾಗಿ ಶ್ರೀರಾಂಪುರದಲ್ಲಿ ರಿಯಲ್ ಕೊರೊನಾ ವಾರಿಯರ್ಸ್‌ಗೆ ಹಣದ ಹಾರ ಹಾಕಿ ಸನ್ಮಾನ ಮಾಡಲಾಗಿದೆ.

ಬೆಳಗಾವಿಯ ದಂಪತಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ವೃತ್ತಿಯಲ್ಲಿ ದಾದಿಯರಾಗಿರುವ ಈ ದಂಪತಿ, ತಮ್ಮ ಜೀವದ ಹಂಗು ತೊರೆದು ಬೆಳಗಾವಿ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದಾರೆ. ಸಂತೋಷ್ ಜನಮಟ್ಟಿ ದಂಪತಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 15 ದಿನಗಳಿಂದ ಹಗಲಿರುಳು ಕೊರೊನಾ ವಿಶೇಷ ವಾರ್ಡಿನಲ್ಲಿ ಸೋಂಕಿತರ ಸೇವೆ ಮಾಡುತ್ತಿದ್ದಾರೆ. 9 ತಿಂಗಳ ಮಗು ಮತ್ತು ವೃದ್ಧ ತಾಯಿಯನ್ನು ಮನೆಯಲ್ಲಿಯೇ ಬಿಟ್ಟು ಕೊವೀಡ್ ವಾರ್ಡಿನಲ್ಲಿ ನರ್ಸಿಂಗ್ ಸೇವೆ ಮಾಡುತ್ತಿದ್ದಾರೆ.

ಹೀಗೆ ಕೊರೊನಾ ಸಂಕಷ್ಟದಲ್ಲಿರುವವರ ಬೆನ್ನಿಗೆ ಕೆಲ ಜನ ತಾವಾಗೆ ದಾವಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂಥವರು ಇರುವುದರಿಂದಲೇ ದೇಶದಲ್ಲಿ ಮಳೆ ಬೆಳೆ ಆಗುತ್ತಿರುವುದು. ಹೀಗಾಗಿ ಕೊರೊನಾ ಎಂದ ಬಳಿಕ ಮನೆಯಲ್ಲಿ ಇರುವುದರ ಜೊತೆಗೆ ಕೈಲಾದ ಸಹಾಯವನ್ನು ಸಂಕಷ್ಟದಲ್ಲಿರುವವರಿಗೆ ಮಾಡಿದರೆ ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ಹಸ್ತ ಇದೆ ಎಂದಾಗುತ್ತದೆ. ಇಲ್ಲವಾದರೆ ಸೋಂಕು ತಗಲುವ ಭಯದಲ್ಲಿ ಸಾಯುವುದಕ್ಕಿಂತ ಜನ ಜಾನುವಾರಗಳು ಊಟವಿಲ್ಲದೇ ಸಾಯುವ ಸ್ಥಿತಿ ನಿರ್ಮಾಣವಾದಂತಾಗುತ್ತದೆ. ನೀವು ಸೇಫ್ ಆಗಿರಿ. ಇನ್ನಿತರರನ್ನು ಸೇಫ್ ಆಗಿರಿಸಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights