ಕೋಮು ದ್ವೇಷಕ್ಕಾಗಿ ಅಂಗಡಿಗಳ ಮೇಲೆ ಕೇಸರಿ ಧ್ವಜ: ವಕೀಲರಿಂದ ದೂರು ದಾಖಲು

ಬೆಂಗಳೂರಿನ ಕೆಲವು ವಾಣಿಜ್ಯ ಸ್ಥಳಗಳಲ್ಲಿ ಕೇಸರಿ ಧ್ವಜಗಳನ್ನು ಹಾಕುವ ಮೂಲಕ ಹಾಗೂ ಅದನ್ನು ಫೇಸ್‌ಬುಕ್‌ ಶೇರ್‌ ಮಾಡಿ ಕೋಮು ದ್ವೇಷವನ್ನು ಹರಡುತ್ತಿದ್ದ ಫೇಸ್‌ಬುಕ್‌ ಪೇಜ್‌ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ವಕೀಲರು ದೂರು ದಾಖಲಿಸಿದ್ದಾರೆ.

ನಗರದ ವಿಜಯನಗರದ ರಸ್ತೆಗಳಲ್ಲಿರುವ ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳ ಮುಂದೆ ಕೆಲವು ದಿನಗಳಿಂದ ‘ಓಂ’ ಚಿಹ್ನೆಯನ್ನು ಹೊಂದಿದ್ದ ಕೇಸರಿ ಧ್ವಜಗಳು ಹಾರಾಡುತ್ತಿವೆ. ಆ ಅಂಗಡಿಗಳ ಮಾಲೀಕರು ಹಿಂದೂಗಳಾಗಿದ್ದು, ಭಜರಂಗದಳ ಮತ್ತು ಆರ್‌ಎಸ್‌ಎಸ್‌ ಸದಸ್ಯರು ಒತ್ತಾಯ ಮಾಡಿ ಅಂಗಡಿಗಳಿಗೆ ಕೇಸರಿ ಧ್ವಜಗಳನ್ನು ಹಾಕಿದ್ದಾರೆ.

ಈ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕೇವಲ 20 ಅಡಿ ದೂರದಲ್ಲಿದೆ.

“ಉತ್ತರ ಕನ್ನಡ ಮಂದಿ” ಎಂಬ ಫೇಸ್‌ಗುಂಪಿನಲ್ಲಿ ಕೇಸರಿ ಧ್ವಜಗಳನ್ನು ಹಾಕಿರುವ ಪೋಟೋಗಳನ್ನು ಶೇರ್‌ ಮಾಡಲಾಗಿದ್ದು, ಇದರ ಹಿಂದೆ ಎಂ.ಎಲ್.ಶಿವಕುಮಾರ್‌ ಎಂಬ ವ್ಯಕ್ತಿಯ ಪಾತ್ರವಿದೆ” ಎಂದು ದೂರುದಾರರಾಗಿರುವ ಕರ್ನಾಟ್ ಟ್ರೇಡ್‌ ಯೂನಿಯನ್‌ಗಳ ಅಖಿಲ ಭಾರತ ಕೇಂದ್ರ ಮಂಡಳಿಯ ಸದಸ್ಯರು ಮತ್ತು ವಕೀಲರಾದ ಮೈತ್ರೇಯಿ ಕೃಷ್ಣನ್ ಹೇಳಿದ್ದಾರೆ.

ದುಷ್ಕರ್ಮಿಗಳು ಸಾರ್ವಜನಿಕ ಸ್ಥಳಗಳಲ್ಲಿರುವ ಮರಗಳು ಮತ್ತು ಕಂಬಗಳ ಮೇಲೆ ಕೇಸರಿ ಧ್ವಜಗಳನ್ನು ಹಾಕುವ ಮೂಲಕ 1981 ರ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ) ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕರ್ನಾಟಕ ಪೊಲೀಸ್ ಕೈಪಿಡಿಯನ್ನು ಉಲ್ಲೇಖಿಸಿರುವ ಅವರು, ಗೊಂದಲದ ಉಂಟು ಮಾಡುವಂತಹ ವಿಚಾರಗಳ ಬಗ್ಗೆ ದೂರುಗಳು ಬಂದಾಗ, ಪೊಲೀಸರು ದೂರು ನೀಡಲಾಗಿರುವ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಅಭಿಪ್ರಾಯಗಳನ್ನು ಪಡೆದುಕೊಂಡು, ವಿವಿಧ ಗುಂಪುಗಳ ನಾಯಕರು ಹಾಗೂ ವಿವಾದದಲ್ಲಿ ಭಾಗಿಯಾಗದ ನಾಗರಿಕರೊಂದಿಗೆ ವಿಚಾರ ನಡೆಸಿ, ಸಾರ್ವಜನಿಕರ ಭಾವನೆ ಏನು ಎಂದುದನ್ನು ತಿಳಿದುಕೊಂಡು ಕ್ರಮಕ್ಕೆ ಮುಂದಾಗಬೇಕು. ಆದರೆ, ಈ ಘಟನೆ ಸಂಭವಿಸಿದ ಮೊದಲ ದಿನವೇ ಕಾರ್ಯಕರ್ತರೊಬ್ಬರು ವಿಜಯ ನಗರ ಪೊಲೀಸರಿಗೆ ದೂರವಾಣಿಯ ಮೂಲಕ ಕಳವಳವನ್ನು ತಿಳಿಸಿದ ನಂತರವೂ ಪೊಲೀಸರು ಇದರ ಬಗ್ಗೆ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಲು ಮುಂದಾಗಿಲ್ಲ.

ಘಟನೆಯ ಪ್ರಮುಖ ಆರೋಪಿ ಎಂದು ಗುರುತಿಸಿರುವ ಶಿವಕುಮಾರ್, ತಾನು ಭಜರಂಗದಳದ ಸದಸ್ಯ ಹಾಗೂ ಬಿಜೆಪಿ ಯುವ ಮೋರ್ಚಾದ ಮುಖಂಡನೆಂದು ಗುರುತಿಸಿಕೊಂಡಿದ್ದಾನೆ. ಅಲ್ಲದೆ, ಬಿಜೆಪಿ ಶಾಸಕ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾನೆ.

ಆತ ತನ್ನ ಫೇಸ್‌ಬುಕ್ ಪುಟದಲ್ಲಿ ಸರಣಿ ಪೋಟೋಗಳನ್ನು, ವಿಡಿಯೋಗಳನ್ನು ಮೇ 9 ರಂದು ಹಂಚಿಕೊಂಡಿದ್ದು, ತಮ್ಮ ಹಿಂದೂತ್ವ ಕಾರ್ಯಕರ್ತರ ತಂಡವು ಹಿಂದೂ ಮಾಲೀಕತ್ವ/ನಿರ್ವಹಣೆ ಹೊಂದಿರುವ ಅಂಗಡಿಗಳಲ್ಲಿ ಕೇಸರಿ ಧ್ವಜಹಾಕಿದ್ದಾಗಿ ಬರೆದುಕೊಂಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ವಿ.ಸೋಮಣ್ಣ, ಈ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಯಾವುದೇ ರೀತಿಯ ಉಲ್ಲಂಘನೆಯಾಗಿದ್ದರು ಪೊಲೀಸರು ಕ್ರಮ ಕೈಗೊಳ್ಳಬೇಕು. ನನ್ನೊಂದಿಗೆ ಹಲವಾರು ಜನರು ಫೋಟೋ ತೆಗೆದುಕೊಳ್ಳುತ್ತಾರೆ. ಹಾಗಂತ ಅವರು ಮಾಡುವ ಎಲ್ಲಾ ಕೆಲಸಗಳಿಗೂ ನಾನು ಜವಾಬ್ದಾರನಲ್ಲ. ಅವರು ನಿಯಮಗಳನ್ನು ಉಲ್ಲಂಘಸಿದ್ದರೆ ಸಂಬಂಧಪಟ್ಟ ಪ್ರಾಧಿಕಾರವು ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

ಪ್ರದೇಶಕ್ಕೆ ಭೇಟಿ ನೀಡಿ ವರದಿ ಮಾಡುವಾಗ, ಹಿಂದೂ ಅಂಗಡಿ ಮಾಲೀಕರು ‘ವೈಲ್ಡ್ ವೆಸ್ಟ್ ಶೋ ರೂಂ’ ಮಾಲೀಕರತ್ತ ಬೆರಳು ತೋರಿಸಿದರು. ಫೋಟೋಗಳಲ್ಲಿ ಗುರುತಿಸಲ್ಪಟ್ಟ ಸಿಬ್ಬಂದಿಯೊಬ್ಬರು, ಅಂಗಡಿಯ ಹೊರಗೆ ನಿಂತು ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ದಿ ಫೆಡರಲ್‌ ನ್ಯೂಸ್‌ ವರದಿ ಮಾಡಿದೆ.

ಮುಸ್ಲಿಮರನ್ನು ಬಹಿಷ್ಕರಿಸುವಂತೆ ಅವರು ಸ್ಪಷ್ಟವಾಗಿ ಕರೆ ನೀಡಲಾಗಿದ್ದು, ಬೀದಿಗಳಲ್ಲಿ ವಿಭಜನೆ ಸ್ಪಷ್ಟವಾಗಿತ್ತು. 

ದೆಹಲಿ ಕೋಮು ಗಲಭೆಯ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಕರ್ನಾಟಕದಲ್ಲಿ ಅದರ ಅಂಗಸಂಘಟನೆಗಳು ನಡೆಸುತ್ತಿರುವ ವಾಟ್ಸಾಪ್ ಮತ್ತು ಫೇಸ್‌ಬುಕ್ ಗುಂಪುಗಳಲ್ಲಿ ದ್ವೇಷ ಸಂದೇಶಗಳನ್ನು ಹೆಚ್ಚಾಗಿ ಹರಡುತ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹೋರಾಟಗಳು ಮತ್ತು ಚರ್ಚೆಗಳಲ್ಲಿ ಮುಸ್ಲೀಮರು ಮುಂಚೂಣಿಯಲ್ಲಿದ್ದಾರೆ. ಅವರನ್ನು ಬೆದರಿಸುವ ಹುನ್ನಾರಗಳು ನಡೆಯುತ್ತಿವೆ. ಈಗ ವಿಜಯನಗರದಲ್ಲಾಗಿರುವ ಈ ಘಟನೆಯು ದೆಹಲಿ ಗಲಬೆಯ ನಂತರದಲ್ಲಾದ ಬೆಳವಣಿಗೆಗಳನ್ನು ಪ್ರತಿಬಿಂಬಿಸುತ್ತಿವೆ.

ತರಕಾರಿ ಮಾರಾಟಗಾರರ ಅಂಗಡಿಯ ಮೇಲೆ ಎರಡು ಧ್ವಜಗಳು ಹಾರಾಡುತ್ತಿದ್ದವು, ಆದರೆ ಆ ಧ್ವಜಗಳನ್ನು ಯಾರು ಹಾಕಿದ್ದಾರೆ ಎಂಬುದೇ ಆ ಅಂಗಡಿ ನಡೆಸುವವರಿಗೆ ತಿಳಿದಿಲ್ಲ.

ಇನ್ನೊಬ್ಬ ಮಾರಾಟಗಾರ, ಮುಸ್ಲಿಂ ವ್ಯಕ್ತಿ (ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ) ಅಲ್ಲಿ ಚರ್ಮದ ಅಂಗಡಿ ನಡೆಸುತ್ತಿದ್ದಾರೆ. ಅವರ ಅಂಗಡಿಯಲ್ಲಿ ಧ್ವಜ ಇರಲಿಲ್ಲ, ಇದನ್ನು ಯಾರು  ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಯಾರಿಗೂ ಮುನ್ಸೂಚನೆಯೂ ಇಲ್ಲದೆ ಎಲ್ಲಾ ಹಿಂದೂ ಅಂಗಡಿಗಳ ಮೇಲೆ ರಾತ್ರಿಯ ವೇಳೆ ಧ್ವಜ ಹಾಕಲಾಗಿದೆ.

“ಅವರ ಉದ್ದೇಶ ಏನೆಂದು ನಮಗೆ ತಿಳಿದಿಲ್ಲ. ಸದ್ಯಕ್ಕೆ, ಈ ಧ್ವಜಗಳು ಬೆದರಿಕೆ ಹಾಕುತ್ತಿವೆ. ಆದರೆ ಇದು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಮುಂದಾಗಿದೆ ಎಂದು ತೋರುತ್ತದೆ” ಎಂದು ಮಾರಾಟಗಾರ ಹೇಳಿದ್ದಾರೆ.

ದೂರು ದಾಖಲಿಸುವ ಮೊದಲು, ಅಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಅವರೆಲ್ಲರೂ ಸ್ವಯಂ ಪ್ರೇರಿತರಾಗಿ ಹಾಕಿಕೊಂಡಿದ್ದಾರೆ. ಯಾರೂ ಅದರ ಬಗ್ಗೆ ದೂರು ನೀಡದ ಕಾರಣ ನಾವು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಧ್ವಜಗಳನ್ನು ಹಾಕಿರುವುದರಲ್ಲಿ ನಾವು ಯಾವುದೇ ಉಲ್ಲಂಘನೆ ಕಾಣುವುದಿಲ್ಲ”  ಎಂದು ಇನ್ಸ್‌ಪೆಕ್ಟರ್ ಎಂ.ಎಂ.ಭರತ್ ಹೇಳಿದ್ದಾರೆ.

ಆದಾಗ್ಯೂ, ದೂರನ್ನು ನೋಂದಾಯಿಸಿದ ನಂತರ ಅವರ ಹೇಳಿಕೆ ಬದಲಾಗಿದೆ. ಈಗಾಗಲೇ ಸುಯೋ ಮೊಟು ಹಾಗೂ ಪೊಲೀಸ್‌ ಕಾಯ್ದೆ ಮತ್ತು ವಿರೋಪಗೊಳಿಸುವ ಕಾಯ್ದೆಯಡಿಯಲ್ಲಿ ನೋಟೀಸ್‌ ನೀಡಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ದೂರುದಾರರಿಗೆ ಅದೇ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಇದು, ಪೊಲೀಸರ ಇಬ್ಬಂದಿ ತನವನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಸಾರ್ವಜಕರ ಸ್ಥಳಗಳು ಹಾಗೂ ಅಂಗಡಿಗಳ ಮೇಲೆ ಕೋಮು ದ್ವೇಷವನ್ನು ಭಿತ್ತುವ ಉದ್ದೇಶದಿಂದ ಧ್ವಜವನ್ನು ಹಾಕಲಾಗಿದೆ ಎಂಬುದು ಸ್ಪಷ್ಟವಾಗಿದ್ದು, ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ – ಆರ್ಥಿಕತೆ ಮತ್ತು ಸಿದ್ದಾಂತ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights