ಕೋಲಾರದಲ್ಲಿ ಉಗ್ರರ ಬೇರು : ಸಿಸಿಬಿ ಪೋಲಿಸರಿಗೆ ಸೆರೆಸಿಕ್ಕಿರುವ ಶಂಕಿತ ಉಗ್ರ!

ಕೋಲಾರದಲ್ಲಿ ಉಗ್ರರ ಬೇರು ಬಿಟ್ಟಿರುವ ಅಂಶ ತಿಳಿಯುತ್ತಿದ್ದಂತೆ ಕೊಲಾರದ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಹೌದು…  ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಿಸಿಬಿ ಪೋಲಿಸರಿಗೆ ಸೆರೆಸಿಕ್ಕಿರುವ ಶಂಕಿತ ಉಗ್ರ, ಮೆಹಬೂಬ್ ಪಾಷಾಗೂ ಕೋಲಾರದ ಶಂಕಿತ ಉಗ್ರನ ನಂಟಿನ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ.

ಶಂಕಿತ ಉಗ್ರ ಮೆಹಬೂಬ್ ಪಾಷಾ ಬಂಧನಕ್ಕೆ ಕಾರಣವಾದ ಕೋಲಾರದಿಂದ ಮೆಹಬೂಬ್ ಮೊಬೈಲ್ ಗೆ ಕರೆ ಹೋಗಿದೆ ಎನ್ನಲಾಗುತ್ತಿದೆ. 10 ದಿನಗಳ ಹಿಂದೆಯಷ್ಟೇ ಚಾಮರಾಜನಗರದಲ್ಲಿದ್ದ ಶಂಕಿತ ಉಗ್ರ ಮೆಹಬೂಬ್ ಪಾಷಾ ಮೊಬೈಲ್ ಗೆ ಕೋಲಾರದಿಂದ ಕರೆ ಹೋಗಿದ್ದ ಮಾಹಿತಿ ಲಭ್ಯವಾಗಿತ್ತು. ಭಯೋತ್ಪಾದನೆ ಚಟುವಟಿಕೆಯಲ್ಲಿ ಬಂಧಿತ ಮೆಹಬೂಬ್ ಪಾಷಾ ಜತೆ ಕೋಲಾರ ಮೂಲದವರು ಶಾಮಿಲಾಗಿರುವ ಕುರಿತು ಸಿಸಿಬಿಗೆ ಸುಳಿವು ಸಿಕ್ಕಿತ್ತು. ಕಳೆದ ೭ ದಿನಗಳ ಹಿಂದೆ ಚನ್ನೈ ಕೈ ಬ್ರಾಂಚ್ ಪೊಲೀಸರಿಂದ ಶಂಕಿತರ ಸೆರೆ ಹಿಡಿಯಲಾಗಿದೆ.

ಹೈದರಾಬಾದ್ ಮೂಲದ ಐಸಿಸ್ ಉಗ್ರರಿಗೆ ತಾಂತ್ರಿಕ ನೆರವು ನೀಡಲು ತರಬೇತಿ ಪಡೆಯುತ್ತಿದ್ದ ಕೋಲಾರ ಮೂಲದ , ಮೊಹಮದ್ ಜಹೀದ್ , ಇಮ್ರಾನ್ ಖಾನ್ ಶಂಕಿತರನ್ನ ಕರ್ನಾಟಕ ಪೊಲೀಸ್ ಇಲಾಖೆ ಸಹಕಾರದಿಂದ ಚನ್ನೈ ಪೊಲೀಸರು ಬಂಧಿಸಿದ್ದಾರೆ.

ಐದು ದಿನಗಳ ಹಿಂದೆ ಕೋಲಾರಕ್ಕೆ ಆಗಮಿಸಿ ಖಾದ್ರಿಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತನಿಖೆ ನಡೆಸಿದ್ದ ಬೆಂಗಳೂರಿನ ಸಿಸಿಬಿ ತಂಡ, ಕೋಲಾರದ ಉಗ್ರರ ಬೇರಿನ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದೆ. ಶಂಕಿತರ ಬಂಧನ ಕುರಿತು ಯಾವುದೇ ಖಚಿತ ಮಾಹಿತಿಯಿಲ್ಲ ಎಂದು ತಿಳಿಸಿದ ಕೋಲಾರ ಪೊಲೀಸ್ ಇಲಾಖೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮಾಹಿತಿ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights