ಗದಗ ಜಿಲ್ಲೆಗೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ…

ಕೇಂದ್ರದ ನೆರೆ ಅಧ್ಯಯನ ತಂಡವು ಗದಗ ಜಿಲ್ಲೆಯ ನೇರೆ ಪೀಡಿತ ಪ್ರದೇಶಗಳಿಗೆ ಸೋಮವಾರ ಬೇಟಿ ನೀಡಿ ಪರೀಶಿಲಿಸಿದರು.

ಗದಗ ಜಿಲ್ಲೆಯ ಹೊಳೆಆಲೂರ ಗ್ರಾಮಕ್ಕೆ ಬೇಟಿ ನೀಡಿದ ತ೦ಡವು ನೆರೆಯಿ೦ದ ಹಾನಿ ಗೊಳಗಾದ ಹೊಲಗಳಿಗೆ ಮತ್ತು ಮನೆಗಳಿಗೆ ಪರೀಶಿಲಿಸಿದರು.

ನ೦ತರ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಹೆದ್ದಾರಿ ಸೇತುವೆ, ಮನೆ, ತೋಟಗಾರಿಕೆ ಬೆಳೆ ಹಾನಿ, ಎಪಿಎಂಸಿ ಆವರಣದಲ್ಲಿ ಇರುವ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಕೇಂದ್ರ ಇವುಗಳನ್ನು ತ೦ಡವು ಪರೀಶಿಲಿಸಿತು. ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಎಣ್ಣೆಕಾಳು ವಿಭಾಗದ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲದ ಇಲಾಖೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತ ಜಿತೇಂದ್ರ ಪನವಾರ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯ ದಿಶಾ ವಿಭಾಗದ ಉಪಕಾರ್ಯದರ್ಶಿ ಮಾಣಿಕ ಚಂದ್ರ ಪಂಡಿತ ಹಾಗೂ ಕೇಂದ್ರ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಕೇಂದ್ರ ಅಧ್ಯಯನ ತಂಡದಲ್ಲಿದ್ದರು.

ಗದಗ ಜಿಲ್ಲಾಧಿಕಾರಿ ಎ೦ ಜಿ ಹಿರೇಮಠ, ಬಾಗಲಕೋಟೆ ಸ೦ಸದ ಪಿ ಸಿ ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸ೦ಕನೂರ, ಗದಗ ಜಿಲ್ಲಾ ಪ೦ಚಾಯತ ಅದ್ಯಕ್ಷ ಎಸ್ ಪಿ ಬಳಿಗಾರ, ಸೇರಿದ೦ತೆ ಸರಕಾರಿ ಅಧಿಕಾರಿಗಳು ಈ ಸ೦ದಭ೯ದಲ್ಲಿ ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights