ಗಮನಸೆಳೆದ ಸಾವಯವ ಕೃಷಿ, ಸಿರಿಧಾನ್ಯ ಮೇಳ : ೪೦ ಸಾಧಕ ರೈತರಿಗೆ ಸಮ್ಮಾನ

ರೈತರು ಕೀಟ ರೋಗ ನಿರ್ವಹಣೆಗೆ ಬೆಳೆಗೆ ಅಧಿಕ ರಾಸಾಯನಿಕ ಔಷಧಿ, ಗೊಬ್ಬರ ಬಳಕೆಯಿಂದ ವಿಷಯುಕ್ತ ಆಹಾರವಾಗುತ್ತಿದೆ.ವಿಷಯುಕ್ತ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈಚೆಗೆ ಸಾವಯವ ಕೃಷಿ ಆಹಾರಕ್ಕೆ ಎಲ್ಲೆಡೆ ಬೇಡಿಕೆ ಉಂಟಾಗುತ್ತಿದೆ.ಜೊತೆಗೆ ಆಧುನಿಕ ಕೃಷಿ ಪದ್ಧತಿಯಿಂದ ಸಿರಿಧಾನ್ಯಗಳು ಕಣ್ಮರೆಯಾಗುತ್ತಿದೆ.ಸಾವಯವ ಕೃಷಿ,ಹಾಗೂ ಸಿರಿಧಾನ್ಯ ಕುರಿತು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಾಗಲಕೋಟೆಯಲ್ಲಿ ರೈತ ದಿನಾಚರಣೆ ನಿಮಿತ್ತವಾಗಿ ಜಿಲ್ಲಾಮಟ್ಟದ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಮೇಳ ಕಾರ್ಯಕ್ರಮ ನಡೆಯಿತು..

ಬಾಗಲಕೋಟೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ರೈತ ದಿನಾಚರಣೆ, ಸಾವಯವ ಹಾಗೂ ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿತ್ತು..

ಸಾವಯವ ಸಿರಿಧಾನ್ಯ ಮೇಳಕ್ಕೆ ಡಿಸಿಎಂ ಚಾಲನೆ..

ಡಿಸಿಎಂ ಗೋವಿಂದ ಕಾರಜೋಳ ಸಾವಯವ ಸಿರಿಧಾನ್ಯ ಮೇಳ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು. ಹಿಂದಿನ ತಲೆಮಾರಿನ ಹಿರಿಯವರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತಿರುವುದರಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು.ರಾಗಿ ತಿಂದವ ನಿರೋಗಿ-ಸದೃಡ ಆರೋಗ್ಯ, ಜೋಳ ತಿಂದವ ತೋಳ-ಬಲಿಷ್ಠ, ಅಕ್ಕಿ ತಿಂದವ ಹಕ್ಕಿ ಇದ್ದ ಹಾಗೆ ಎಂಬ ನಾಣ್ಣುಡಿಯಂತೆ ಸಾಂಪ್ರದಾಯಕ ಬೆಳೆಗಳಿಗೆ ಹೆಚ್ಚು ಒತ್ತು ನೀಡಿ ಜನತೆ ಉತ್ತಮ ಆರೋಗ್ಯ ಸಂರಕ್ಷಣೆಗೆ ಮುಂದಾಗಬೇಕು.

 

ಈ ಬಗ್ಗೆ ರೈತರಿಗೆ ಸಕಾಲದಲ್ಲಿ ಮಾರ್ಗದರ್ಶನ ಅವಶ್ಯವಿದ್ದು ಸಾವಯವ ಕೃಷಿಗೆ ನೆರವಾಗುವ ದೃಷ್ಠಿಯಿಂದ ಸರಕಾರ ಬರುವ ಏಪ್ರೀಲ್‍ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಯೋಜನೆಗಳು ರೈತರಿಗೆ ತಲುಪಿಸಲು ಕೃಷಿ ಅಧಿಕಾರಿಗಳು ಶ್ರಮಿಸಬೇಕು ಎಂದರು.ಉತ್ತರ ಕರ್ನಾಟಕದ ಭಾಗದಲ್ಲಿ ಕೈಯಿಂದ ಮಾಡಿದ ರೊಟ್ಟಿಗೆ ಹೆಚ್ಚಿನ ಬೇಡಿಕೆ ಇದ್ದು, ರೊಟ್ಟಿ ತಿನ್ನುವ ಸಂಸ್ಕೃತಿ ಹೆಚ್ಚಾಗಬೇಕು. ರೊಟ್ಟಿ ಈ ಭಾಗದ ಗಟ್ಟಿ ಆಹಾರವಾಗಿದೆ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಹಾರದಿಂದ ಜನರ ಆರೋಗ್ಯ ಅಧೋಗತಿಗೆ ಹೋಗುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದರು. ಬರುವ ಬಜೆಟ್‍ನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಪ್ರತಿಯೊಂದು ಹನಿ ನೀರಾವರಿ ಸದ್ಬಳಕೆಯಾಗುವಂತೆ ಮಾಡಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ಎಲ್ಲ ವರ್ಗದ ರೈತ ಕುಟುಂಬಕ್ಕೆ ವಾರ್ಷಿಕವಾಗಿ 6 ಸಾವಿರ ರೂ. ಹಾಗೂ ಇದಕ್ಕೆ ಬೆಂಬಲವಾಗಿ ರಾಜ್ಯ ಸರಕಾರದಿಂದ 4 ಸಾವಿರ ಸೇರಿ ಒಟ್ಟು 10 ಸಾವಿರ ರೂ.ಗಳ ನೀಡುವ ಯೋಜನೆ ಇದಾಗಿದ್ದು, ಈಗಾಗಲೇ ಕೇಂದ್ರ ಸರಕಾರದಿಂದ ಮೊದಲೇ ಕಂತು 1.77 ಲಕ್ಷ ರೈತ ಕುಟುಂಬಗಳಿಗೆ 35.59 ಕೋಟಿ ರೂ. ಎರಡನೇ ಕಂತಿನಲ್ಲಿ 1.74 ಲಕ್ಷ ರೈತ ಕುಟುಂಬಕ್ಕೆ 34.85 ಕೋಟಿ ರೂ, ಹಾಗೂ ಮೂರನೇ ಕಂತಿನಲ್ಲಿ 1.41 ಲಕ್ಷ ಕುಟುಂಬಗಳಿಗೆ 28.39 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಮಣ್ಣು ಆರೋಗ್ಯ ನಿರ್ವಹಣೆ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ರಾಜ್ಯದ ಎಲ್ಲ ರೈತರಿಗೆ ಮಣ್ಣು ಪರೀಕ್ಷೆ ಆಧಾರಿತ ಮಣ್ಣು ಆರೋಗ್ಯ ಚೀಟಿ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 2.41 ಲಕ್ಷ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ. ಈ ಯೋಜನೆಯಡಿ ಶೇ.50 ರಿಯಾಯಿತಿಯಲ್ಲಿ ಪೋಷಕಾಂಶಗಳ ಕೊರತೆಗಳನ್ನು ನೀಗಿಸಲು ಮಣ್ಣು ಸುಧಾರಕಗಳು, ಲಘು ಪೋಷಕಾಂಶ ಮತ್ತು ಜೈವಿಕ ಗೊಬ್ಬರಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಮಾನಧನ್ ಯೋಜನೆಯಡಿ 60 ವರ್ಷ ತುಂಬಿದ ನಂತರ ಸಣ್ಣ ಮತ್ತು ಅತೀ ಸಣ್ಣ ರೈತರಿಗ ಮಾಸಿಕ 3 ಸಾವಿರ ರೂ. ಪಿಂಚಣಿ ಒದಗಿಸಲಾಗುತ್ತಿದ್ದು, ಈ ಯೋಜನೆಯಡಿ 10 ರಿಂದ 40 ವರ್ಷದೊಳಗಿನ ಸಣ್ಣ ಮತ್ತು ಅತೀ ಸಣ್ಣ ರೈತರು ನೊಂದಣಿ ಮಾಡಬಹುದಾಗಿದೆ ಎಂದರು.ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ ರೈತರನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

ಸಾಲದ ಹೊರೆಯಾಗದಂತೆ ರೈತರ ಸಾಲಮನ್ನಾ ಯೋಜನೆ, ಬೃಹತ್ ನೀರಾವರಿ ಯೋಜನೆ ಕಲ್ಪಿಸಲಾಗಿದ್ದು, ರೈತರು ಇವುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಡರಾಗಬೇಕೆಂದರು ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಸಿದ್ದು ಸವದಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಶೋಭಾ ಬಿರಾದಾರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ತೋವಿವಿಯ ಕುಲಪತಿ ಕೆ.ಎಂ.ಇಂದಿರೇಶ, ಕೃಷಿ ಉಪನಿರ್ದೇಶಕ ಕೊಂಗವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಮೇಳಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.

ವಿವಿಧ ಇಲಾಖೆ,ಕಂಪನಿಗಳ೩೭ಮಳಿಗೆಗೆ ೧೫೦೦ಕ್ಕೂ ಹೆಚ್ಚು ರೈತರು ಭೇಟಿ

ಸಾವಯವ ಕೃಷಿ ಹಾಗೂ ಸಿರಿಧಾನ್ಯ ಮೇಳದಲ್ಲಿ ೩೭ ಮಳಿಗೆಯನ್ನು ಹಾಕಲಾಗಿತ್ತು.ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ೧೫೦೦ಕ್ಕೂ ಹೆಚ್ಚು ರೈತರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಸಾವಯ ಕೃಷಿಯಲ್ಲಿ ಬೆಳೆದ ಸಿರಿಧಾನ್ಯ,ಕೃಷಿ , ತೋಟಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆ,ಹಾಗೂ ಕಂಪನಿಗಳಿಂದ ಮಳಿಗೆ ಹಾಕಲಾಗಿತ್ತು.ಮೇಳ ರೈತರ ಗಮನಸೆಳೆಯಿತು. ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಗೋವಿಂದ ಕಾರಜೋಳ ಭಾಗಿಯಾಗಿ ಸರ್ಕಾರಿ ಕಾರ್ಯಕ್ರಮಕ್ಕೆ ಮೂರು ಗಂಟೆಗಳ ಕಾಲ ತಡವಾಗಿ ಆಗಮಿಸಿ ಸಾವಯವ ಕೃಷಿ, ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದರು..

ಸಾಧಕ ರೈತರಿಗೆ ಶ್ರೇಷ್ಟ ಕೃಷಿಕ ಪ್ರಶಸ್ತಿ ಪ್ರದಾನ ಪ್ರಸಕ್ತ ಸಾಲಿಗೆ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ 10 ಹಾಗೂ ಆಯಾ ತಾಲೂಕಾ ಮಟ್ಟದಲ್ಲಿ ಪ್ರತಿ ತಾಲೂಕಿಗೆ ತಲಾ 5 ರಂತೆ ಒಟ್ಟು 30 ಸಾಧಕ ರೈತರಿಗೆ ‘ಶ್ರೇಷ್ಠ ಕೃಷಿ’ ಪ್ರಶಸ್ತಿ ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಸಾಧಕ ರೈತರಿಗೆ ಸಮ್ಮಾನ : ಶಿವುಕುಮಾರ ಶಂಕ್ರಯ್ಯ ಹಿರೇಮಠ, ಗುರುಪಾದಸ್ವಾಮಿ ಅಡವಿಸ್ವಾಮಿಮಠ, ಈರಪ್ಪ ಗಣಿ, ಪ್ರಭು ಗುಂಡಿ, ಮಲ್ಲಪ್ಪ ಉಳ್ಳಾಗಡ್ಡಿ, ಆನಂದ ಮೊಕಾಶಿ, ನಿಜಲಿಂಗಪ್ಪ ಹೊಸಗೌಡರ, ನಿಂಗನಗೌಡ ಗೌಡರ, ರೇಖಾ ಬಿಳ್ಳೂರ, ಗಂಗಯ್ಯ ಹಿರೇಮಠ.

ತಾಲೂಕಾ ಮಟ್ಟದಲ್ಲಿ
ಬಾಗಲಕೋಟೆ ತಾಲೂಕಿಗೆ:-ಕಲ್ಲವ್ವ ಬಿರಾದಾರ, ಅನಸೂಯಾ ಕಾಖಂಡಕಿ, ನರೇಶ ಮೇಕಾ, ಆದಯ್ಯ ಮಠ, ಚನ್ನಪ್ಪ ನಂದಿ, ಜಮಖಂಡಿ ತಾಲೂಕಿಗೆ ವೆಂಕಟೇಶ ಕನಕನ್ನವರ, ರಾಮಲಿಂಗ ಶೆಟ್ಟನ್ನವರ, ಶೇಖರ ಮನೋಜ, ಕುಸುಮಾ ಕಾಂತಿ, ರಂಚನಾ ದಾನಪ್ಪ ತಳಗೇರಿ, ಬಾದಾಮಿ ತಾಲೂಕಿಗೆ ಹನಮಪ್ಪ ಗೋಗೇರಿ, ಭೀಮಪ್ಪ ಪೂಜಾರಿ, ರಾಮನಗೌಡ ಗೌಡ್ರ, ಬಸವರಾಜ ಗೌಡರ, ಬೀಳಗಿ ತಾಲೂಕಿಗೆ ಸುನಿತಾ ಮೇಟಿ, ಪಾಂಡುರಂಗ ಜಾನಮಟ್ಟಿ, ಹನಮಂತಪ್ಪ ಕರಿಗಾರ, ಸಿದ್ದಪ್ಪ ತುಪ್ಪದ, ಸದಾಶಿವ ಟಕ್ಕಳಕಿ, ಮುಧೋಳ ತಾಲೂಕಿಗೆ ಪರಮಾನಂದ ಲೋಗಾಂವಿ, ಸುರೇಶ ಕಣಬೂರ, ಲಕ್ಷ್ಮಣ ಅಂಬಿ, ವೀರಪ್ಪ ಬೋರಡ್ಡಿ, ಪ್ರಶಾಂತ ನಾಯಕ, ಹುನಗುಂದ ತಾಲೂಕಿಗೆ ಮಹಾಂತೇಶ ವಾಲಿಕಾರ, ವೀರಪ್ಪ ಸುಂಕದ, ಶ್ರೀಶೈಲ ಸುಂಕದ, ರಾಮಪ್ಪ ಹುಲ್ಲಿಕೇರಿ ಹಾಗೂ ಶ್ರೀಶೈಲ ಗೌಡರ ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights