ಗೌರಿ-ಗಣೇಶ ಹಬ್ಬದ ಖರೀದಿ ಬಲೋ ಜೋರು : ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಇಂದು ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಡಗರ-ಸಂಭ್ರಮ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಜನ ಕಿಗುಗುಡುತ್ತಿದ್ದರು. ಖರೀದಿ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬದ ಪ್ರಯುಕ್ತ ಬೆಲೆ ಏರಿಕೆ ಬಿಸಿ ಕೂಡ ತಟ್ಟಿದೆ.
ಹೌದು… ಗೌರಿ–ಗಣೇಶ ಹಾಗೂ ಪೂಜಾ ಸಾಮಾಗ್ರಿಗಳ ಖರೀದಿಗೆ ಜನ ಬೆಳೆಗ್ಗೆಯಿಂದಲೇ ಮಾರುಕಟ್ಟೆಗಳಿಗೆ ಮುಗಿ ಬಿದ್ದಿದ್ದಾರೆ. ವಸ್ತುಗಳ ಬೆಲೆ ಏರಿಕೆ ನಡುವೆಯೂ ವಹಿವಾಟು ಜೋರಾಗಿ ನಡೆದಿದೆ.
ಹಾಗಾದ್ರೆ ಯಾವ ಸಾಮಾಗ್ರಿ ಬೆಲೆ ಎಷ್ಟು ಅನ್ನೋದನ್ನ ನೋಡೋಣ :-
ಮಲ್ಲಿಗೆ ಬಿಡಿ ಹೂವು ಕೆಜಿಗೆ 1200, ಕನಕಾಂಬರ 1000, ಗುಲಾಬಿ 120, ಬಟನ್ ಹೂವು 130, ಮಾರಿ ಗೋಲ್ಡ್ ಹಾಗೂ ಬಿಳಿ ಸೇವಂತಿಗೆ ಹೂವು 120, ಚೆಂಡು ಹೂವು 50 ಇತ್ತು.
ಇನ್ನೂ ಏಲಕ್ಕಿ ಬಾಳೆ ಕೆಜಿಗೆ 90, ದಾಳಿಂಬೆ 140, ಕಿತ್ತಾಳೆ 100, ಸೇಬು 200, ಸೀಬೆಹಣ್ಣು 60, ಮೋಸಂಬಿ 60, ಬಿಳಿದ್ರಾಕ್ಷಿ 150, ಸಪೋಟ 100ರೂಪಾಯಿ ಕೆಜಿಗೆ ಇತ್ತು. ಪೂಜಾ ಸಾಮಾಗ್ರಿಗಳ ಖರೀಧಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.