ಜೀ಼ ಕನ್ನಡದಲ್ಲಿ 3ಡಿ ಐತಿಹಾಸಿಕ ಚಲನಚಿತ್ರ ’ಕುರುಕ್ಷೇತ್ರ’ ಪ್ರೇಕ್ಷಕರ ಮುಂದೆ…

ಕುರುಕ್ಷೇತ್ರದ ಟೆಲಿವಿಷನ್ ಪ್ರೀಮಿಯರ್ ಪ್ರದರ್ಶಿಸುತ್ತಿದೆ. ಹಿಂದೂಗಳ ಧರ್ಮಗ್ರಂಥವಾದ ಮಹಾಭಾರತ, ಒಂದು ಅದ್ಭುತ ದೃಶ್ಯಕಾವ್ಯವಾಗಿದ್ದು ಇದರ ಬೋಧನೆಗಳು ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಆಳವಾಗಿ ಬೇರೂರಿವೆ.ಇದನ್ನು ಕನ್ನಡದ ಹಿರಿತೆರೆಗೆ ತರುವ ಮೂಲಕ ಮುನಿರತ್ನ ಹಾಗೂ ನಾಗಣ್ಣ ಮಹಾಭಾರತದ ಕಥಾಹಂದರವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.

ನಾಗಣ್ಣರವರ ಅತ್ಯದ್ಭುತ ದೃಶ್ಯಕಾವ್ಯ ’ಕುರುಕ್ಷೇತ್ರ’ ಚಲನಚಿತ್ರ ಸುಂದರವಾಗಿ ಕೆತ್ತಲಾಗಿದ್ದು ದುರ್ಯೋಧನನ ದೃಷ್ಟಿಕೋನದ ಮೂಲಕ ಮಹಾಭಾರತದ ಮೌಲ್ಯಗಳನ್ನು ನಿರೂಪಿಸಲಾಗಿದೆ. ಕನ್ನಡದ ಈ 3ಡಿ ಐತಿಹಾಸಿಕ ಚಲನಚಿತ್ರ ದುರ್ಯೋಧನನ ಮತ್ತೊಂದು ಭಾಗವನ್ನು ತೆರೆದಿಟ್ಟಿದ್ದು, ಇದು’ಡಿಬಾಸ್’ ದರ್ಶನ್ ರವರ ಐವತ್ತನೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಹೊಂದಿದೆ.ದುರ್ಯೋಧನನಾಗಿ ದರ್ಶನ್ ಅಭಿನಯ ಕಣ್ಣಿಗೆ ಕಟ್ಟುವಂತಿದ್ದು ವೈಭವೋಪೇತವಾಗಿ ಮೂಡಿಬಂದಿದೆ. ಈ ಬಹುತಾರಾಗಣದ ಚಿತ್ರದಲ್ಲಿ ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಭೀಷ್ಮನಾಗಿ ದಿವಂಗತ ’ರೆಬೆಲ್ ಸ್ಟಾರ್’ ಅಂಬರೀಶ್, ದುರ್ಯೋಧನನಾಗಿ ದರ್ಶನ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಮನಾಗಿ ದಾನಿಶ್ ಅಖ್ತರ್, ಶ್ರೀಕೃಷ್ಣನಾಗಿ ವಿ. ರವಿಚಂದ್ರನ್, ಮೇಘನಾರಾಜ್, ಹರಿಪ್ರಿಯರಂತಹ ಅದ್ಭುತ ನಟನಟಿಯರಿದ್ದು, ಪ್ರತಿಯೊಬ್ಬರ ಪಾತ್ರ ಅತ್ಯುತ್ತಮವಾಗಿ ಮೂಡಿಬಂದಿದೆ.ದರ್ಶನ್ ರವರ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ.ಇದು ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ರವರ ಕೊನೆಯ ಚಿತ್ರವಾಗಿದೆ.ಶ್ರೀಮಂತಿಕೆಯ ಸಿನಿಮಾ ನಿರ್ಮಾಣಕ್ಕೆ ಹೆಸರಾದ ಮುನಿರತ್ನ ನಾಯ್ಡು ರವರ ಈ ಚಿತ್ರವನ್ನು,Zee ಕನ್ನಡ ಮತ್ತು Zee ಕನ್ನಡ ಹೆಚ್ ಡಿ ಯಲ್ಲಿ ಇದೇ ಭಾನುವಾರ ಡಿಸೆಂಬರ್ 15, ಸಂಜೆ 6:30 ಕ್ಕೆ ’ಕುರುಕ್ಷೇತ್ರ’ದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರ ಮಾಡಲಿದೆ.

ಚಲನಚಿತ್ರ ದುರ್ಗಾಪ್ರಸಾದ್ ಕೇತ ಮತ್ತು ಜೀಮನ್ ಪುಲ್ಲೆಲಿ ರವರ ದೃಶ್ಯ ಪರಿಣಾಮಗಳನ್ನು ಅತ್ಯುತ್ತಮವಾಗಿ ತೋರಿಸುತ್ತದೆ ಮತ್ತು ಹರಿಕೃಷ್ಣರವರ ಮಧುರ ಗೀತೆಗಳು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದು ಚಿತ್ರದ ಅಗತ್ಯವನ್ನು ಪೂರ್ಣಗೊಳಿಸಿದೆ.ಕಾರಣಾಂತರಗಳಿಂದ ಚಿತ್ರಮಂದಿರದಲ್ಲಿ ಈ ಅದ್ಭುತ ದೃಶ್ಯಕಾವ್ಯವನ್ನು ವೀಕ್ಷಿಸಲು ಅಸಾಧ್ಯವಾದ ಪ್ರೇಕ್ಷಕರಿಗಾಗಿ ಜ಼ೀ ವಾಹಿನಿ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ. ಕುಟುಂಬದ ಸದಸ್ಯರೆಲ್ಲರೂ ಈ ಸದಭಿರುಚಿಯ ಚಿತ್ರವನ್ನು ವೀಕ್ಷಿಸಬಹುದಾಗಿದ್ದು, ಚಾನೆಲ್ ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನ ಅತಿದೊಡ್ಡ ವ್ಯಕ್ತಿಗಳನ್ನು ಕುರುಕ್ಷೇತ್ರ ಆಡಿಯೋ ಆರಂಭಕ್ಕಾಗಿ ಒಂದೇ ವೇದಿಕೆಯ ಮೇಲೆ ಕರೆತಂದಿತ್ತು; ಇದು ನಿರ್ದೇಶಕ ಮುನಿರತ್ನರವರ ಸಂಗೀತಾಸಕ್ತಿಯನ್ನು ಅತ್ಯುತ್ಸಾಹದಿಂದ ಆಚರಿಸಿದ್ದಕ್ಕೆ ಸಾಕ್ಷಿಯಾಗಿತ್ತು. ಕನ್ನಡದ ಅದ್ಭುತ ಚಲನಚಿತ್ರವನ್ನು ಕಿರುತೆರೆಯಲ್ಲಿ ವೀಕ್ಷಿಸುವ ಅವಕಾಶವನ್ನು ನಮ್ಮ ಕನ್ನಡದ ಹೆಮ್ಮೆಯ ಜ಼ೀ ಕನ್ನಡ ನೀಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights