ಜೆಎನ್‌ಯು ಹಿಂಸಾಚಾರದಲ್ಲಿ ಮುಸುಕುಧಾರಿ ಕಾರ್ಯಕರ್ತರು ನಮ್ಮವರೇ ಆಗಿದ್ದು ‘ಆತ್ಮರಕ್ಷಣೆ’ಗಾಗಿ ಶಸ್ತ್ರಸಜ್ಜಿತರಾಗಿದ್ದರು ಎಂದು ಎಬಿವಿಪಿ ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್ ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿವಾಹಿನಿ ಟೈಮ್ಸ್‌ ನೌ ಚರ್ಚೆಯಲ್ಲಿ, ಟಿವಿ ನಿರೂಪಕಿ ಫೋಟೊವೊಂದನ್ನು ತೋರಿಸಿ ಈ ಇಬ್ಬರು abvp ಕಾರ್ಯಕರ್ತರು ಲಾಠಿ ಏಕೆ ಹಿಡಿದಕೊಂಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಆಗ ಉತ್ತರಿಸಿದ ಎಬಿವಿಪಿ ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋಂಕರ್, ಅವರು ನಮ್ಮ ಕಾರ್ಯಕರ್ತರೆ ಆಗಿದ್ದು, ವಾಟ್ಸಾಪ್‌ಗಳಲ್ಲಿ ನಮ್ಮ ಮೇಲೆ ದಾಳಿ ನಡೆಯುತ್ತದೆ ಎಂದು ಭೀತ ಸೃಷ್ಟಿಸಲಾಗಿತ್ತು. ಅದಕ್ಕಾಗಿ ನಾವು ಜೆಎನ್‌ಯುನಲ್ಲಿರುವ ಎಬಿವಿಪಿ ಸದಸ್ಯರಿಗೆ ಸ್ವರಕ್ಷಣೆಗಾಗಿ ರಾಡ್‌ಗಳು, ಪೆಪ್ಪರ್ ಸ್ಪ್ರೇ ಮತ್ತು ಆಸಿಡ್ ಅನ್ನು ಜೊತೆಗಿಟ್ಟುಕೊಳ್ಳಿ ಎಂದು ಸೂಚಿಸಿದ್ದೆವು ಎಂದು ತಿಳಿಸಿದ್ದಾರೆ. ವಿಡಿಯೋ ನೋಡಿ

 

 

“ನಮ್ಮ ಎಲ್ಲಾ ವಾಟ್ಸಾಪ್ ಗುಂಪುಗಳಲ್ಲಿ ತುಂಬಾ ಭೀತಿ ಹರಡಿತ್ತು … ಆಗ ನಾವು ಆತ್ಮರಕ್ಷಣೆಗಾಗಿ ನೀವು ಎಲ್ಲಿಯಾದರೂ ಹೊರಗಡೆ ಹೋಗಬೇಕಾದರೆ ಗುಂಪುಗಳಾಗಿ ಹೋಗಿ, ಲಾಠಿ, ಕೋಲುಗಳನ್ನು ಜೊತೆಗಿಟ್ಟುಕೊಳ್ಳಿ, ನಿಮಗೆ ಏನಾದರೂ ಸಿಕ್ಕಿದರೆ ಅದು ಪೆಪ್ಪರ್ ಸ್ಪ್ರೇ, ಆಸಿಡ್ ನಂತದದು ಸಿಕ್ಕರೆ ಇಟ್ಟುಕೊಳ್ಳಿ ಎಂದು ಸೂಚಿಸಿದ್ದೆವು” ಎಂದು ಸೋಂಕರ್ ಹೇಳಿದ್ದಾರೆ.

ಜನವರಿ 5 ರ ಭಾನುವಾರ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆ. ಆಗ ಭಾಗವಹಿಸಿಸಿದ್ದ ಇತರ ಪ್ಯಾನಲಿಸ್ಟ್‌ಗಳು ದಾಳಿಕೋರರು ಎಬಿವಿಪಿಯವರೆ ಎಂದು ರಾಷ್ಟ್ರೀಯ ಟಿವಿಯಲ್ಲಿಯೇ ಒಪ್ಪಿಕೊಂಡಿದ್ದಕ್ಕೆ ಥ್ಯಾಂಕ್ಸ್‌ ಸೋಂಕರ್‌ ಎಂದಿದ್ದಾರೆ.

ಆಗ ಕೂಡಲೇ ಮಾತು ಬದಲಿಸಿದ ಸೋಂಕೆರ ನಾನು ಆ ಅರ್ಥದಲ್ಲಿ ಹೇಳಲಿಲ್ಲ ಅವರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಿದ್ದಾರೆ ಎಂದಷ್ಟೇ ಹೇಳಿಕೆ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೂರ್ಣ ಚರ್ಚೆ ಇಲ್ಲಿದೆ ನೋಡಿ.