ತಂದೆಯ ಸಾವಿನ ದುಃಖದಲ್ಲಿದ ಮಗನಿಗೆ ಬಂದ ಎಸ್‌ಎಂಎಸ್‌ನಲ್ಲಿ ಏನಿತ್ತು ಗೊತ್ತಾ

ಗುಜರಾತ್‌ ರಾಜ್ಯದ ಸಾಗರ್‌ ಷಾ ಎಂಬುವವರ ತಂದೆ ಕೊರೊನಾ ಸೋಂಕಿಗೆ ಬಾದಿತರಾಗಿ ಕೊನಯುಸಿರೆಳೆದ್ದರು. ದುಃಖದಲ್ಲಿದ್ದ ಸಾಗರ್‌ ಅವರ ಮೊಬೈಲ್‌ಗೆ ಒಂದು ಎಸ್‌ಎಂಎಸ್‌ ಬಂತು. ಎಸ್‌ಎಂಎಸ್‌ ನೋಡಿದ ಸಾಗರ್‌ಗೆ ಒಂದೆಡೆ ದುಃಖವಾದರೆ, ಮತ್ತೊಂದೆಡೆ ಅದಕ್ಕಿಂತ ಹೆಚ್ಚಿನ ಕೋಪ ಅವರಲ್ಲಿ ಉದ್ಭವಿಸಿತ್ತು. ಅದಕ್ಕೆ ಕಾರಣವಿಷ್ಟೇ, ಅವರಿಗೆ ಬಂದ ಎಸ್‌ಎಂಎಸ್‌ನಲ್ಲಿ ಅವರ ತಂದೆ “ಕಿಶೋರ್‌ಭಾಯ್ ಹಿರಾಲಾಲ್‌ ಷಾ ಅವರನ್ನು ಮೇ 30 ರಂದು ಅಹಮದಾಬಾದ್‌ನಲ್ಲಿರುವ ಅಸರ್ವಾ ಕೊರೊನಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ” ಎಂದು ಸಂದೇಶ ಕಳಿಸಲಾಗಿತ್ತು. ಆದರೆ, ಸಾಗರ್ ಅವರ ತಂದೆ ಮೇ 16ರಂದೇ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯೂ ಮುಗಿದಿತ್ತು.

ಇದು ಆಸ್ಪತ್ರೆಯವರ ನಿರ್ಲಕ್ಷಕ್ಕೆ ಒಂದು ಉದಾಹರಣೆಯೆಂದು ನಾನು ಅರಿತುಕೊಂಡೆ. ಮೇ 16 ರಂದು ನನ್ನ ತಂದೆಯ ಅಂತ್ಯಕ್ರಿಯೆ ಮುಗಿಸಿದ್ದೇನೆ. ಆ ಸಂದೇಶ, ತಂದೆಯ ಶವವನ್ನು ಹಾಗೂ ಅವರ 10,000 ಹಣವನ್ನೂ ಒಳಗೊಂಡು ಆಭರಣಗಳಿದ್ದ ವ್ಯಾಲೆಟ್‌ಅನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಬರಲು ಅವರು ಪೊಲೀಸರಿಗೆ ದೂರು ನೀಡಿದ್ದನ್ನು ನೆನಪಿಸಿತು ಎಂದು ಸಾಗರ್ ಕೋಪದಿಂದಲೇ ಹೇಳಿದರು.

ಅವರು ತಮ್ಮ ತಂದೆಯ ಶವವನ್ನು ಪಡೆದುಕೊಳ್ಳಲು, ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಅವರು ಮಧ್ಯ ಪ್ರವೇಶಿಸಬೇಕಾಯಿತು. ಇಲ್ಲವಾದರೆ ಮೃತದೇಹ ಸಿಗುತ್ತಿತ್ತು ಎಂದೂ ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ ಮೃತ ದೇಹವನ್ನು ಗಂಟೆಗಳ ಕಾಯುವಿಕೆಯ ನಂತರ ಹಸ್ತಾಂತರಿಸಲಾಯಿತು.

ದರಿಯಾಪುರದಲ್ಲಿ ತನ್ನ ಸಹೋದರನೊಂದಿಗೆ ಟ್ಯೂಷನ್ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಸಾಗರ್, ತನ್ನ ದುಃಖವನ್ನು ಕಿರು ವಿಡಿಯೋ ಸಂದೇಶದಲ್ಲಿ ಚಿತ್ರೀಕರಿಸಿ ಅದನ್ನು ಪ್ರಸಾರ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿವಿಲ್ ಆಸ್ಪತ್ರೆ ಮತ್ತು ಗುಜರಾತ್ ಕ್ಯಾನ್ಸರ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ (ಜಿಸಿಆರ್ಐ) ಗೆ ಸಂಬಂಧಿಕರನ್ನು ದಾಖಲಿಸಿದ ಜನರ ದುಃಸ್ಥಿತಿಯನ್ನು ವಿವರಿಸುವ “ಸಂಪೂರ್ಣ ನಿರ್ಲಕ್ಷ್ಯ” ದ ಮತ್ತೊಂದು ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅದೇ ಆಸ್ಪತ್ರೆಯನ್ನು ಗುಜರಾತ್ ಹೈಕೋರ್ಟ್ ಕಳೆದ ವಾರ “ಕತ್ತಲಕೋಣೆ” ಎಂದು ಕರೆದಿತ್ತು.

“ಒಂದೇ ರೀತಿಯ ಹೆಸರಿನ ಇಬ್ಬರು ರೋಗಿಗಳಿದ್ದರಿಂದ ಗೊಂದಲ ಉಂಟಾಗಿದೆ. ಸರ್ವರ್ ಡೌನ್‌ ಆದ ನಂತರ ಡೇಟಾ ಎಂಟ್ರಿಯಲ್ಲಿ ದೋಷ ಕಂಡುಬಂದಿದೆ, ಅದನ್ನು ಸರಿಪಡಿಸಲಾಗಿದೆ” ಎಂದು ಕೊರೊನಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ.ಸಂಜಯ್ ಕಪಾಡಿಯಾ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಒಂದು ದಿನ ಮೊದಲು, ಅಹಮದಾಬಾದ್‌ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ನಿಕೋಲ್ ನಿವಾಸಿ ನಿಲೇಶ್ ನಿಕ್ಟೆಗೆ ಅವರ ಮಾವ ದೇವರಾಮ್ ಭಿಸಿಕರ್ ಅವರ ಕೋವಿಡ್ ವರದಿ ಋಣಾತ್ಮಕವಾಗಿದ್ದು, ಅವರನ್ನು ಸೋಂಕಿತರಿಲ್ಲದ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಕರೆಗಳು ಬಂದವು. ಆದರೆ, ಮೇ 29 ಮಧ್ಯಾಹ್ನವೇ ದೇವರಾಮ್ ನಿಧನಹೊಂದ್ದರು. ಅವರ ಅಂತ್ಯಕ್ರಿಯೆ ಮುಗಿದ ನಂತರ ನಿಲೇಶ್‌ ಅವರಿಗೆ ಕರೆ ಬಂದಿದ್ದು, ಅವರೂ ಕೂಡ ಆಘಾತಕ್ಕೊಳಗಾಗಿದ್ದರು.

” ಒಂದು ಕ್ಷಣ, ನಾನು ತುಂಬಾ ಆಘಾತಕ್ಕೊಳಗಾಗಿದ್ದೆ. ನಾನು ಬೇರೊಬ್ಬರ ಅಂತ್ಯಕ್ರಿಯೆ ಮಾಡಿರಬಹುದು ಎಂದು ಗೊಂದಲವಾಯಿತು. ಆದರೆ, ನಂತರದ ವಿಚಾರಣೆಯಲ್ಲಿ ಆಸ್ಪತ್ರೆಯ ಪ್ರಾಧಿಕಾರವು ತನ್ನ ವರದಿಯನ್ನು ನವೀಕರಿಸಿಲ್ಲ ಎಂದು ತಿಳಿದುಬಂದಿದೆ. ಇದು ಈ ಆಘಾತಕಾರಿ ಗೊಂದಲಕ್ಕೆ ಕಾರಣವಾಯಿತು” ಎಂದು ನಿಲೇಶ್ ತಿಳಿಸಿದ್ದಾರೆ.

ದೇವರಾಮ್ ಈಗಾಗಲೇ ತೀರಿಕೊಂಡಿದ್ದಾರೆ ಎಂದು ತಿಳಿಯದೆ ಕಾಲ್ ಸೆಂಟರ್ನ ವ್ಯಕ್ತಿಯು ಋಣಾತ್ಮಕ ವರದಿಯ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ ಎಂದು ರಾಜ್ಯ ಸರ್ಕಾರ ನಂತರ ಬಿಡುಗಡೆ ಮಾಡಿದೆ. ಘಟನೆಯ ಹಿಂದೆ “ಬೇಜವಾಬ್ದಾರಿ ಅಥವಾ ಅಜಾಗರೂಕತೆ” ಇದೆ ಎಂಬುದನ್ನು ಸರ್ಕಾರ ನಿರಾಕರಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights