ಮದ್ಯಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ : ಮದ್ಯಮಾರಾಟದ ಸಮಯ ಹೆಚ್ಚಳ!

ಲಾಕ್ ಡೌನ್ 5.0 ಗೆ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ್ದು, ಮದ್ಯಮಾರಾಟದ ಸಮಯವನ್ನು ಹೆಚ್ಚಿಸಿದೆ.

ಹೌದು… ಈ ಹಿಂದೆ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತು. ಸದ್ಯ ಈ ಅವಧಿಯನ್ನು 2 ಗಂಟೆಗಳ ಕಾಲ ಅಂದ್ರೆ ರಾತ್ರಿ 9 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈಗಾಗಲೇ   ಬೆಂಗಳೂರು ಪೊಲೀಸ್ ಆಯುಕ್ತರು ಭಾಸ್ಕರ್ ರಾವ್ ಅವರು ಹೇಳೀದಂತೆ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿ ಇರುವುದರಿಂದ 9 ಗಂಟೆಯ ನಂತರ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಅಗತ್ಯ ಸಂದರ್ಭಗಳು ಬಿಟ್ಟರೆ ಸುಖ ಸುಮ್ಮನೇ ಓಡಾಡುವಂತಿಲ್ಲ. ಹೀಗಾಗಿ ಮದ್ಯ ಮಾರಾಟಕ್ಕೆ ರಾತ್ರಿ 9ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಮದ್ಯ ಮಾರಾಟ 3.0 ವರೆಗೂ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸರ್ಕಾರದ ಬೊಕ್ಕಸ ಭರ್ಥಿ ಮಾಡಲು ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಒಂದು ತಿಂಗಳಾಗುತ್ತಾ ಬಂದಿದೆ. ಇದರ ಜೊತೆಗೆ ಸದ್ಯ ರಾಜ್ಯ ಸರ್ಕಾರ ಮದ್ಯ ಮಾರಾಟ ಸಮಯವನ್ನು 7ರಿಂದ 9 ಗಂಟೆಗೆ ಹೆಚ್ಚಿಸಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights