ತನ್ನದೇ ನಿಮಯಗಳನ್ನು ಟ್ವಿಟರ್‌ ಸರಿಯಾಗಿ ಪಾಲಿಸುತ್ತಿದೆಯೇ?: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್‌ ಪಕ್ಷದ ಟ್ವಿಟರ್‌ ಹ್ಯಾಂಡಲ್‌ ಮತ್ತು ಪಕ್ಷದ ಹಲವು ಮುಖಂಡರ ಖಾತೆಗಳನ್ನು ಟ್ವಿಟರ್‌ ಲಾಕ್‌ ಮಾಡಿದೆ. ಹೀಗಾಗಿ, ಟ್ವಿಟರ್‌ ವಿರುದ್ದ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ ಗಾಂಧಿ, ಟ್ವಿಟರ್ ತನ್ನದೇ ನಿಯಮಗಳನ್ನು ಪಾಲಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ಟ್ವಿಟರ್‌ ಕೈಜೋಡಿಸಿದೆ. ಈ ಮೂಲಕ ಪ್ರಜಾತಂತ್ರವನ್ನು ಹತ್ತಿಕ್ಕುವ ಕೃತ್ಯದಲ್ಲಿ ಟ್ವಿಟರ್‌ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರ ಖಾತೆಗಳನ್ನು ಅಮಾನತು ಮಾಡಿರುವ ಟ್ವಿಟರ್‌ ತನ್ನದೇ ನಿಯಮಗಳನ್ನು ಪಾಲಿಸುತ್ತಿದೆಯೇ ಅಥವಾ ಮೋದಿ ಸರ್ಕಾರದ ನೀತಿಯನ್ನು ಅನುಸರಿಸುತ್ತಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ನಾಯಕರು ಟ್ವೀಟ್‌ ಮಾಡಿದ ಚಿತ್ರಗಳನ್ನು ಹೋಲುವಂತಹ ಚಿತ್ರಗಳನ್ನೇ ಸುಪ್ರೀಂ ಕೋರ್ಟ್‌ ಆಯೋಗವು ಈ ಹಿಂದೆ ಟ್ವೀಟ್‌ ಮಾಡಿತ್ತು. ಆಯೋಗದ ಖಾತೆಯನ್ನು ಏಕೆ ಅಮಾನತು ಮಾಡಲಿಲ್ಲ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಕಳೆದ ವಾರ ದೆಹಲಿಯ ನಂಗಲ್ ಅತ್ಯಾಚಾರ ಸಂತ್ರಸ್ತೆ, ದಲಿತ ಬಾಲಕಿಯ ಪೋಷಕರನ್ನು ಕಾಂಗ್ರೆಸ್‌ ನಾಯಕರು ಭೇಟಿಯಾದ ಸಂದರ್ಭದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನ ಟ್ವಿಟರ್‌ನ ಹ್ಯಾಂಡಲ್‌ಅನ್ನು ಲಾಕ್‌ ಮಾಡಲಾಗಿದೆ. ಈಗಾಗಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಐದು ಮಂದಿ ಇತರರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಟ್ವಿಟರ್‌ ಖಾತೆ ಲಾಕ್‌; ಮೋದಿಜೀ ನೀವೆಷ್ಟು ಹೆದರಿದ್ದೀರಿ ಎಂದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights