ಕಾಂಗ್ರೆಸ್‌ ಟ್ವಿಟರ್‌ ಖಾತೆ ಲಾಕ್‌; ಮೋದಿಜೀ ನೀವೆಷ್ಟು ಹೆದರಿದ್ದೀರಿ ಎಂದ ಕಾಂಗ್ರೆಸ್‌!

ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಮೋದಿಜೀ ನೀವು ಇಷ್ಟೊಂದು ಭಗೊಂಡಿದ್ದೀರಾ ಎಂದು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದೆ.

ʼಪಕ್ಷದ ಟ್ವಿಟ್ಟರ್ ಹ್ಯಾಂಡಲ್ ಇತರರ ಅನುಮತಿಯಿಲ್ಲದೆ ಅವರ ಖಾಸಗಿ ಮಾಹಿತಿಯನ್ನು ಪೋಸ್ಟ್ ಮಾಡಿದೆ. ಈ ಮೂಲಕ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಬ್ಲಾಕ್ ಮಾಡಲಾಗಿದೆ’ ಎಂದು ಟ್ವಿಟರ್‌ ಹೇಳಿದೆ.

ಈ ಬಗ್ಗೆ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, “ಮೋದೀಜಿ, ನೀವು ಎಷ್ಟು ಭಯಗೊಂಡಿದ್ದೀರಿ? ನೆನಪಿಟ್ಟುಕೊಳ್ಳಿ: ಕಾಂಗ್ರೆಸ್ ಪಕ್ಷ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ, ಅಹಿಂಸೆ ಹಾಗೂ ಜನರ ದೃಢಚಿತ್ತದೊಂದಿಗೆ ಹೋರಾಡಿದೆ. ನಾವು ಆಗ ಗೆದ್ದಿದ್ದೇವೆ, ಈಗ ಮತ್ತೆ ಗೆಲ್ಲುತ್ತೇವೆ” ಎಂದು ಬರೆದಿದೆ.

ನಂಗಲ್ ಅತ್ಯಾಚಾರ ಸಂತ್ರಸ್ತೆ, ದಲಿತ ಬಾಲಕಿಯ ಪೋಷಕರನ್ನು ಕಾಂಗ್ರೆಸ್‌ ನಾಯಕರು ಭೇಟಿಯಾದ ಸಂದರ್ಭದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನ ಟ್ವಿಟರ್‌ನ ಹ್ಯಾಂಡಲ್‌ಅನ್ನು ಲಾಕ್‌ ಮಾಡಲಾಗಿದೆ. ಈಗಾಗಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಐದು ಮಂದಿ ಇತರರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ನವರು ನೆಹರು ಹುಕ್ಕಾಬಾರ್ ತೆರೆಯಲಿ – ಸಿಟಿ ರವಿ ವಿವಾದಾತ್ಮಕ ಹೇಳಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights