ಕಾನ್ಪುರದಲ್ಲಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ : ತಂದೆಗೆ ಹೊಡೆಯದಂತೆ ಪರಿಪರಿಯಾಗಿ ಬೇಡಿಕೊಂಡ ಪುಟ್ಟ ಬಾಲಕಿ!

ಪುಟ್ಟ ಬಾಲಕಿ ತಂದೆಗೆ ಹೊಡೆಯದಂತೆ ಪರಿಪರಿಯಾಗಿ ಬೇಡಿಕಿಕೊಂಡರು ಬಿಡದ ದಾಳಿಕೊರರು ಮುಸ್ಲಿಂ ವ್ಯಕ್ತಿಯನ್ನು ಮನಸೋಯಿಚ್ಚೆ ಥಳಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರ್ ಪಟ್ಟಣದಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಬೀದಿಯಲ್ಲಿ ಹಲ್ಲೆ ನಡೆಸಿ ಮೆರವಣಿಗೆ ಮಾಡಿ “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಲಾಗಿದೆ. ಮೆರವಣಿಗೆ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳೀಯರು ಚಿತ್ರೀಕರಿಸಿದ ಘಟನೆಯ ದೃಶ್ಯಗಳಲ್ಲಿ ಮುಸ್ಲಿಂ ವ್ಯಕ್ತಿಯ ಪುಟ್ಟ ಮಗಳು ತಂದೆಗೆ ಹೊಡೆಯದಂತೆ ಪರಿಪರಿಯಾಗಿ ಬೇಡಿಕೊಂಡರೂ ಮನಕರಗದ ದಾಳಿಕೋರರು ಮನಸೋಯಿಚ್ಚೆ ಥಳಿಸಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಪುಟ್ಟ ಬಾಲಕಿ ತನ್ನ ತಂದೆಯನ್ನು ಉಳಿಸುವಂತೆ ಬೇಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಛೇದಕದಿಂದ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಮುಸ್ಲಿಮರು ತಮ್ಮ ಪ್ರದೇಶದಲ್ಲಿ ಹಿಂದೂ ಹುಡುಗಿಯನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಬಲಪಂಥೀಯ ಗುಂಪು ಬಜರಂಗದಳ ಆರೋಪಿಸಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

ಹೇಳಿಕೆಯೊಂದರಲ್ಲಿ, ಕಾನ್ಪುರ ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಯ ಕಂಪ್ಲೈಂಟ್ ಆಧರಿಸಿ ಸ್ಥಳೀಯ ಸುಮಾರು 10 ಅಪರಿಚಿತ ಜನರ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದಾರೆ.

“ನಾನು ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಇ-ರಿಕ್ಷಾವನ್ನು ಓಡಿಸುತ್ತಿದ್ದೆ, ಆಗ ಆರೋಪಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಲು ಮತ್ತು ನಿಂದಿಸಲು ಆರಂಭಿಸಿದರು. ಪೋಲಿಸ್‌ನಿಂದಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ” ಎಂದು ಇ-ರಿಕ್ಷಾ ಚಾಲಕನಾದ ಮುಸ್ಲೀಂ ವ್ಯಕ್ತಿ ದೂರು ನೀಡಿದ್ದಾರೆ.

ಈ ವ್ಯಕ್ತಿ ಮುಸ್ಲಿಂ ಕುಟುಂಬದ ಸಂಬಂಧಿಯಾಗಿದ್ದು, ಅವರ ಹಿಂದೂ ನೆರೆಹೊರೆಯವರೊಂದಿಗೆ ಕಾನೂನು ವಿವಾದದಲ್ಲಿ ಭಾಗಿಯಾಗಿದ್ದಾರೆ. ಜುಲೈನಲ್ಲಿ ಕಾನ್ಪುರ್ ಪೊಲೀಸ್ ಹೇಳಿಕೆಯಲ್ಲಿ, ಎರಡು ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ.

ಮುಸ್ಲಿಂ ಕಡೆಯವರು ಮೊದಲು ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಯ ಎಫ್‌ಐಆರ್ ದಾಖಲಿಸಿದ್ದರು. ನಂತರ ಹಿಂದೂ ಕಡೆಯವರು “ಮಹಿಳೆಯ ವಿನಯವನ್ನು ಕೆರಳಿಸುವ ಉದ್ದೇಶದಿಂದ ಹಲ್ಲೆ” ಎಂದು ಆರೋಪಿಸಿದರು.

ಮೂಲಗಳು ಹೇಳುವಂತೆ ಬಜರಂಗದಳವು ಇತ್ತೀಚೆಗೆ ಈ ವಿಷಯದಲ್ಲಿ ಭಾಗಿಯಾಗಿತ್ತು ಮತ್ತು ಅವರು ಮುಸ್ಲಿಂ ಕುಟುಂಬದ ವಿರುದ್ಧ ಬಲವಂತದ ಮತಾಂತರದ ಆರೋಪಗಳನ್ನು ಮಾಡುತ್ತಿದ್ದರು.

“ಮುಸ್ಲೀಂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವಿಡಿಯೋವನ್ನು ನಾವು ನೋಡಿದ್ದೇವೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights