ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಅಖಾಡಕ್ಕಿಳಿಯಲಿದೆ ಎಎಪಿ: ಶಾತಂಲಾ ದಾಮ್ಲೆ

ಕರ್ನಾಟಕದಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿದ್ದು ಪ್ರಾಮಾಣಿಕ, ಸ್ವಚ್ಚ, ಜನಪರ ಆಡಳಿತದ ಬಗ್ಗೆ ಕಾಳಜಿ, ಒಲವು ಇರುವಂತಹ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ದೆಹಲಿ ಮಾದರಿ ವಿಶ್ವದ ಅನೇಕ ರಾಷ್ಟ್ರಗಳ ಗಮನ ಸೆಳೆದಿದೆ. ಅಲ್ಲದೇ ಇತ್ತೀಚೆಗೆ ದೇಶದ ಅನೇಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ದೆಹಲಿ ಮಾದರಿಯನ್ನು ಜನರು ಮೆಚ್ಚುತ್ತಿದ್ದಾರೆ, ರಾಷ್ಟ್ರೀಯ ಪಕ್ಷಗಳನ್ಜು ಬದಿಗೆ ಸರಿಸುತ್ತಿದ್ದಾರೆ, ಇದು ಬದಲಾವಣೆಯ ಪರ್ವ ಕಾಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋವಾ ಚುನಾವಣೆ: ಭರ್ಜರಿ ಗೆಲವು ಸಾಧಿಸಿದ ಬಿಜೆಪಿ; ಖಾತೆ ತೆರೆದ ಎಎಪಿ!

ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ನೇತೃತ್ವದಲ್ಲಿ ಸಹ ಸಂಚಾಲಕ ವಿಜಯ್ ಶರ್ಮಾ, ಹಿರಿಯ ಮುಖಂಡ ಗೋಪಾಲ್ ರೆಡ್ಡಿ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಅವರನ್ನು ಒಳಗೊಂಡ ತಂಡ ರಚನೆ ಮಾಡಿದ್ದು ಪ್ರತಿ ಜಿಲ್ಲಾವಾರು ಭೇಟಿ ನೀಡಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ, ಮೊದಲ ಹಂತವಾಗಿ ರಾಮನಗರ, ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಆಮ್ ಆದ್ಮಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವಂತಹ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 7669400410 ಮಿಸ್ ಕಾಲ್ ಕೊಡಬಹುದು ಎಂದು ತಿಳಿಸಿದ್ದಾರೆ. ಮುಖ್ಯ ವಕ್ತಾರ ಶರತ್ ಖಾದ್ರಿ ಉಪಸ್ಥಿತರಿದ್ದರು.


ಇದನ್ನೂ ಓದಿ: ಒಂದು ಸಿಸಿ ಕ್ಯಾಮರಾ ಬೆಲೆ 8 ಲಕ್ಷ: ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಎಎಪಿ ಪ್ರಶ್ನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights