ಏ.15 ರಿಂದ ಸ್ಮಾರ್ಟ್‌ ಲಾಕ್‌ಡೌನ್‌: ರಾಜ್ಯಾದ್ಯಂತ ಹೇಗಿರುತ್ತದೆ ಮುಂದಿನ ದಿನಗಳು?

ಏಪ್ರಿಲ್‌.15 ರಿಂದ ’ಸ್ಮಾರ್ಟ್‌ ಲಾಕ್‌ಡೌನ್’ ಜಾರಿ ಮಾಡುವ ಕುರಿತಾಗಿ ಚಿಂತನೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ವಿನಾಯಿತಿ ನೀಡದಿರಲು ರಾಜ್ಯ ಸರ್ಕಾರ  ತೀರ್ಮಾನಿಸಿದೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಲಾಕ್‌ಡೌನ್‌ ಬಗ್ಗೆ ಗಂಭೀರ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌.14ರ ವರೆಗೆ ಘೋಷಿಸಿದ್ದ ಲಾಕ್‌ಡೌನ್ ಅವಧಿ ನಾಳೆಗೆ ಮುಗಿಯಲಿದ್ದು, ರಾಜ್ಯ ಸರ್ಕಾರ ಈಗಾಗಲೇ ಈ ಅವಧಿಯಲ್ಲಿ ಏಪ್ರಿಲ್‌.30ರ ವರೆಗೆ ಮುಂದುವರೆಸಿದೆ. ಅಲ್ಲದೆ, ಯಾವ ಜಿಲ್ಲೆಗಳಲ್ಲಿ ಯಾವ ವಾರ್ಡ್‌‌ಗಳಲ್ಲಿ ಈವರೆಗೆ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲವೋ ಅಂತಹ ಜಿಲ್ಲೆ ಅಥವಾ ವಾರ್ಡ್‌ ಹೊರತುಪಡಿಸಿ ಎಲ್ಲಿ ಅಧಿಕ ಪ್ರಕರಣ ಇವೆಯೋ ಅಲ್ಲಿ ಮಾತ್ರ ಲಾಕ್‌ಡೌನ್ ಮತ್ತಷ್ಟು ಬಿಗಿ ಮಾಡಬೇಕು ಎಂಬುದು ಸರ್ಕಾರದ ಚಿಂತನೆ.

ಈ ಕುರಿತ ಸಭೆಗೂ ಮುಂಚಿತವಾಗಿಯೇ ಸಿಎಂ ಬಿಎಸ್‌ ಯಡಿಯೂರಪ್ಪ PWC ಸಂಸ್ಥೆಯಿಂದ ವರದಿ ತರಿಸಿಕೊಂಡು ಇಂದು ಸಚಿವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ಟೀಮ್ ಸಹ ಭಾಗಿಯಾಗಿತ್ತು. ಅಲ್ಲದೆ, ಕೇಂದ್ರ ಸರ್ಕಾರ ನೀಡಿರೋ ನಿರ್ದೇಶನಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಅಂತಿಮವಾಗಿ ಏಪ್ರಿಲ್.15ರಿಂದ ಸ್ಮಾರ್ಟ್‌ ಲಾಕ್‌ಡೌನ್ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವವರಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡುವಂತಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.

 ಸ್ಮಾರ್ಟ್‌ ಲಾಕ್‌ಡೌನ್‌ ಹೇರಿಗುತ್ತೆ?

1. ಹಾಟ್ ಸ್ಪಾಟ್ ಏರಿಯಾ ಗಳಲ್ಲಿ ಲಾಕ್ ಡೌನ್ ಸಡಿಲ ಮಾಡಬಾರದು.

2. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಮುಂದುವರಿಸಬೇಕು.#ಅಗತ್ಯ ವಸ್ತುಗಳು ಜನರಿಗೆ ಸಿಗಬೇಕು.

3. ಜಿಮ್ , ಬಾರ್, ಶಾಪಿಂಗ್ ಮಾಲ್ ಹೋಟೆಲ್ ಗಳು ತೆರೆಯುವಂತಿಲ್ಲ.

4. ಅಂತರ ರಾಜ್ಯ , ಜಿಲ್ಲೆ ಗಡಿಬಾಗಗಳನ್ನು ಮುಚ್ಚಬೇಕು.

5.  ಸಾರ್ವಜನಿಕ ಶೌಚಾಲಯವನ್ನು ಮುಚ್ಚಬೇಕು.

6. ಹಿರಿಯ ನಾಗರೀಕರ ಓಡಾಟ ಸಂಪೂರ್ಣವಾಗಿ ನಿಷೇಧಿಸಬೇಕು.

7. ಮದ್ಯದಂಗಡಿ ತೆರೆಯುವುದು ( ಪಾರ್ಸಲ್ ವ್ಯವಸ್ಥೆ ಮಾತ್ರ)

8. ಪಾನ್, ಗುಟ್ಕಾ, ಚ್ಯೂಯಿಂಗ್ ಗಮ್ ಗಳನ್ನು ನಿರ್ಬಂಧಿಸಬೇಕು.

9. ಕಾರ್ಖಾನೆ ಗಳು , ಐಟಿ ಬಿಟಿ ಕಂಪನಿಗಳು ಐವತ್ತರಷ್ಟು ಉದ್ಯೋಗಿಗಳು ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು.

10. ಕೈಗಾರಿಕೆಗಳನ್ನು ತೆರೆಯಲು ಅವಕಾಶ.

11. ಈ ಮೂಲಕ ಉತ್ಪನ್ನಗಳ ಉತ್ಪಾದನೆಗೆ ಒತ್ತು.

12. ಜೊತೆಗೆ ಕಾರ್ಮಿಕರಿಗೆ ಕೆಲಸ ಒದಗಿಸುವುದು.

13. ಕೂಲಿ ಕಾರ್ಮಿಕರಿಗೆ ಉದ್ಯೋಗ

14. ಶೇಕಡ 50 ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅನುವು.

15. ಕೃಷಿ ಉತ್ಪನ್ನಗಳ ಸರಬರಾಜು, ಸಾಗಾಣಿಕೆಗೆ ಅವಕಾಶ.

16. ಕೃಷಿ, ತೋಟಗಾರಿಕೆ ಚಟುವಟಿಕೆ ಗಳಿಗೆ ಅವಕಾಶ.

17. ರೈತರ ಬೀಜ ಬಿತ್ತನೆಗೆ ಅವಕಾಶ

18. ಐಟಿ ಬಿಟಿಯವರಿಗೆ ಶೇಕಡ 50 ರಷ್ಟು ನೌಕರರು ಕೆಲಸ ನಿರ್ವಹಣೆ ಅವಕಾಶ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights