ಗೋವಾ, ಮಹಾರಾಷ್ಟ್ರಕ್ಕೆ ಬಡಿಯಲಿದೆ ನಿಸರ್ಗ ಚಂಡಮಾರುತ!

ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗೋವಾ ತೀರ ಪ್ರದೇಶಗಳಿಗೆ ಜೂನ್ 3ರಂದು ಮಧ್ಯಾಹ್ನದ ವೇಳೆಗೆ ನಿಸರ್ಗ ಹೆಸರಿನ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗೋವಾದ ನೈರುತ್ಯ ದಿಕ್ಕಿನಲ್ಲಿ 280 ಕಿಲೋ ಮೀಟರ್, ಮುಂಬೈನ ನೈರುತ್ಯ ದಿಕ್ಕಿನಲ್ಲಿ 490 ಕಿಲೋಮೀಟರ್ ಮತ್ತು ಗುಜರಾತ್ ರಾಜ್ಯದ ಸೂರತ್ ಗೆ ನೈರುತ್ಯ ದಿಕ್ಕಿನಲ್ಲಿ 710 ಕಿಲೋ ಮೀಟರ್ ದೂರದಲ್ಲಿ ತೀವ್ರ ವಾಯುಭಾರ ಕುಸಿತವಾಗಿದೆ ಎಂದು ಇಲಾಖೆಯಲ್ಲಿ ಹೇಳೀಕೆಯಲ್ಲಿ ತಿಳಿಸಿದೆ.

ತೀವ್ರ ಕುಸಿತ ಉಂಟಾಗಿರುವುದರಿಂದ ಮುಂದಿನ 12 ಗಂಟೆಗಳಲ್ಲಿ ಇದು ಚಂಡಮಾರುತವಾಗಿ ಅರಬ್ಬೀ ಸಮುದ್ರದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ. ಮತ್ತೆ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಸ್ವರೂಪವನ್ನು ಪಡೆದುಕೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಸ್.ಎನ್. ಪ್ರಧಾನ್ ಮಾತನಾಡಿ, ಮಹಾರಾಷ್ಟ್ರಕ್ಕೆ ತೀವ್ರ ಸ್ವರೂಪದ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ NDRF ಪಡೆಗಳನ್ನು ನಿಯೋಜಿಸಲಾಗಿದೆ. ಚಂಡಮಾರುತದಿಂದ ಆಗುವ ಅನಾಹುತಗಳನ್ನು ತಡೆಯಲು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎನ್.ಡಿ.ಆರ್.ಎಫ್ ಪಡೆಗಳು ಕೈಗೊಳ್ಳಲಿವೆ ಎಂದು ಹೇಳಿದ್ದಾರೆ.

ಬಾಲಗಡ ಎರಡು ತಂಡ, ಮುಂಬೈಗೆ 3 ತಂಡ,  ಥಾಣೆ ಒಂದು iತಂಡ, ರಾಯಘಡ ಎರಡು ತಂಡ, ರತ್ನಗಿರಿಗೆ 1 ತಂಡ ಮತ್ತು ಸಿಂಧೂದುರ್ಗಕ್ಕೆ 1 NDRF ತಂಡಗಳನ್ನು ನಿಯೋಜಿಸಲಾಗಿದೆ.

ಚಂಡಮಾರುತದ ವ್ಯವಸ್ಥೆ ಪಥದ ಪ್ರಕಾರ ಮುಂಬೈ ದಕ್ಷಿಣ ಭಾಗದಲ್ಲಿ ಭೂಕುಸಿತವಾಗಲಿದೆ ಎಂಬ ನಿರೀಕ್ಷೆ ಇದೆ. ಆದರೆ ಇದು ಕ್ರಿಯಾತ್ಮಕ ವ್ಯವಸ್ಥೆಯಿಂದಾಗಿ ಮುಂದಿನ 24-48 ಗಂಟೆಗಳಲ್ಲಿ ಬದಲಾಗಲಿದೆ. ಮುಂಬೈ ದಕ್ಷಣದಲ್ಲಿ ಚಂಡಮಾರುತ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ವಿಜ್ಞಾನಿ ಸುನೀತಾ ದೇವಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights