ತಮ್ಮ ಮನೆಯನ್ನೇ ತಾತ್ಕಲಿಕ ಆಸ್ಪತ್ರೆಯಾಗಿ ಬಳಸಿ ಎಂದ ಕಮಲ್ ಹಾಸನ್
ಕೊರೊನಾ ವೈರಸ್ ದೇಶದಲ್ಲಿ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಈ ವೈರಸ್ ಇನ್ನಷ್ಟು ಹರಡದಂತೆ ತಡೆಯಲು ಸರ್ಕಾರವು ಸಹ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಸಹ ಸರ್ಕಾರ ಒಂದೇ ಇದನ್ನು ನಿರ್ವಹಿಸಲು ಸಾಧ್ಯವಾ ಎನ್ನುವಂತಹ ಪರಿಸ್ಥಿತಿಯೂ ಬಂದೊದಗಿದೆ ಇಂತಹ ಸಮಯದಲ್ಲಿ ಕೆಲವು ಸೂಕ್ಷ್ಮ ಮನಸ್ಸಿನ ಸಿನೆಮಾ ನಟರು, ಸೆಲಿಬ್ರಿಟಿಗಳು ಸಹ ಮಾಡಲು ಮುಂದೆ ಬಂದಿದ್ದಾರೆ. ಇದೇ ಸಮಯದಲ್ಲಿ ಸಿನೆಮಾ ನಟ ಮತ್ತು ‘ಮಕ್ಕಳ್ ನಿಧೀಮಯ್ಯಂ’ ಪಕ್ಷದ ಮುಖಂಡ ಕಮಲ್ ಹಾಸನ್ ಸರ್ಕಾರ ಅನುಮತಿ ನೀಡಿದರೆ ತನ್ನ ಮನೆಯನ್ನು ತಾತ್ಕಲಿಕ ಕೊರೊನಾ ಆಸ್ಪತ್ರೆಯಾಗಿ ಬದಲಾಯಿಸಲು ಸಿಧ್ಧರಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದೇ ರೀತಿ ನಟ ಮತ್ತು ನಿರ್ದೇಶಕ ಪಾರ್ತಿಬನ್ ಕೂಡ ತನ್ನ ಮನೆಯನ್ನು ಆಸ್ಫತ್ರೆಯಾಗಿ ರೂಪಿಸಲು ಸಿದ್ಧರಿರುವುದಾಗಿ ಪ್ರಕಟಿಸಿದ್ಧು. ಇದೇ ರೀತಿಯಾಗಿ ಇತರರು ಕೂಡ ಮುಂದೆ ಬರುತ್ತಾರೆಂಬ ಆಶಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
https://twitter.com/ikamalhaasan/status/1242750430855061505?s=20

