ತೋಟಗಾರಿಕೆ ವಿವಿಯಲ್ಲಾದ ನೇಮಕಾತಿಗೆ ಡಿಸಿಎಂ ಗೋವಿಂದ ಕಾರಜೋಳ ಅಸಮಾಧಾನ…

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಾದ ನೇಮಕಾತಿಗೆ ಡಿಸಿಎಂ ಗೋವಿಂದ ಕಾರಜೋಳ ಅಸಮಾಧಾನಗೊಂಡಿದ್ದಾರೆ.

ಹೌದು.. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಾದ ನೇಮಕಾತಿಗೆ ಡಿಸಿಎಂ ಗೋವಿಂದ ಕಾರಜೋಳ ಗರಂ ಆಗಿದ್ದಾರೆ. ಸಿಕ್ಕಿಂ ಬೋಗಸ್ ವಿವಿಯ ಸರ್ಟಿಫಿಕೇಟ್ ಪಡೆದವ್ರು ತೋಟಗಾರಿಕೆಯಲ್ಲಿ ನೇಮಕಾತಿ ಯಾಗಿದ್ದಾರೆ ಎಂದು ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಾದ ಅವ್ಯವಹಾರಕ್ಕೆ ಫುಲ್ ಗರಂ ಆದ ಡಿಸಿಎಂ ಗೋವಿಂದ ಕಾರಜೋಳ ತೋಟಗಾರಿಕೆ ಸಚಿವ ವಿ ಸೋಮಣ್ಣ ಎದುರು ಅಸಮಾಧಾನ ಹೊರಹಾಕಿದ್ದಾರೆ.

ಇಲ್ಲಿನ ರೈತರು ಹೊಲ-ಮಠ ಕಳೆದುಕೊಂಡಿದ್ದರಿಂದ ತೋಟಗಾರಿಕೆ ವಿವಿ ಮಂಜೂರಾತಿಯಾಗಿದೆ. ಹೊರಗಿನವರನ್ನು ತಂದು ಸ್ಥಳೀಯರಿಗೆ ಉದ್ಯೋಗ ಕೊಡದಿದ್ರೆ ವಿವಿ ತಗೊಂಡು ಏನು ಮಾಡೋದು. ಈ ವಿಚಾರವನ್ನು ದಾಖಲಾತಿ ಸಮೇತ ಹಿಂದೆ ಸಿದ್ದರಾಮಯ್ಯಗೆ ತನಿಖೆ ಮಾಡಿ ಎಂದು ದೂರು ನೀಡಿದ್ದೆ ಆದರೆ ಪ್ರಯೋಜನವಾಗಿಲ್ಲ.

ಕಸಗೂಡಿಸೋರು,ಜವಾನ ಹುದ್ದೆನೂ ಹೊರಗಿನವರಿಗೆ ಕೊಟ್ಟಿದ್ದಾರೆ. ಎಲ್ಲ ಹುದ್ದೆಯೂ ಹೊರಗಿನವರಿಗೆ ಕೊಟ್ರೆ ವಿವಿ ಯಾಕೆ ಬೇಕೆಂದು ಪ್ರಶ್ನಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದಕ್ಕೂ ಡಿಸಿಎಂ ಗರಂ ಆದ್ರು. ಈ ಬಗ್ಗೆ ಎಲ್ಲವನ್ನು ಸರಿಪಡಿಸೋಣವೆಂದು ತೋಟಗಾರಿಕೆ ಸಚಿವ ವಿ ಸೋಮಣ್ಣ , ಡಿಸಿಎಂ ಗೋವಿಂದ ಕಾರಜೋಳಗೆ ಭರವಸೆ ನೀಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights