ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಗಳು ಜಾನಕಿ’ ಧಾರಾವಾಹಿಯ ನಟಿ ಸುಪ್ರಿಯಾ ರಾವ್!

ಕೋವಿಡ್-19 ಲಾಕ್ ಡೌನ್ ನಿಂದಾಗಿ ರಾಜ್ಯದೆಲ್ಲೆಡೆ ಅದ್ದೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಈ ನಡುವೆ ಕಿರುತೆರೆಯ ನಟಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು… ಕೊರೊನಾ ವೈರಸ್ ಹರಡುವ ಭೀತಿಯಿಂದ ರಾಜ್ಯದಲ್ಲಿ ಮದುವೆ, ಸಭೆ, ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಆದರೂ ಕೆಲ ನಟ-ನಟಿಯರು ಹಸಮಣೆ ಏರಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಸಾಲಿನಲ್ಲಿ ಸದ್ಯ ‘ಮಗಳು ಜಾನಕಿ’ ಧಾರಾವಾಹಿಯ ನಟಿ ಸುಪ್ರಿಯಾ ರಾವ್ ಕೂಡ ಸೇರಿಕೊಂಡಿದ್ದಾರೆ.

ನಟಿ ಸುಪ್ರಿಯಾ ರಾವ್ ತಾವು ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮದುವೆಯಾಗಿದ್ದಾರೆ. ಲಾಕ್ ಡೌನ್ ಆದಾಗಿನಿಂದ ಟಿವಿ ಚಾನಲ್ ಗಳಲ್ಲಿ ಯಾವುದೇ ಧಾರವಾಹಿಗಳು ಪ್ರಸಾರವಾಗುತ್ತಿಲ್ಲ. ಬಹುತೇಕ ನಟಿ-ನಟಿಯರು ತಮ್ಮ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೆಲವರು ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ಇವರಲ್ಲಿ ಸದ್ಯ ಜಾನಕಿ ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಪ್ರಿಯಾ ರಾವ್ ಒಬ್ಬರಾಗಿದ್ದಾರೆ.

ಮೂಲತಃ ಶಿವಮೊಗ್ಗದವರರಾದ ಸುಪ್ರಿಯಾ ಅವರು ತಮ್ಮ ಬಹುಕಾಲ ಗೆಳೆಯ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಯ ವಿಚಾರವನ್ನು ಎರಡು ಕುಟುಂಬದಲ್ಲಿ ಹೇಳಿದ್ದಾರೆ. ನಂತರ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಅದರಂತೆಯೇ ಲಾಕ್‍ಡೌನ್‍ನಿಂದ ಸರಳವಾಗಿ ವಿವಾಹವಾಗಿದ್ದಾರೆ .

ಪತಿ ವಿಜಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ಚಿತ್ರದುರ್ಗದಲ್ಲಿ ಗುರು-ಹಿರಿಯ ಸಮ್ಮುಖದಲ್ಲಿ ಸರಳವಾಗಿ ನಡೆದಿದೆ. ಲಾಕ್‍ಡೌನ್‍ನಿಂದಾಗಿ ಕೇವಲ ಆಪ್ತರು ಮತ್ತು ಸಂಬಂಧಿಕರು ಇವರ ಮದುವೆಯಲ್ಲಿ ಭಾಗಿಯಾಗಿದ್ದು,  ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights