ದೇಶದ ಅತಿದೊಡ್ಡ INS ವಿಕ್ರಮಾದಿತ್ಯಾ ಯುದ್ದ ನೌಕೆ ವೀಕ್ಷಣೆಗೆ ಅವಕಾಶ….

ನೌಕಾ ಸಪ್ತಾಹದ ಅಂಗವಾಗಿ ಇವತ್ತು ದೇಶದ ಅತಿದೊಡ್ಡ ಯುದ್ದ ನೌಕೆ INS ವಿಕ್ರಮಾದಿತ್ಯಾ ಯುದ್ದ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಯಿತು.. ಕಾರವಾರದ ಅರ್ಗಾ ಕದಂಬ‌ನೌಕಾನೆಯಲ್ಲಿ ವಿಕ್ರಮಾದಿತ್ಯ ಯುದ್ದ ನೌಕೆ ಇದ್ದು ಮುಂಜಾನೆಯಿಂದಲೇ ಕಾರವಾರ ಸೇರಿ ಜಿಲ್ಲೆಯ ಮೂಲೆ‌ಮೂಲೆಯಿಂದ ವಿಕ್ರಮಾದಿತ್ಯ ವೀಕ್ಷಣೆಗೆ ಸಾರ್ವಜನಿಕರು ಆಗಮಿಸಿದ್ರು..

ಇನ್ನೂ ಜಿಲ್ಲೆಯಿಂದಷ್ಟೆ ಅಲ್ಲದೆ ನೆರೆಯ ಗೋವಾ ಮಹಾರಾಷ್ಟ್ರ ರಾಜ್ಯದಿಂದಲೂ ಇವತ್ತು ವಿಕ್ರಮಾದಿತ್ಯ ವೀಕ್ಷಣೆಗೆ ಜನ‌ ಆಗಮಿಸಿದ್ರು..ಕೇವಲ ವಿಕ್ರಮಾದಿತ್ಯ ಯುದ್ದ ನೌಕೆಯ‌ ಹೆಸರು ಮಾತ್ರ ಕೇಳುತ್ತಿದ್ದ ಜನ‌ಮೊದಲ ಬಾರಿಗೆ ದೈತ್ಯ ಯುದ್ದ ನೌಕೆ‌ ನೋಡಿ ಕಣ್ತುಂಬಿಕೊಂಡ್ರು..ಮೊದಲ ಬಾರಿಗೆ ಯುದ್ದ ನೌಕೆ‌ನೋಡಿದ ಜನರ ಖುಷಿಗೆ ಪಾರವೇ ಇರಲಿಲ್ಲ…ಸಾರ್ವಜನಿಕರ ವೀಕ್ಷಣೆಗೆ ನಿಷೇಧ ವಿರುವ ನೌಕಾನೆಲೆಯಲ್ಲಿ ಇವತ್ತು ಸಾರ್ವಜನಿಕರಿಗೆ ಗುರುತಿನ ಚೀಟಿ ನೀಡಿ ಮುಕ್ತ ಅವಕಾಶ ನೀಡಲಾಗಿತ್ತು…

 

ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ವಿಕ್ರಮಾದಿತ್ಯ ಯುದ್ದ ನೌಕೆಯ‌ನ್ನ ವೀಕ್ಷಿಸಿದ್ರು..ಬಿರುಬಿಸಿಲಿನಲ್ಲೂ ತುಂಬಾ ಜೋಷ್ ಇಂದ ವಿಕ್ರಮಾದಿತ್ಯ ವೀಕ್ಷಣೆಗೆ ಸಾರ್ವಜನಿಕರು ಸರದಿಸಾಲಿನಲ್ಲಿ ನಿಂತಿದ್ರು..ಕೇವಲ ಒಂದು ದಿನ‌ಮಾತ್ರ ವೀಕ್ಷಣೆಗೆ ಅವಕಾಶ‌ ಇದ್ದಿದ್ರಿಂದ‌ ವೀಕ್ಷಣೆಗೆ ಬಂದ ಸಾರ್ವಜನಿಕರಿಗೆ ಹತೋಟಿಯಲ್ಲಿಡಲು ಪೋಲಿಸರು ಹೈರಾಣಾದ್ರು..ಇನ್ನು ಸಮಯವಕಾಶದ ಅಭಾವದ ಜೊತೆ‌ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ರಿಂದ ವೀಕ್ಷಣೆ ಮಾಡದ ಸಾರ್ವಜನಿಕರು ನಿರಾಸೆಯಿಂದ ಹೊರ ಹೋದ್ರೆ ಇನ್ನೂ ಕೆಲವರು ಗಲಾಟೆ ಎಬ್ಬಿಸಿದ್ರು..

ಸಾವಿರಾರು ಜನ ಸಮಯದ ಅಭಾವದಿಂದ ವಿಕ್ರಮಾದಿತ್ಯ ಯುದ್ದ ನೌಕೆ ವೀಕ್ಷಣೆ ಮಾಡಲಾಗದೆ ನಿರಾಸೆಯಿಂದ ವಾಪಸ್ಸಾದ್ರು..ಮೊದಲ ಬಾರಿಯ‌ ಕನಸನ್ನ ‌ಹೊತ್ತು ತಮ್ಮ ಕುಟುಂಬ ಸಮೇತರಾಗಿ ಬಂದ ಸಾರ್ವಜನಿಕರು ಅಯ್ಯೋ ಎಂದು ಬಂದ ದಾರಿಗೆ ಸುಂಖವಿಲ್ಲದೆ ವಾಪಾಸ್ಸಾದ್ರು..ಇನ್ನು ಮುಂದಿನ ವರ್ಷವೇ ವಿಕ್ರಮಾದಿತ್ಯ ವೀಕ್ಷಣೆಗೆ ಮುಕ್ತ ಅವಕಾಶ ಸಿಗಲಿದ್ದು ಇವತ್ತು ನೋಡಲಾಗದೆ ವಾಪಸ್ಸಾದ ಸಾರ್ವಜನಿಕರು ಮುಂದಿನ‌ ಒಂದು ವರ್ಷ ಕಾಯಬೇಕಾಗಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights