ನಡು ರಸ್ತೆಯಲ್ಲಿ ಯುವಕರ ಮೋಜು‌‌ ಮಸ್ತಿ : ಕೈ ಯಲ್ಲಿ ಮದ್ಯದ ಬಾಟಲಿ ಹಿಡಿದು ಡಾನ್ಸ್

ನಡು ರಸ್ತೆಯಲ್ಲಿ ಯುವಕರು ಕೈ ಯಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ಮೋಜು‌‌ ಮಸ್ತಿ ಡಾನ್ಸ್ ಮಾಡಿದ ಘಟನೆ ಚಿಕ್ಕಮಗಳೂರು ಚಾರ್ಮಾಡಿ‌ ಘಾಟ್ ರಸ್ತೆಯಲ್ಲಿ‌ ನಡೆದಿದೆ.

ಚಾರ್ಮಾಡಿ‌ ಘಾಟ್ ರಸ್ತೆಯಲ್ಲಿ‌ ಪ್ರವಾಸಿಗರಿಂದ‌ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಯದ ಮೀತಿ‌ ಹೇರಿದ್ದರೂ ಘಾಟಿಯಲ್ಲಿ ಪ್ರವಾಸಕ್ಕೆ ಬಂದ ಯುವಕರು  ಕೈ ಯಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ಜೋರಾಗಿ ಕೇಕೆ‌ ಹಾಕಿ‌ ಡಾನ್ಸ್ ಮಾಡಿದ್ದಾರೆ.

ದಕ್ಷಿಣ ಕನ್ನಡ – ಚಿಕ್ಕಮಗಳೂರಿಗೆ ಸಂಪರ್ಕ ರಸ್ತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಗುಡ್ಡ , ರಸ್ತೆ ಕುಸಿತವಾಗಿತ್ತು. ಈ ಹಿನ್ನಲೆಯಲ್ಲಿ‌ ರಸ್ತೆಯಲ್ಲಿ ವಾಹನ ಸಂಚಾರದ ವೇಳೆಯನ್ನ ನಿಗದಿ ಪಡಿಸಿರುವ ಜಿಲ್ಲಾಡಳಿತ, ಬೆಳಿಗ್ಗೆ‌ 6 ರಿಂದ‌ ಸಂಜೆ‌ 6 ರ ತನಕ‌ ರಸ್ತೆಯಲ್ಲಿ ಮಿನಿ ವಾಹನಗಳು ಸಂಚಾರಿಸಲು ಅವಕಾಶ ನೀಡಿದೆ.

ಇದರ ನಡುವೆಯೂ ಪ್ರವಾಸಿಗರ ಅಸಭ್ಯ ವರ್ತನೆಗೆ ಸ್ಥಳೀಯರ ಕಿಡಿಕಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights