“ನನ್ನ ಒಂದು ವರ್ಷದ ಸಂಬಳ ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದೇನೆ “- ಸಿಎಂ

ಕೊರೊನಾ ಸಂತ್ರಸ್ತರ ನೆರವಿಗಾಗಿ ಸಿನಿ ತಾರೆಗಳು ಕೈ ಜೋಡಿಸಿದ್ದು ದರ್ಶನ್, ಪುನೀತ್ ರಾಜಕುಮಾರ್, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಹೀಗೆ ಹಲವಾರು ಜನ ಹಣದ ಸಹಾಯ ಮಾಡಿದ್ದು ಸಿಎಂ ಕೂಡ ತಮ್ಮ ಒಂದು ವರ್ಷದ ಸಂಬಳವನ್ನು ದೇಣಿಗೆಯಾಘಿ ನೀಡಿದ್ದಾರೆ.

ಹೌದು… ಕೊರೊನಾ ಹರಡುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಲಕ್ಷಾಂತರ ಜನ ಕೆಲಸವಿಲ್ಲದೇ, ಇರಲು ನೆಲೆಯಿಲ್ಲದೇ, ತಿನ್ನಲು ಊಟವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲವರು ಸಹಾಯ ಹಸ್ತ ಚಾಚಿದ್ದಾರೆ. ನೆನ್ನೆಯಷ್ಟೇ ದೊಡ್ಮನೆ ಮಗ ಪುನೀತ್ ರಾಜಕುಮಾರ್ 50 ಲಕ್ಷ ರೂಪಾಯಿ ಸಿಎಂ ಪರಿಹಾರ ನಿಧಿಗೆ ದೇಣಿ್ಗೆಯಾಗಿ ನೀಡಿದ್ದಾರೆ. ಇನ್ನೂ ದರ್ಶನ್ ಹಾಗೂ ಅವರ ಅಭಿಮಾಣಿಗಳು ಊಟವಿಲ್ಲದವರಿಗೆ ಹಗರು ರಾತ್ರಿ ಊಟ ಹಂಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನೂ ಶೈನ್ ಶೆಟ್ಟಿ ಪೊಲೀಸರಿಗೆ ಕೆಲ ಡ್ರೈ ಫುಡ್ ಗಳನ್ನ ನೀಡುವ ಮೂಲಕ ಮಾನವೀಯತೆ ಮೆರೆದಿದ್ರು, ಬಿಗ್ ಬಾಸ್ ನ ದೀಪಿಕಾ ದಾಸ ಕೂಡ 5 ಲಕ್ಷ ದೇಣಿಗೆ ನೀಡಿದ್ದಾರೆ. ಹೀಗೆ ಹಲವಾರು ಸಿನಿ ಮಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.

ಇವರೊಂದಿಗೆ ಸಿಎಂ ಕೂಡ ಸಾತ್ ನೀಡಿದ್ದು, ಒಂದು ವರ್ಷದ ಸುಮಾರು 24 ಲಕ್ಷ ರೂ. ವೇತನವನ್ನು ಸಿಎಂ ದೇಣಿಗೆ ನೀಡಿದ್ದಾರೆ. ಕೋವಿಡ್_19 ತಡೆಗೆ ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಯಾರೂ ಮನೆಯಿಂದ ಹೊರಬರದಿರುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮನವಿ ಮಾಡಿರುವ ಅವರು, “ನನ್ನ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್​-19ಕ್ಕೆ ನೀಡುತ್ತಿದ್ದೇನೆ. ಅದರಂತೆ ಸಂಪುಟ ಸಹೋದ್ಯೋಗಿಗಳು, ಶಾಸಕರು  ಸಂಸದರು, ಅಧಿಕಾರಿಗಳು ಕೈಲಾದಷ್ಟು ಸಹಾಯ ಮಾಡಿ,” ಎಂದಿದ್ದಾರೆ.

https://twitter.com/CMofKarnataka/status/1245197884699611147

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights