ನಿಲ್ಲದ ಕೊರೊನಾ ಹಾವಳಿ; ಒಂದೇ ದಿನಕ್ಕೆ ಸುಮಾರು 10,000 ಪ್ರಕರಣಗಳು ಪತ್ತೆ!

ಕೊರೋನಾ ವೈರಸ್ ತನ್ನ ಹಾವಳಿಯನ್ನು ಮುಂದುವರೆಸಿದೆ. ದಿನಕಳೆದಂತೆ ಹೆಚ್ಚುತ್ತಲೇ ಇರುವ ಸೋಂಕಿತರ ಸಂಖ್ಯೆಗೆ ದೇಶದ ಜನರು ನಿಬ್ಬೆರಗಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ  9,971  ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2.46 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನದಲ್ಲಿ 9,971 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 287 ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಕೂಡ 7,000 ಗಡಿ ಮುಟ್ಟುತ್ತಿದ್ದು, ಈ ವರೆಗೆ 6,929 ಮಂದಿ ಬಲಿಯಾಗಿದ್ದಾರೆ.

ಪತ್ತೆಯಾಗಿರುವ 2,46,628 ಮಂದಿ ಸೋಂಕಿತರ ಪೈಕಿ 1,15,942 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿ ಪತ್ತೆಯಾಗಿರುವವರ ಪೈಕಿ ಇನ್ನೂ 1,14,072 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ದೇಶದ ರಾಜಧಾನಿ ದೆಹಲಿಯಲ್ಲಿ ಸಂಖ್ಯೆ 27,654. ಮಹಾರಾಷ್ಟ್ರ 82,968, ತಮಿಳುನಾಡು 30,152, ಗುಜರಾತ್ 19,592, ಕರ್ನಾಟಕದಲ್ಲಿ 5,213ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights