ನೋವಾದಾಗ ಕರೆಯುವ ಮೊದಲ ಶಬ್ದ ಅಮ್ಮ… ದೇವರು ಕೊಟ್ಟ ದೇವರು…

ಅಮ್ಮ… ಜಗತ್ತಿನಲ್ಲಿ ಆ ದೇವರು ಕೊಟ್ಟ ಬೆಲೆ ಕಟ್ಟಲಾಗದ ಋಣ ತೀರಿಸಲಾಗದ ಅದ್ಬುತ ವರ. ಸಾವಿನಲ್ಲೂ, ನೋವಿನಲ್ಲೂ, ಸುಖದಲ್ಲೂ ದು:ಖದಲ್ಲೂ ಮಕ್ಕಳಿಗೆ ಒಳ್ಳೆದನ್ನು ಬಯಸುವ, ಹರಸುವ ಏಕೈಕ ದೇವರು ಅಮ್ಮ.. ಮಕ್ಕಳ ಜೀವನದುದ್ದಕ್ಕೂ ಮಾರ್ಗದರ್ಶಕಳಾಗಿ, ಶಿಕ್ಷಕಿಯಾಗಿ, ಗೆಳತಿಯಾಗಿ ಸದಾ ಜೊತೆಗಿರುತ್ತಾಳೆ. ಧೈರ್ಯ ತುಂಬುತ್ತಾ, ಆತ್ಮಸ್ಥೈರ್ಯ ನೀಡುತ್ತಾ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸದಾ ಸಿದ್ದಳಿರುತ್ತಾಳೆ.

ಅಮ್ಮ ಎಂದರೆ ಏನೋ ಹರುಷ… ಅಮ್ಮಾ ಎಂದರೆ ಬಾಳಿನ  ಹೊಂಗಿರಣ.. ನಿಸ್ವಾರ್ಥ ಪ್ರೀತಿಯ ಗೋಪುರ ಅಮ್ಮ.. ದಾನದಲ್ಲಿ ಎತ್ತಿದ ಕೈ ಅಮ್ಮ… ಜನ್ಮ ಕೊಡಲು ಮರುಜನ್ಮ ಪಡೆಯುವವಳು ಅಮ್ಮ.. ಮಮತೆ , ಪ್ರೀತಿ, ಕಾಳಜಿ ಎಂದರೆ ಅಮ್ಮಾ… ತಾನು ಉಪವಾಸವಿದ್ದು ಮಕ್ಕಳಿಗೆ ಅಮೃತ ಉಣಿಸುವವಳು ಅಮ್ಮ…

ಅದೆಷ್ಟೇ ಒತ್ತಡವಿರಲಿ, ಅದೆಷ್ಟೇ ನೋವಿರಲಿ ಧೈರ್ಯದ ಮಾತನಾಡಿ ನೂರು ಆನೆಯ ಬಲ ಬಂದಷ್ಟು ಉತ್ಸಾಹ ನೀಡುವವಳು ಅಮ್ಮಾ..  ಎಂಥಹ ಸಂದರ್ಭ ಬಂದರೂ ನಿಷ್ಕಲ್ಮಶ ಪ್ರೀತಿ ತೋರುವಳು ಅಮ್ಮಾ.. ಕಣ್ಣಂಚಿನ ಕಂಬನಿಯಲ್ಲಿ ಹಿಡಿದಿಟ್ಟು, ತುಟಿಯಲ್ಲಿ ನಗುವೊಂದನ್ನು ಎಳೆದುಕೊಂಡು ತನ್ನವರಿಗಾಗಿ ಜೀವನ ಸಾಗಿಸುವವಳು ಅಮ್ಮಾ… ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ತನ್ನ ಸರ್ವಸ್ವವನ್ನೆ ಮುಡಿಪಾಗಿಡುವವಳು ಅಮ್ಮಾ.. ತಾನು ಮಾಡುವ ಕೆಲಸಕ್ಕೆ ವಿರಾಮ ನೀಡದೆ, ಮಕ್ಕಳ ಮೊಗದ ನಗುವಿನಲ್ಲಿ ಖುಶಿಪಡುವವಳು ಅಮ್ಮ… ಮನೆಯ ಆಧಾರಸ್ಥಂಭ ಅಮ್ಮಾ… ಕೋಪ ಬಂದಾಗ ಅಡುಗೆ ಮಾಡಿ ತಾನು ಊಟ ಮಾಡದೇ ಮಲಗುವವಳು ಅಮ್ಮಾ… ನೋವಾದಾಗ ಕರೆಯುವ ಮೊದಲ ಶಬ್ದ ಅಮ್ಮ… ಅಮ್ಮ… ಅಮ್ಮಾ…. ಅಮ್ಮನನ್ನು ಬಣ್ಣಿಸಲು ಪದಗಳು ಸಾಲದು. ದೇವರು ಕೊಟ್ಟ ದೇವರಿಗೆ ಕೋಟಿ ಕೋಟಿ ನಮನ…

ಎಲ್ಲ ಅಮ್ಮಂದಿರಿಗು ಅಮ್ಮಂದಿರ ದಿನಾಚರಣೆಯ ಶುಭಾಶಯಗಳು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights