ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫೀಕ್ ಉಮರ್ ಗೆ ಕೊರೊನಾ ಪಾಸಿಟಿವ್…!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫೀಕ್ ಉಮರ್ ಅವರಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.

ಹೌದು… ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ತೌಫೀಕ್ ಉಮರ್ ಕೋವಿಡ್-19 ಗೆ ಪರೀಕ್ಷೆಯಲ್ಲಿ ವೈರಸ್ ತಗುಲಿರುವುದು ದೃಢಪಟ್ಟಿದೆ. ಆದರೆ ಅವರಲ್ಲಿ “ಲಕ್ಷಣಗಳು ತೀವ್ರವಾಗಿಲ್ಲ” ಎಂದು ಹೇಳಿಕೊಂಡಿದ್ದಾರೆ.

38 ವರ್ಷ ಹರೆಯದ ತೌಫೀಕ್ ಉಮರ್ ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಾಲ್ಕನೇ ಕ್ರಿಕೆಟಗಾರನಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದ ಜಾಫರ್ ಸರ್ಫ್ರಾಜ್, ದಕ್ಷಿಣ ಆಫ್ರಿಕಾದ ಸೊಲೊ ಎನ್ಕ್ವೆನಿ ಮತ್ತು ಸ್ಕಾಟ್ಲೆಂಡ್ ನ  ಮಜೀದ್ ಹಕ್ ರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

“ಕಳೆದ ರಾತ್ರಿ ಸ್ವಲ್ಪ ಅನಾರೋಗ್ಯ ಅನುಭವಿಸಿದ ನಂತರ ನಾನು ಕಳೆದ ರಾತ್ರಿ ನನ್ನನ್ನು ಪರೀಕ್ಷಿಸಿಕೊಂಡಿದ್ದೇನೆ. ಫಲಿತಾಂಶವು ಸಕಾರಾತ್ಮಕವಾಗಿದೆ. ನನಗೆ ರೋಗ ಲಕ್ಷಣಗಳು ತೀವ್ರವಾಗಿಲ್ಲ” ಎಂದು ಉಮರ್ ಅವರು ಜಿಯೋ ನ್ಯೂಸ್‌ಗೆ ತಿಳಿಸಿದ್ದಾರೆ.

“ನಾನು ನನ್ನ ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ನನ್ನ ತ್ವರಿತ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸುವಂತೆ ಕೇಳುತ್ತೇನೆ” ಎಂದು ಹೇಳಿದ್ದಾರೆ.

ಉಮರ್ 44 ಟೆಸ್ಟ್ ಮತ್ತು 12 ಏಕದಿನ ಪಂದ್ಯಗಳನ್ನು ಆಡಿದ್ದು, ಪಾಕಿಸ್ತಾನ ಪರ ಕ್ರಮವಾಗಿ 2963 ಮತ್ತು 504 ರನ್ ಗಳಿಸಿದ್ದಾರೆ. ಪಾಕಿಸ್ತಾನ ಪರ ಅವರ ಕೊನೆಯ ಪಂದ್ಯ 2014 ರಲ್ಲಿ, ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ ನಡೆದಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights