ಪೌರತ್ವ ಮಸೂದೆ ವಿವಾದ – ಓಪನ್ ಪ್ರೆಸ್ ಕಾನ್ಫರೆನ್ಸ್ ನಡೆಸುವಂತೆ ಮೋದಿಗೆ ಪ್ರಿಯಾಂಕ್ ಖರ್ಗೆ ಚಾಲೆಂಜ್

ಬಿಜೆಪಿ ಅಧಿಕಾರದಲ್ಲಿರೋ ರಾಜ್ಯಗಳಲ್ಲಿಯೇ ಪೌರತ್ವ ವಿರೋಧಿ ಗಲಭೆಗಳು ನಡೀತಿವೆ. ಅಲ್ಲಿ ಮಾತ್ರ ಗಲಭೆ ನಡೀತಿವೆ ಅಂದ್ರೆ ಅದರ ಬಿಜೆಪಿ ಬಿಜೆಪಿಯ ಕುಮ್ಮಕ್ಕಿದೆ ಎಂದೇ ಅರ್ಥ. ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ ಅನ್ನೋದಾದ್ರೆ, ಮೋದಿ ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಚಾಲೆಂಜ್ ಹಾಕಿದ್ದಾರೆ.

ಕಲಬುರ್ಗಿ – ಭಾರತ ಪೌರತ್ವ ಮಸೂದೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡಲಿ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಚಾಲೆಂಜ್ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಪೌರತ್ವದ ವಿರುದ್ಧ ದೇಶಾದ್ಯಂತ ಇಷ್ಟೆಲ್ಲ ಹೋರಾಟಗಳು ನಡೀತಿವೆ. ಅದರಿಂದ ಯಾರಿಗೂ ತೊಂದರೆಯಿಲ್ಲ ಅನ್ನೋದಾದ್ರೆ ಮೋದಿ ಒಂದೇ ಒಂದು ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡಲಿ ಎಂದು ಚಾಲೆಂಜ್ ಹಾಕಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ಮಾತ್ರ ಗಲಭೆ ಯಾಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ. ದೇಶಾದ್ಯಂತ ಪೌರತ್ವ ಗಲಭೆಯಲ್ಲಿ ಇದುವರೆಗೂ 25 ಜನ ಸಾವನ್ನಪ್ಪಿದ್ದಾರೆ. ಬಹುತೇಕ ಕಡೆ ಬಿಜೆಪಿ ಅಧಿಕಾರದಲ್ಲಿಯೇ ರಾಜ್ಯಗಳಲ್ಲಿಯೇ ಗಲಭೆಗಳು ಸಂಭವಿಸಿವೆ. ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದ್ದರೂ ಕೇಂದ್ರ ಸರ್ಕಾರದ ಪೊಲೀಸರು ಅಲ್ಲಿದ್ದಾರೆ. ಎಲ್ಲೆಲ್ಲಿ ಬಿಜೆಪಿ ಸರ್ಕಾರವಿದೆಯೇ ಅಲ್ಲೆಲ್ಲಾ ಗಲಭೆಗಳು ಸಂಭವಿಸುತ್ತಿದ್ದು, ಸರ್ಕಾರಿ ಪ್ರಾಯೋಜಿತ ಗಲಭೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ವಾತಂತ್ರ್ಯೋತ್ತರದಲ್ಲಿ ಭಾರತವನ್ನು ಮತ್ತೊಮ್ಮೆ ವಿಭಜಿಸಲು ಬಿಜೆಪಿ ಹುನ್ನಾರ ನಡೆಸಿದೆ. ಜಾತಿ, ಧರ್ಮಗಳ ಆಧಾರದ ಮೇಲೆ ದೇಶ ಒಡೆಯೋ ಕೆಲಸ ಮಾಡುತ್ತಿದೆ. ದೇಶದ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಅಸ್ಸಾಂ ನಲ್ಲಿ ಪೌರತ್ವ ಮಸೂದೆ ತಿದ್ದುಪಡಿ ಜಾರಿಗೆ ತರಲು ಕೇಂದ್ರ ಸರ್ಕಾರ 1600 ಕೋಟಿ ರೂಪಾಯಿ ಖರ್ಚು ಮಾಡಿದೆ. 16 ಲಕ್ಷ ಜನ ಅಸ್ಸಾಂ ನವರಲ್ಲಾ ಎಂದು ಹೇಳಿದ್ದು, ಅವರು ಪೌರತ್ವಕ್ಕಾಗಿ ಪರದಾಡುವಂತಾಗಿದೆ. ಪೌರತ್ವ ಸಾಬೀತುಪಡಿಸದೇ ಇರೋರನ್ನು ಇಡಲು ಅಸ್ಸಾಂನಲ್ಲಿ 10 ಬಂಧನ ಕೇಂದ್ರಗಳಲ್ಲಿ ತೆರೆಯಲಾಗುತ್ತಿದೆ.

ಪೌರತ್ವ ಮಸೂದೆಯಿಂದ ಕೇವಲ ಮುಸ್ಲಿಂರಿಗೊಂದೇ ಅಲ್ಲ, ಹಿಂದೂಗಳಿಗೂ ತೊಂದರೆಯಾಗಲಿದೆ. ಹೀಗಾಗಿ ದೇಶಾದ್ಯಂತ ಅದರ ವಿರುದ್ಧ ಹೋರಾಟಗಳು ನಡೆದಿವೆ. ಆದರೆ ಗಲಭೆ ನಿಯಂತ್ರಣ ಸರ್ಕಾರದ ಕೈ ತಪ್ಪಿರೋದ್ರಿಂದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಎನ್.ಆರ್.ಸಿ. ಮತ್ತು ಸಿ.ಎ.ಬಿ.ಯಿಂದ ಒಳ್ಳೇದಾಗೋದಿದ್ರೆ ಜನತೆ ಮುಂದೆ ಬಂದು ಹೇಳಲಿ. ಈ ಸಂಬಂಧ ಪ್ರಧಾನಿ ಮೋದಿ ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡಲಿ. ಆದರೆ ತಮಗಿಷ್ಟ ಬಂದ ಕೆಲ ಪತ್ರಕರ್ತರನ್ನು ಮುಂದಿಟ್ಟುಕೊಂಡು ಮಾಧ್ಯಮ ಗೋಷ್ಠಿ ಮಾಡದೆ, ಎಲ್ಲ ಮಾಧ್ಯಮದವರನ್ನೂ ಮುಂದಿಟ್ಟುಕೊಂಡು ಓಪನ್ ಕಾನ್ಫರೆನ್ಸ್ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಚಾಲೆಂಜ್ ಹಾಕಿದ್ದಾರೆ. ಗೃಹ ಸಚಿವ ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಪೌರತ್ವ ವಿರೋಧಿ ಹೋರಾಟದ ವೇಳೆ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಬಿಜೆಪಿಯ ಕೈವಾಡವೂ ಇರಬಹುದೆಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಗಲಭೆ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ಗಲಭೆಗಳು ಹೆಚ್ಚಾಗಿ ನಡೀತಿವೆ. ಮಂಗಳೂರಿನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಸರ್ಕಾರದ ಅಧೀನದಲ್ಲಿರೋ ಸಿಐಡಿಯಿಂದ ಸೂಕ್ತ ತನಿಖೆ ನಡೆಯೋದು ಕಷ್ಟ. ಹೀಗಾಗಿ ನ್ಯಾಯಾಂಗ ತನಿಖೆಯನ್ನೇ ಮಾಡಬೇಕು. ಹೀಗಾದಾಗ ಮಾತ್ರ ಗಲಭೆಗೆ ಕಾರಣವಾದ ನಿಜವಾತ ಸತ್ಯ ಬಯಲಿಗೆ ಬರಲಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights