ಬಾಲ್ಯದ ಕನಸು ನನಸು : ಆ ಹುಡುಗನೇ ನಿರ್ಮಾಣ ಮಾಡಿದ ರೋಮ್ಯಾಂಟಿಕ್ ಸಾಂಗ್ ಸಖತ್ ಹಿಟ್…

ರೋಮಾಂಚನ ನೀನು ಹೆಸರಿನ ಆಲ್ಬಂ ಸಾಂಗ್ ಈಗ ಫುಲ್ ಸದ್ದು ಮಾಡಿದೆ. ಹೌದು.. ಇದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಪನೂರು ಗ್ರಾಮದ ಯುವಕ ವಿಜೇಂದ್ರ ಆರ್ ಹಿರೇಮಠ್ ನಿರ್ಮಿಸಿರುವ ಆಲ್ಬಂ ಸಾಂಗ್.

ಬಾಲ್ಯದಿಂದಲೂ ನಟನೆ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದ ಯುವಕ, ಎಷ್ಟೇ ಪ್ರಯತ್ನಿಸಿದರೂ ಕಿರುತೆರೆ, ಹಿರಿತೆರಯಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ  ದೃತಿಗೆಡದೆ ಸ್ವತಃ ತಾನೇ ಹಾಡಿ ಆಲ್ಬಂ ಗೀತೆ ರಚಿಸಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಸೂಪರ್ ಹಿಟ್ ಆಗಿದೆ. ನೆಟ್ಟಿಗರಿಂದ ಯುವಕನಿಗೆ ಅಭಿನಂದನೆಗಳ ಸುರಿಮಳೆ ಸುರಿದಿದೆ. ಲಹರಿ ಆಡಿಯೊ ಸಂಸ್ಥೆಯಿಂದ ಆಲ್ಬಂ ಹಕ್ಕು ಖರೀದಿ ಮಾಡಲಾಗಿದೆ.

ಬೆಂಗಳೂರು, ಮಂಗಳೂರು ಮೈಸೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಶೂಟ್ ಮಾಡಲಾದ ಆರು ನಿಮಿಷದ ಆಲ್ಬಂ ಸಾಂಗಿಗೆ ಸಾಕಷ್ಟು ಜನರಿಂದ ಲೈಕ್ಸ್, ಜನಮಣ್ಣನೆ ಸಿಕ್ಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights