‘ಬಿಗ್ ಬಾಸ್’ ಸೀಸನ್ 7 ಗ್ರಾಂಡ್ ಓಪನಿಂಗ್ : ಮನೆಯೊಳಗೆ ಪ್ರವೇಶಿಸಿದ 18 ಮಂದಿ ಸ್ಪರ್ಧಿಗಳು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಬಿಗ್ ಬಾಸ್’ ಗ್ರಾಂಡ್ ಓಪನಿಂಗ್ ಆಗಿದೆ. ಕಿಚ್ಚ ಸುದೀಪ್ ಹೋಸ್ಟ್ ಮಾಡಲಿರುವ ‘ಬಿಗ್ ಬಾಸ್’ ಸೀಸನ್ 7 ರಿಯಾಲಿಟಿ ಶೋ ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಭಾನುವಾರ 7ನೇ ಸೀಸನ್ ಆರಂಭವಾಗಿದ್ದು 18 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ.

ನಟ ಕುರಿ ಪ್ರತಾಪ್, ಪತ್ರಕರ್ತ ರವಿಬೆಳಗೆರೆ, ನಟಿಯರಾದ ಪ್ರಿಯಾಂಕಾ, ಚಂದನಾ, ದೀಪಿಕಾ ದಾಸ್, ಭೂಮಿ ಶೆಟ್ಟಿ, ಅಗಡಿ ಮಠದ ಪೀಠಾಧಿಪತಿ ಗುರುಲಿಂಗ ಸ್ವಾಮೀಜಿ, ಚೈತ್ರಾ ವಾಸುದೇವ್, ಶೈನ್ ಶೆಟ್ಟಿ, ರಾಜು ತಾಳಿಕೋಟೆ, ಹರೀಶ್ ರಾಜ್, ಚಂದನ್ ಆಚಾರ್, ಚೈತ್ರಾ ಕೋಟೂರು, ಸುಜಾತಾ, ವಾಸುಕಿ ವೈಭವ್, ಕಿಶನ್ ಈ ಬಾರಿ ಸ್ಪರ್ಧಿಗಳಾಗಿದ್ದಾರೆ. 100 ದಿನ ಶೋ ನಡೆಯಲಿದ್ದು ವಿಜೇತರಿಗೆ 50 ಲಕ್ಷ ರೂ ಬಹುಮಾನ ನೀಡಲಾಗುವುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights