ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ ಸೋಂಕು : ಕೇಂದ್ರಕ್ಕೆ ದೊಡ್ಡ ತಲೆ ನೋವಾದ ಮಹಾಮಾರಿ!

ದಿನೇ ದಿನೇ ದೇಶದಲ್ಲಿ ಕೋವಿಡ್-19ಗೆ ಒಳಗಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದ್ದು ಕೇಂದ್ರ ಸರ್ಕಾರಕ್ಕೆ ಕೆಲ ರಾಜ್ಯಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಹೌದು.. ಭಾರತದಲ್ಲಿ ಕೇವಲ 24 ಗಂಟೆಗಳ ವರದಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಕಳೆದ ಸೋಮವಾರದಿಂದ ಮಂಗಳವಾರದ ವರೆಗೆ 29 ಜನ ಸಾವನ್ನಪ್ಪಿದ್ದು ಕೊರೋನಾಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1,463 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ 10,815 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಮಹಾರಾಷ್ಟ್ರದಲ್ಲಿ ಒಟ್ಟಾರೆಯಾಗಿ 2455 ಪ್ರಕರಣಗಳು ದಾಖಲಾದರೆ, ನಂತರ ದೆಹಲಿಯಲ್ಲಿ 1561 ಕೇಸ್‍ಗಳಿರೋದು ಕೇಂದ್ರ ಸರ್ಕಾರಕ್ಕೆ ಚಿಂತೆಗೀಡು ಮಾಡಿದೆ. ಇನ್ನೂ ತಮಿಳುನಾಡಲ್ಲಿ ಸದ್ಯ 1204 ಕೊರೊನಾ ಪೀಡಿತರಿದ್ದರೆ, ಮಧ್ಯಪ್ರದೇಶದಲ್ಲಿ 741, ಗುಜರಾತ್‍ನಲ್ಲಿ 650 ಕೇಸ್‍ಗಳಿವೆ. ಇಲ್ಲಿ ಚೇತರಿಕೆಗಿಂತ ಪ್ರತಿದಿನ ಸೋಂಕಿಗೆ ಒಳಪಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.ಧಾರಾವಿ ಸ್ಲಂನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದೆ.

ಕೊರೋನಾ ಪಾಸಿಟಿವ್ ಪ್ರಕರಣಗಳ ಪೈಕಿ 76 ಜನ ವಿದೇಶಿ ಪ್ರಜೆಗಳೂ ಇದ್ದು, ಈವರೆಗೆ 1189 ಜನರನ್ನು ಗುಣಪಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ, ಸೋಮವಾರದಿಂದ ಮಂಗಳವಾರ ಸಂಜೆಯವರೆಗೆ ಒಟ್ಟು 29 ಸಾವುಗಳು ದಾಖಲಾಗಿವೆ. ಈ ಪೈಕಿ ಮಹರಾಷ್ಟ್ರದಲ್ಲಿ 11, ಮಧ್ಯಪ್ರದೇಶದಲ್ಲಿ 07, ದೆಹಲಿಯಲ್ಲಿ 04, ಕರ್ನಾಟಕದಲ್ಲಿ 03, ಆಂಧ್ರಪ್ರದೇಶದಲ್ಲಿ 02 ಮತ್ತು ಪಂಜಾಬ್-ತೆಲಂಗಾಣದಲ್ಲಿ ತಲಾ 01 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಹೀಗಾಗಿ ದೇಶದಲ್ಲಿ ಲಾಕ್ ಡೌನ್ ನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು,  ಮೇ 3 ರ ಒಳಗೆ ಲಾಕ್ ಡೌನ್ ಸಡಿಲಗೊಳಿಸುವ ಯಾವುದೇ ಕುರುಹುಗಳು ಕಾಣ ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕು ವೇಗವಾಗಿ ಹರಡುತ್ತಿರುವುದರ ಆತಂಕ ದೇಶದ ಜನರಲ್ಲಿ ಮನೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights