ಬೆಂಗಳೂರಿನ ಪೊಲೀಸರಿಗೆ ಲಾಠಿ ಇಲ್ಲದೆ ಕೆಲಸ ಮಾಡಲು ಸೂಚಿಸಿದ ಭಾಸ್ಕರ್ ರಾವ್!

ಕೊರೊನಾ ತಡೆಗೆ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಮನೆಯಲ್ಲೇ ಇರತುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಆದರೆ ನಿಯಮವನ್ನು ಉಲ್ಲಂಘಿಸಿ ಜನ ಸುಖಾ ಸುಮ್ಮನೆ ಬೀದಿಗಿಳಿಯುತ್ತಿದ್ದಾರೆ. ಇಂತಹ ಪುಂಡರಿಗೆ ಲಾಠಿ ಪ್ರಹಾರ ಮಾಡಲಾಗುತ್ತಿತ್ತು. ಆದರೆ ಇಂದು ಲಾಠಿ ಬಳಕೆ ಮಾಡಬೇಡಿ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಲಾಠಿ ಹಿಡಿದು ಪೊಲೀಸರು ಕೆಲಸ ಮಾಡಿದರೆ ಜನ ಮಾತು ಕೇಳೋದು ಕಷ್ಟ ಇದೆ. ಇನ್ನೂ ಪುಂಡಪೋಕರಿಗಳು ಪೊಲೀಸರ ಮಾತು ಕೇಳಬೇಕು ಅಂದ್ರೆ ಲಾಠಿ ಇರಬೇಕು ಅನ್ನೋದು ಮೊನ್ನೆ ಪೊಲೀಸರ ಮೇಲೆ ಆದ ಹಲ್ಲೆನೇ ಸಾಕ್ಷಿ. ಹೀಗಿರಬೇಕಾದ್ರೆ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಪೊಲೀಸರಿಗೆ ಇಂದು ಲಾಠಿ ಇಲ್ಲದೇ ಕೆಲಸಕ್ಕೆ ಹಾಜರಾಗಲು ತಿಳಿಸಿದ್ದಾರೆ.

ಹೌದು… ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿರುವ ಫೋಟೋಗಳನ್ನು ಅಧಿಕವಾಗಿ ಹರದಾಡುತ್ತಿವೆ. ಜನರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳ ಖರೀದಿಗೂ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಾರ್ವಜನಿಕರ ಮೇಲಿನ ಲಾಠಿ ಪ್ರಹಾರದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದು, ಇದನ್ನ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಇವತ್ತು ಪೊಲೀಸರಿಗೆ ಲಾಠಿ ಪ್ರಯೋಗ ಮಾಡುವುದನ್ನ ತಡೆಯಲಾಗಿದೆ. ಜೊತೆಗೆ ಮಾತು ಕೇಳದವರನ್ನ ಠಾಣೆಗೆ ಕರೆದುಕೊಂಡು ಬನ್ನಿ, ಆದಷ್ಟು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ”. ಎಂದಿದ್ದಾರೆ.

ಇದರಿಂದ ಪೊಲೀಸರು ಲಾಠಿ ಪ್ರಯೋಗ ಮಾಡಿಲ್ಲ ಎಂದರೆ ಜನ ಮಾತು ಕೇಳೋದಿಲ್ಲ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಬಾಸ್ಕರ್ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಜನರಿಗೆ ಸ್ವತ: ಅರ್ಥ ಮಾಡಿಕೊಳ್ಳಬೇಕು. ಲಾಠಿಯಿಂದ ಹೊಡೆದು ಬುದ್ಧಿ ಹೇಳಲು ಸಾಧ್ಯವಿಲ್ಲ ಎನ್ನುವ ಅಭಿಪ್ರಯಾ ವ್ಯಕ್ತಪಡಿಸಿದ್ಧಾರೆ.

ಒಟ್ಟಿನಲ್ಲಿ ಇವತ್ತು ಒಂದು ದಿನ ಲಾಠಿ ಬಳಕೆ ಮಾಡಲಾಗುತ್ತಿಲ್ಲ. ಇದು ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights