ಮಂಡ್ಯದ ನೂತನ ಬಿಜೆಪಿ ಸರ್ಕಾರದಿಂದ ಸಭೆ : ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ

ಮಂಡ್ಯರಾಜ್ಯದಲ್ಲಿ ಮೈತ್ರಿ‌ ಸರ್ಕಾರ ಪತನದ ಬಳಿಕ ಸಕ್ಕರೆನಾಡು ಮಂಡ್ಯದಲ್ಲಿ ನೂತನ ಬಿಜೆಪಿ ಸರ್ಕಾರದಿಂದ ಮಂಡ್ಯ ಜಿ.ಪಂ.‌ನ ಮೊದಲ ಕೆಡಿಪಿ ಸಭೆ ನಡೆಯಿತು.

ನಿನ್ನೆ ಜಿಲ್ಲಾ ಉಸ್ತುವಾರಿ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಕುರಿತು ಮತ್ತು ಅಭಿವೃದ್ದಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ ಪರಿಷತ್ ಸದಸ್ಯರು ಭಾಗಿಯಾಗಿ ಜಿಲ್ಲೆಯ ಸಮಸ್ಯೆಗಳ ಬಗೆ ಗಮನ ಸೆಳೆದ್ರು.

ಹೌದು! ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿ.ಪಂ.ನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ಆರಂಭವಾಯಿತು. ಸಭೆಯಲ್ಲಿ ಮೊದಲಗೆ ಕೃಷಿಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯ್ತು. ಬಳಿಕ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ರು. ಅದ್ರಲ್ಲಿ ಮುಖ್ಯವಾಗಿ ಜಿಲ್ಲೆಯ ರೈತರ ಕಬ್ಬು ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಜಿಲ್ಲೆಯ ಎರಡು ಪ್ರಮುಖ ಸಕ್ಕರೆ ಕಾರ್ಖಾನೆಗಳ ಮುಚ್ಚಿರೋದ್ರಿಂದ ಆಗ್ತಿರೋ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲೆಯ ರೈತರ ಸಮಸ್ಯೆ ಮನಗಂಡಯ ಸರ್ಕಾರ ಈ ಎರಡು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿ ಆರಂಭಿಸುವ ಬಗ್ಗೆ ಮಾತನಾಡಿದ್ರು.

ಇನ್ನು ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಮಾತನಾಡಿ ಗಮನ ಸೆಳೆದ್ರು. ಅಲ್ದೆ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿದ್ರು. ಇದಕ್ಕೆ‌ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಕೂಡ ದನಿಗೂಡಿಸಿ ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ನನ್ನ ಗಮನಕ್ಕೂ ಬಂದಿದೆ.ಅಲ್ದೆ ಸರ್ಕಾರಕ್ಕೂ ಅಲ್ಲಿನ ಸ್ಥಳೀಯ ರೈತರು ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ವರದಿಕೊಡಿ ಎಂದು ಗಣಿ ಅಧಿಕಾರಿಗಳಿಗೆ ಸೂಚಿಸಿದ್ರು. ಅಲ್ದೆ ಸರ್ಕಾರ ಕೆ.ಆರ್.ಎಸ್. ಹಿತ ದೃಷ್ಟಿಯಿಂದ ಸಲ್ಲಿ ಗಣಿಗಾರಿಕೆ ನಿಷೇಧಿಸಲು ಬದ್ದವಾಗಿದೆ. ವರದಿ ನೋಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ರು.

ಬಳಿಕ ಮಂಡ್ಯದಲ್ಲೂ ಪೌರತ್ವ ಕಾಯ್ದೆಗೆ ಮುಸ್ಲಿಂರ ವಿರೋಧ ಹಿನ್ನಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿ ಪೌರತ್ವ ಮತ್ತು NRC ಕಾಯ್ದೆಯ ಬಗ್ಗೆ ಅರಿವು ಮೂಡಿಸಿದ್ರು. ಈ ಕಾಯ್ದೆಗೆ ಕಾಂಗ್ರೆಸ್ ವಿರೋಧ ಮಾಡ್ತಿರೋದು ಕುತಂತ್ರ ರಾಜಕೀಯಕ್ಕಾಗಿ. ಇದ್ರಿಂದ ಇಲ್ಲಿರುವ ಯಾವುದೇ ಮುಸ್ಲಿಂರಿಗೆ ತೊಂದರೆಯಾಗಲ್ಲ ನಿಮ್ಮೊಂದಿಗೆ ನಾವಿದ್ದೇವೆಂದು ಭರವಸೆ ನೀಡಿ ಕೆಲವರಿಗಾಗಿ ಈ ಕಾಯ್ದೆ ಬದಲಾಯಿಸಲ್ಲ‌ ಎಂದರು

ಒಟ್ನಲ್ಲಿ ನೂತನ ಬಿಜೆಪಿ ಸರ್ಕಾರ ಬಂದ ನಂತರ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದ್ದಂತೆ ಮೊದಲ ಬಾರಿಗೆ ಜಿ.ಪಂ.ನ ಕೆಡಿಪಿ ಸಭೆ ನಡೆದಿದ್ದು,ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಹೊಸ ಹೊಸ ಅಭಿವೃದ್ದಿ ಕಾರ್ಯಕ್ರಮಗಳು ಜಾರಿ ಮತ್ತು ಸರ್ವಾಂಗೀಣ ಅಭಿವೃದ್ದಿ ಸರ್ಕಾರ ಬದ್ದವಾಗಿದೆ ಎಂದು ಜಿಲ್ಲೆ ಜನರಿಗೆ ಸಚಿವ ಅಶೋಕ್ ಭರವಸೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights