ಮತ್ತೆ ಕೆಬಿಸಿ : ಬಿಗ್ ಬಿ ಮನೆಯಲ್ಲಿ ಪ್ರೊಮೊ ಶೂಟ್ : ಡಿಜಿಟಲೀಕರಣದ ಮೂಲಕ ಸ್ಪರ್ಧಿಗಳ ಆಯ್ಕೆ..

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮದ ಕೌನ್​ ಬನೇಗ ಕರೋಡ್​ ಪತಿ. ಇದನ್ನು ಚಿಕ್ಕದಾಗಿ ಕೆಬಿಸಿ ಎಂದು ಕರೆಯಲಾಗುತ್ತದೆ. ಸದ್ಯ ಈ ಶೋನ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಆರಂಭಗೊಂಡಿದೆ.

ಹೌದು..  ಚಿಕ್ಕಮಕ್ಕಳಿಂದ ವಯಸ್ಸಾದವರೆವರೆಗೂ ಮೆಚ್ಚಿ ನೋಡುವ ‘ಕೌನ್ ಬನೇಗ ಕರೋಡ್ ಪತಿ’ ಶೋನ ಸ್ಪರ್ಧಿಗಳ ಆಯ್ಕೆ ಆಂರಭಗೊಂಡಿದೆ. ಕೊರೊನಾ ಲಾಕ್ ಡೌನ್ ನಡುವೆಯೂ ಹಿಂದಿಯ ಜನಪ್ರಿಯ ಗೇಮ್ ಶೋನ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ವಾಹಿನಿ ಸಂಪೂರ್ಣವಾಗಿ ಡಿಜಿಟಲೀಕರಣ ಮೂಲಕ ನಡೆಸಲಿದೆ.

ನಿರೂಪಕ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ 12ನೇ ಸೀಸನ್ ನ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಸೋನಿ ಎಂಟರ್ಟೈನ್ ಮೆಂಟ್ ಟೆಲಿವಿಷನ್ ನಲ್ಲಿ ಮೇ 9ರಿಂದ ಮೇ 22ರವರೆಗೆ  ಸ್ಪರ್ಧಿಗಳ ದಾಖಲಾತಿ ನಡೆಯಲಿದೆ. ಪ್ರತಿದಿನ ರಾತ್ರಿ ಅಮಿತಾಬ್ ಬಚ್ಚನ್ ಅವರು ಸೋನಿ ಟಿವಿಯಲ್ಲಿ ಪ್ರಶ್ನೆಗಳನ್ನು ಕೇಳಲಿದ್ದು ವೀಕ್ಷಕರು ಎಸ್ ಎಂಎಸ್ ಅಥವಾ ಸೋನಿ ಲೈವ್ ಮೂಲಕ ಉತ್ತರಿಸಲಿದ್ದಾರೆ.

ಕೆಬಿಸಿ ಕಾರ್ಯಕ್ರಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಚಿತ್ರೀಕರಣ ಡಿಜಿಟಲೀಕರಣ ಮೂಲಕ ನಡೆಯಲಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದವರನ್ನು ಎರಡನೇ ಹಂತದಲ್ಲಿ ಟೆಲಿಫೋನ್ ಮೂಲಕ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದ ಪ್ರಕ್ರಿಯೆ ಆನ್ ಲೈನ್ ಆಡಿಷನ್ ಮೂಲಕ ನಡೆಯಲಿದೆ. ಅಂತಿಮ ಸುತ್ತು ವೈಯಕ್ತಿಕ ಸಂದರ್ಶನವಾಗಿರಲಿದೆ, ಅದನ್ನು ವಿಡಿಯೊ ಕಾಲ್ ಮೂಲಕ ನಡೆಸಲಾಗುತ್ತದೆ.ಇಡೀ ಆಯ್ಕೆ ಪ್ರಕ್ರಿಯೆಯನ್ನು ಸ್ವತಂತ್ರ ಆಡಿಟ್ ಕೇಂದ್ರ ತಪಾಸಣೆ ಮಾಡಲಿದೆ ಎಂದು ಸೋನಿ ಟಿವಿ ಬ್ಯುಸಿನೆಸ್ ಹೆಡ್ ಅಮಿತ್ ರೈಸಿಂಘಾನಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights