ಮಾಜಿ ಪ್ರಧಾನಿಗಳ ಹುಟ್ಟೂರಿನಲ್ಲಿ ಜಿಲ್ಲಾಧಿಕಾರಿಗಳ ಕಂಟಕ ಇದಿಯಾ..?

ಯಾವುದೇ ಅಧಿಕಾರಿಗೆ ಒಂದು ಕಡೆ ಕನಿಷ್ಟ ಎರಡು ವರ್ಷ ಸೇವೆ ಸಲ್ಲಿಸಲು ಅವಕಾಶ ಇರುತ್ತೆ.. ಆದ್ರೆ ಒಂದು ವರ್ಷದ ಅವಧಿಯಲ್ಲಿ ಹಾಸನಕ್ಕೆ ಆರು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದಾರೆ. ಆದರೆ ರಾಜಕೀಯ ಮೇಲಾಟಕ್ಕೆ ಅಧಿಕಾರಿಗಳು ಬಲಿ ಪಶು ಆಗುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಯೂ ಕುಂಠಿತ ಆಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿಗಳ ಹುಟ್ಟೂರಿನಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚು ದಿನ ಸೇವೆ ಸಲ್ಲಿಸಲಾಗದೇ ಡಿಸಿಗಳಿಗೆ ಉಳಿಗಾಲವೇ ಇಲ್ಲದಂತಾಗಿದೆ.

ಹೌದು…  ಹಾಸನಕ್ಕೆ ಜಿಲ್ಲಾಧಿಕಾರಿಗಳ ಕಂಟಕ ಇದೆ ಅನಿಸುತ್ತೆ ಹಾಗಾಗಿಯೇ ಕಳೆದ ಎರಡು ವರ್ಷಗಳಿಂದ ಬಂದ ಯಾವುದೇ ಜಿಲ್ಲಾಧಿಕಾರಿಗಳು ತಮ್ಮ ಸೇವೆಯ ಅವಧಿಯನ್ನು ಪೂರೈಸಿಲ್ಲ.. ರಾಜಕೀಯ ಮೇಲಾಟಕ್ಕೆ ಒಂದೇ ವರ್ಷದ ಅವಧಿಯಲ್ಲಿ ಆರು ಡಿಸಿ ಗಳು ಬದಲಾವಣೆ ಆಗಿದ್ದು, ಜಿಲ್ಲೆಯ ಅಭಿವೃದ್ಧಿ ಮೇಲೆ ವರ್ಗಾವಣೆ ಪರಿಣಾಮ ಬಿರುತ್ತೆ ಎಂಬುವುದು ಸಾರ್ವಜನಿಕರ ಆಕ್ರೋಶವಾಗಿದೆ. ಇನ್ನೂ ಕಳೆದ ಪ್ರಬ್ರವರಿ ಯಲ್ಲಿ ಬಂದಿದ್ದ ಐಎಎಸ್ ಅಧಿಕಾರಿ ಅಕ್ರಂ ಪಾಷಾ ಆರು ತಿಂಗಳು ಕಳೆಯುವ ಅಂತರದಲ್ಲಿ ವರ್ಗಾವಣೆ ಆಗಿದ್ದಾರೆ.. ನೂತನ ಡಿಸಿ ಆಗಿ ಆರ್ ಗಿರೀಶ್ ರಾಜ್ಯ ಸರ್ಕಾರ ನೇಮಕ ಮಾಡಿದ್ದು, ವರ್ಗಾವಣೆ ಗೊಂಡ ಅಕ್ರಂ ಪಾಷಾ ನೂತನ ಜಿಲ್ಲಾಧಿಕಾರಿ ಗಿರೀಶ್ ಗೆ ಅಧಿಕಾರ ಹಸ್ತಾಂತರ ಮಾಡಿದ್ರು.. ಒಂದೇ ವರ್ಷದ ಅವಧಿಯಲ್ಲಿ ಆರನೇ ಡಿಸಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಗಿರೀಶ್, ಜಿಲ್ಲೆಯ ಅಭಿವೃದ್ಧಿ ಗೆ ಒತ್ತು ನೀಡುವುದಾಗಿ ತಿಳಿಸಿದರು.

ರಾಜಕೀಯ ಕಾರಣಕ್ಕೆ 2018 ಏಪ್ರಿಲ್ ನಿಂದ ಇಲ್ಲಿಯವರೆಗೆ ಹಾಸನಕ್ಕೆ ಆರು ಜಿಲ್ಲಾಧಿಕಾರಿಗಳು ವರ್ಗಾವಣೆ ಆಗಿದ್ದು, ರಂದೀಪ್, ಪಿವಿ ಜಾಫರ್, ರೋಹಿಣಿ ಸಿಂಧೂರಿ, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಕ್ರಂ ಪಾಷಾ ಅಲ್ಪಾವಧಿಗೆ ಸೇವೆ ಸಲ್ಲಿಸಿ ವರ್ಗಾವಣೆ ಆಗಿದ್ದಾರೆ.. ಸರ್ಕಾರ ಬದಲಾದಂತೆ ಅವಧಿ ಮುಗಿಯದಿದ್ದರೋ ರಾಜಕೀಯ ಅನೂಕೂಲಕ್ಕೆ ಡಿಸಿ ಗಳ ವರ್ಗಾವಣೆ ಮಾಡುತ್ತಿದ್ದು, ಸದ್ಯ ಸರ್ಕಾರ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಇನ್ನೂ ಗ್ರಾಮ ವಾಸ್ತವ್ಯ, ನೆರೆ ಪ್ರವಾಹ ನಿರ್ವಹಣೆ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಜನಪರ ಕೆಲ್ಸ ಮಾಡಿದ್ದ ಅಕ್ರಂ ಪಾಷಾ ವರ್ಗಾವಣೆಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಮರು ನೇಮಕಕ್ಕೆ ಒತ್ತಾಯ ಮಾಡಿದೆ.

ಒಟ್ಟಾರೆ ರಾಜಕೀಯ ಕಾರಣಕ್ಕೆ ಹಾಸನದಲ್ಲಿ ಡಿಸಿ ಆಗಿ ಬರುವ ಅಧಿಕಾರಿಗಳು ಪೆಚ್ಚಿಗೆ ಸಿಲುಕುತ್ತಿದ್ದು, ಮೂರ್ನಾಲ್ಕು ತಿಂಗಳಿಗೆ ಡಿಸಿ ಗಳ ವರ್ಗಾವಣೆ ಮಾಡಿದ್ರೆ ಜಿಲ್ಲೆಯ ಅಭಿವೃದ್ಧಿ ಹೆಂಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಡಿಸಿಗಳ ವರ್ಗಾವಣೆಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights